ಚೈತ್ರಾ ಕುಂದಾಪುರ ವಿರುದ್ಧದ ಕೇಸ್​! ಶಿವಮೊಗ್ಗದಲ್ಲಿಯು ಪೊಲೀಸ್ ಸ್ಥಳ ಮಹಜರ್​ ! ಪ್ರಮುಖ ಕಚೇರಿ ಬಳಿ ಆರೋಪಿಗಳ ಹಾಜರ್ ಸಾಧ್ಯತೆ

In the case against Chaitra Kundapur, the police investigation team is likely to conduct a maharjar near the main office in Shimoga.ಚೈತ್ರಾ ಕುಂದಾಪುರ ವಿರುದ್ದದ ಕೇಸ್​ನಲ್ಲಿ ಶಿವಮೊಗ್ಗದ ಪ್ರಮುಖ ಕಚೇರಿ ಬಳಿಯಲ್ಲಿ ಪೊಲೀಸ್ ತನಿಖಾ ತಂಡ ಸ್ಥಳ ಮಹಜರ್​ ನಡೆಸುವ ಸಾಧ್ಯತೆ ಇದೆ

ಚೈತ್ರಾ ಕುಂದಾಪುರ ವಿರುದ್ಧದ ಕೇಸ್​! ಶಿವಮೊಗ್ಗದಲ್ಲಿಯು ಪೊಲೀಸ್ ಸ್ಥಳ ಮಹಜರ್​ ! ಪ್ರಮುಖ ಕಚೇರಿ ಬಳಿ ಆರೋಪಿಗಳ ಹಾಜರ್ ಸಾಧ್ಯತೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಮಹಜರ್​ ನಡೆಸಲು ಚೈತ್ರಾ ಕುಂದಾಪುರ ಹಾಗೂ ಅವರ ಟೀಂನ್ನ ಕರೆದುಕೊಂಡು ಬಂದಿರುವ ಪೊಲೀಸ್ ತನಿಖಾ ತಂಡ. ಆ ಟೀಂನ್ನ ಶಿವಮೊಗ್ಗಕ್ಕೂ ಕರೆತರುವ ಸಾಧ್ಯತೆ ದಟ್ಟವಾಗಿದೆ. ಶಿವಮೊಗ್ಗ ನಗರದ ಪ್ರಮುಖ ಕಚೇರಿಯೊಂದರ ಬಳಿಕೆ ಬಂಧಿತ ಟೀಂ ಅಥವಾ ಶಿವಮೊಗ್ಗದಲ್ಲಿ ನಡೆದ ಕೃತ್ಯದ ಭಾಗವೊಂದಕ್ಕೆ ಸಂಬಂಧಿಸಿದ ಆರೋಪಿಯನ್ನು ಸ್ಥಳ ಮಹಜರ್​ಗೆ ಕರೆತರಲು ತನಿಖಾ ತಂಡ ಮುಂದಾಗಿದೆ. 

ಈ ಬಗ್ಗೆ ಮಲೆನಾಡು ಟುಡೆ ತಂಡ ಈ ಮೊದಲು ವರದಿ ಮಾಡಿತ್ತು.  ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರ ಕುಂದಾಪುರ   (chaitra kundapura case) ಹಾಗೂ ಆಕೆಯ ಟೀಂ ತನ್ನ ವಹಿವಾಟನ್ನು ಶಿವಮೊಗ್ಗದಲ್ಲಿ ನಡೆಸಿತ್ತು ಎಂಬುದನ್ನ ಎಫ್​ಐಆರ್​ ನಲ್ಲಿ ಉಲ್ಲೇಖಿಸಲಾಗಿತ್ತು.ದೂರುದಾರ ಗೋವಿಂದ್ ಪೂಜಾರಿ ಸಲ್ಲಿಸಿದ ಕಂಪ್ಲೆಂಟ್ ಆಧಾರವಾಗಿ ದಾಖಲಾದ FIR  ಪ್ರಕಾರ, ಚೈತ್ರ ಕುಂದಾಪುರ ಟೀಂ ಶಿವಮೊಗ್ಗದ ಕಚೇರಿಯ ಎದುರು ಹಣವನ್ನ ಸಂದಾಯ ಮಾಡಿಕೊಂಡಿತ್ತು .. 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲಿ ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುತ್ತೇನೆ ಎಂದು  ಚೈತ್ರಾ ಕುಂದಾಪುರ ಹೇಳಿದ್ದು, ಅದರಂತೆ  ಚಿಕ್ಕಮಗಳೂರಿಗೆ ಗೋವಿಂದ ಪೂಜಾರಿಯನ್ನ ಕರೆಸಿಕೊಂಡಿದ್ದರು. ಆನಂತರ ಗಗನ್ ಕಡೂರು,  ವಿಶ್ವನಾಥ್ ಜಿ ಎಂಬವರನ್ನ ಪರಿಚಯ ಮಾಡಿಸಿದ್ದ ಚೈತ್ರಾ ಕುಂದಾಪುರ,  ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿ, ಟಿಕೆಟ್ ಸಿಗದಿದ್ದರೇ ಹಣ ವಾಪಸ್ ನೀಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.  ಎಂದು ಹೇಳಿರುವರು, ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ, ರೂ.50,00,000 (ಐವತ್ತು ಲಕ್ಷ)   ನೀಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. 

ಈ ಹಣವನ್ನು ಶಿವಮೊಗ್ಗದಲ್ಲಿ ಪ್ರಮುಖ ಕಚೇರಿಯೊಂದರ ಎದುರುಗಡೆ, ಗಗನ್ ಕಡೂರ್​ಗೆ ನೀಡಿರುವುದಾಗಿ ಎಫ್ಐಆರ್​ ನಲ್ಲಿ ಉಲ್ಲೇಖಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಮಾತುಕತೆ ನಡೆದು, ಅದರಂತೆ ಶಿವಮೊಗ್ಗದಲ್ಲಿ ಗೋವಿಂದ್ ಪೂಜಾರಿ ಹಣ ನೀಡಿದ್ದಾರೆ. ಇದನ್ನ ಪಡೆದುಕೊಂಡು ಚೈತ್ರ ಕುಂದಾಪುರ, ವಿಶ್ವನಾಥ್ ಜಿ ಮತ್ತು ಗಗನ್​ ಕಡೂರು, ಟಿಕೆಟ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದರಂತೆ. ಆನಂತರ ಮತ್ತಷ್ಟು ಹಣವನ್ನು ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಶಿವಮೊಗ್ಗದಲ್ಲಿಯು ವಂಚನೆ ವಹಿವಾಟು ನಡೆಸಿರುವ ಆರೋಪ ಇರುವುದರಿಂದ ಪೊಲೀಸರು ತನಿಖಾ ದೃಷ್ಟಿಯಿಂದ ಆರೋಪಿಗಳನ್ನು ಶಿವಮೊಗ್ಗಕ್ಕೆ ಇಂದು ಕರೆತರಲಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. 


ಇನ್ನಷ್ಟು ಸುದ್ದಿಗಳು