ರಾಗಿಗುಡ್ಡದಲ್ಲಿ ಸಾರ್ವಜನಿಕರೊಂದಿಗೆ ಎಸ್​ಪಿ ಸಭೆ ! ಆರು ಸೂಚನೆಗಳನ್ನು ನೀಡಿದ ಶಿವಮೊಗ್ಗ ಜಿ.ಕೆ. ಮಿಥುನ್ ಕುಮಾರ್ ಐಪಿಎಸ್​ !

In the background of Ganeshotsav and Eid Milad, SP Mithun Kumar held a meeting in Ragigudda and gave instructions.ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಎಸ್​ಪಿ ಮಿಥುನ್ ಕುಮಾರ್ ರಾಗಿಗುಡ್ಡದಲ್ಲಿ ಸಭೆ ನಡೆಸಿ ಸೂಚನೆ ನೀಡಿದರು

ರಾಗಿಗುಡ್ಡದಲ್ಲಿ ಸಾರ್ವಜನಿಕರೊಂದಿಗೆ ಎಸ್​ಪಿ  ಸಭೆ ! ಆರು ಸೂಚನೆಗಳನ್ನು ನೀಡಿದ ಶಿವಮೊಗ್ಗ  ಜಿ.ಕೆ. ಮಿಥುನ್ ಕುಮಾರ್ ಐಪಿಎಸ್​ !

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

 

ಮುಂಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ, ರಾಗಿಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ  ಹಬ್ಬದ ಸಂಘಟನಾ ಕಮಿಟಿಯವರು, ಮುಖಂಡರು ಮತ್ತು ಸಾರ್ವಜನಿಕರ ಸಭೆಯನ್ನು ನಡೆಸಿ ಮಿಥುನ್ ಆರು ಮುಖ್ಯ ಸೂಚನೆಗಳನ್ನ ನೀಡಿದ್ದಾರೆ. 

1) ಎಲ್ಲಾ ಹಬ್ಬಗಳೂ ಅದರದೇ ಆದ ಹಿನ್ನೆಲೆ ಮತ್ತು ಮಹತ್ವವನ್ನು ಹೊಂದಿದ್ದು, ಹಬ್ಬದ ಆಚರಣೆಯಲ್ಲಿ ಹಿರಿಯರ ಮಾರ್ಗದರ್ಶನ ಮುಖ್ಯವಾಗಿರುತ್ತದೆ. ಹಬ್ಬದ ಆಚರಣೆಗೆ ಸಂಬಂದಿಸಿದಂತೆ ಹಿರಿಯರು ಮತ್ತು ಮುಖಂಡರುಗಳು ಕಾನೂನಿನ ವ್ಯಾಪ್ತಿಯೊಳಗೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಪೊಲೀಸ್ ಇಲಾಖೆಯಿಂದ ಯಾವುದೇ ಹಸ್ತಕ್ಷೇಪವಿರುವುದಿಲ್ಲ ಮತ್ತು ಹಬ್ಬವನ್ನು ಉತ್ಸಾಹದಿಂದ ಆಚರಣೆ ಮಾಡಲು ಪೊಲೀಸ್ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ.

2) ಕೆಲವರು ಉಂಟು ಮಾಡುವ  ಸಮಸ್ಯೆಗಳಿಂದಾಗಿ ವಿನಾಕಾರಣ ಉಳಿದವರು ತೊಂದರೆಯನ್ನು ಅನುಭವಿಸುವಂತಾಗುತ್ತದೆ ಮತ್ತು ನೇರವಾಗಿ ಶ್ರಮಿಕ ವರ್ಗದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. 

3) ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಸಮಾಜ ಘಾತುಕ / ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಪೊಲೀಸ್ ಇಲಾಖೆಯು ತೀವ್ರ ನಿಗಾವಹಿಸುತ್ತಿದ್ದು, ಯಾವುದೇ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ  ಮಾಹಿತಿ ನೀಡಿ ಸಹಕರಿಸಿ.    

4) ಹಬ್ಬವನ್ನು ಕುಟುಂಬ ಸಮೇತರಾಗಿ ಯಾವುದೇ ಭಯವಿಲ್ಲದೇ, ನಿರ್ಭೀತಿಯಿಂದ ಭಾಗವಹಿಸುವಂತಹ ವಾತಾವರಣವನ್ನು ಸೃಷ್ಠಿ ಮಾಡಿ, ಎಲ್ಲರೂ *ಹಬ್ಬವನ್ನು ಉತ್ಸಾಹದಿಂದ ಆಚರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿರುತ್ತದೆ.

5) ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆಯುವ ಕೆಲಸವನ್ನು ಸರಳಗೊಳಿಸುವ ಉದ್ದೇಶದಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ (Single Window) ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. 

6) ಸಾರ್ವಜನಿಕರ ಹಿತದೃಷ್ಠಿಯಿಂದ ಎಲ್ಲರೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು, ಇದರಿಂದ ಯಾವುದೇ ಘಟನೆಗಳನ್ನು ಜರುಗುವುದನ್ನು ತಡೆಯಲು ಮತ್ತು ಶೀಘ್ರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ.

ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಪೊಲೀಸ್ ಇಲಾಖೆಯು ಸಧಾ ಸಿದ್ದವಿದ್ದು, ಎಲ್ಲರೂ ನಿರ್ಭೀತಿಯಿಂದ ಮತ್ತು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸೋಣ ಎಂದು ಕರೆ ನೀಡಿದ್ಧಾರೆ. ಈ ಸಭೆಯಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ,  ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಅಭಯ್ ಪ್ರಕಾಶ ಸೋಮನಾಳ್, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.



ಇನ್ನಷ್ಟು ಸುದ್ದಿಗಳು