ಮಾಜಿ ಸಿಎಂ ಸಿದ್ದರಾಮಯ್ಯ ಶಿಕಾರಿಪುರದಿಂದ ಸ್ಪರ್ಧಿಸಿದರೆ, ಹತ್ತು ಅರ್ಜಿ ವಾಪಸ್! ಪ್ರಚಂಡ ಬಹುಮತದಿಂದ ಗೆಲುವು

If former CM Siddaramaiah contests from Shikaripura, 10 applications will be withdrawn. Won by a thumping majority

ಮಾಜಿ ಸಿಎಂ ಸಿದ್ದರಾಮಯ್ಯ ಶಿಕಾರಿಪುರದಿಂದ ಸ್ಪರ್ಧಿಸಿದರೆ, ಹತ್ತು ಅರ್ಜಿ ವಾಪಸ್! ಪ್ರಚಂಡ ಬಹುಮತದಿಂದ ಗೆಲುವು

MALENADUTODAY.COM  |SHIVAMOGGA| #KANNADANEWSWEB

ಮಾಜಿ ಸಿಎಂ ಸಿದ್ದರಾಮಯ್ಯರವರು ಶಿಕಾರಿಪುರ ಕ್ಷೇತ್ರದಲ್ಲಿ ಬಂದು ಸ್ಪರ್ದಿಸಿದರೇ, ಶಿಕಾರಿಪುರ ಕ್ಷೇತ್ರದಿಂದ ಟಿಕೆಟ್ ಬಯಸಿದ ಹತ್ತು ಜನರ ಅರ್ಜಿಯನ್ನು ವಾಪಸ್ ಪಡೆಯುತ್ತೇವೆ. ಹಾಗೆಯೇ ಪ್ರಚಂಡ ಬಹುಮತದಿಂದ ಅವರನ್ನು ಗೆಲ್ಲಿಸುತ್ತೇವೆ ಅಂತಾ ಶಿಕಾರಿಪುರ ಪುರಸಭಾ ಸದಸ್ಯ ನಾಗರಾಜ್ ಗೌಡ ಹೇಳಿದ್ದಾರೆ. 

ಮಧುಬಂಗಾರಪ್ಪರವರ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಶಿಕಾರಿಪುರ ಕ್ಷೇತ್ರಕ್ಕೆ ಸನ್ಮಾನ್ಯ ಸಿದ್ದರಾಮಯ್ಯ ಅವರು ಚುನಾವಣೆಗೆ ಬಂದು ನಿಂತರೆ ನಾವು ಹತ್ತು ಜನ ಆಕಾಂಕ್ಷಿಗಳು ಅರ್ಜಿಯನ್ನು ವಾಪಸ್ ಪಡೆದು ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತೇವೆ ಎಂದ ಅವರು 40 ವರ್ಷಗಳ ಕಾಲ ಸ್ವಾರ್ಥ ರಾಜಕಾರಣ ಮಾಡಿರುವ ಬಿಎಸ್ ವೈ ಕುಟುಂಬದ ರಾಜಕಾರಣಕ್ಕೆ ಮುಕ್ತಿ ದೊರಕಿಸಬೇಕು ಎಂದರು. 

READ | ರಾಗಿಗುಡ್ಡದ ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ! ಕಿಡಿಗೇಡಿಗಳ ಕೃತ್ಯ! ಕೇಸ್ ದಾಖಲು

ಮಾಜಿ ಎಂ.ಎಲ್‌.ಸಿ ಪ್ರಸನ್ನ ಕುಮಾರ್ ಮಾತನಾಡಿ ಈ ಬಾರಿ ಜಿಲ್ಲೆಯ ಏಳು ಕ್ಷೇತ್ರಗಳು ಕಾಂಗ್ರೆಸ್ ಪರವಾಗಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ನೂರರಷ್ಟು ಬರುವುದು ಸತ್ಯ ಎಂದರು. 

ಮಾಜಿ ವಿಧಾನಸಭಾ ಸದಸ್ಯ ಶಾಂತವೀರಪ್ಪ ಗೌಡರು ಮಾತನಾಡಿ ನಾನು ಕಳೆದ 40 ವರ್ಷಗಳಿಂದ ಬಂಗಾರಪ್ಪನವರ ನಿಸ್ವಾರ್ಥ ರಾಜಕಾರಣ ನೋಡಿಕೊಂಡು ಬಂದಿದ್ದೇನೆ ಆದರೆ ನಂತರದ ಬಿಜೆಪಿಯ ಭ್ರಷ್ಟ ವ್ಯವಸ್ಥೆಯಿಂದ ಅವರು ಸೋಲ ಬೇಕಾಯಿತೆ ಹೊರತು ಜನರ ಮನಸ್ಸಿನಲ್ಲಿ ಎಂದೆಂದಿಗೂ ಗೆಲುವಿನ ಸರದಾರರಾಗಿ ನೆಲೆಸಿದ್ದಾರೆ ಎಂದರು.   

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ ಬಿ.ಜೆ.ಪಿ ಕುಟುಂಬ ರಾಜಕಾರಣ ಬಿಟ್ಟು ಬಿ.ಜೆ.ಪಿ ಯ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು ಆದರೆ ಆ ಸಂಸ್ಕೃತಿ ಅವರಲ್ಲಿ ಇಲ್ಲ, ನಾವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ದುಡಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಶ್ರಮಿಸೋಣ ಎಂದರು.     

ಕೆಪಿಸಿಸಿ ಸದಸ್ಯ ಗೋಣೆ ಮಾಲತೇಶ್, ಚುನಾವಣಾ ವೀಕ್ಷಕ ರಮೇಶ್, ಭಾರತ್ ಜೋಡು ಸಂಯೋಜಕರಾದ ನಿರ್ಮಲ ಪಾಟೀಲ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮಾರ್ವಳ್ಳಿ ಉಮೇಶ್, ಮಾತನಾಡಿದರು ಈ ಸಂದರ್ಭ ಮಾಜಿ ಶಾಸಕ ಮಹಾಲಿಂಗಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಚ್. ಎಸ್ ರವೀಂದ್ರ, ಎಸ್. ಟಿ. ಮೋರ್ಚ ಘಟಕದ ಜಿಲ್ಲಾಧ್ಯಕ್ಷ ವೀರೇಶ್, ಭಂಡಾರಿ  ಮಾಲತೇಶ್ ಸೇರಿದಂತೆ ಇತರರು ಹಾಜರಿದ್ದರು

READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!