hosanagara news : ಹಸುವಿನ ಕೆಚ್ಚಲು ಕತ್ತರಿಸಿದ ಆರೋಪಿ ಪೊಲೀಸರ ಬಲೆಗೆ
hosanagara news : ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಗರ ತಾಲ್ಲೂಕು ಮೇಲಿನ ಸಂಪಳ್ಳಿ ಗ್ರಾಮದ ವಿಜಾಪುರದಲ್ಲಿ ಮಲೆನಾಡು ಗಿಡ್ಡ ಹಸುವಿನ ಕೆಚ್ಚಲು ಕೊಯ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಬಂಧಿತ ಆರೋಪಿಯಾಗಿದ್ದಾನೆ.
ಹಸುವಿನ ಮಾಲೀಕ ನವೀನ್ ಎಂಬುವವರು ತಮ್ಮ ದನಗಳನ್ನು ಮೇಯಲು ಬಿಟ್ಟಿದ್ದರು. ಆ ದನ ರಾಮಚಂದ್ರ ಎಂಬುವವರ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತಿತ್ತು ಎಂಬ ಕಾರಣದಿಂದ ರಾಮಚಂದ್ರ ದನದ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹೊಡೆದು ಕೆಚ್ಚಲಿಗೆ ಗಾಯ ಮಾಡಿದ್ದಾರೆ.
- Advertisement -
ಈ ಘಟನೆ ಸಂಬಂಧ ಹಸುವಿನ ಮಾಲೀಕ ಗಣೇಶ್ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಇದೀಗ ಆರೋಪಿ ರಾಮಚಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
TAGGED:hosanagara news

