HOSANAGARA | ಕಲ್ಲು ಕ್ವಾರಿ ಹೊಂಡದಲ್ಲಿ SSLC ವಿದ್ಯಾರ್ಥಿ ಶವ ಪತ್ತೆ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 18, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ಬಾಲಕೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿ ಬಂದಿದೆ. ಇಲ್ಲಿನ ಬ್ರಹ್ಮೇಶ್ವರದ ಅಂಬೇಡ್ಕರ್‌ ಕಾಲೋನಿ ನಿವಾಸಿ ಶಮಂತ ಮೃತ ಬಾಲಕ 

15 ವರುಷ ಶಮಂತ ಇಲ್ಲಿನ ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ಓದುತ್ತಿದ್ದ. ಈತ ಕೂಲಿ ಕೆಲಸ ಮಾಡಿಕೊಂಡಿರುವ ಮುರುಗೇಶ್ ಮತ್ತು ಲಕ್ಷ್ಮಿ ದಂಪತಿಗಳ ಮಗ.

ಕಳೆದ ಭಾನುವಾರ ಸಂಜೆ ಕೆಲಸಕ್ಕೆ ಹೋಗಿ ಬಂದ ತಂದೆ ತಾಯಿಗೆ ಮನೆಯಲ್ಲಿ ಮಗ ಇಲ್ಲದಿರುವುದು ಗೊತ್ತಾಗಿದೆ. ಹಾಗಾಗಿ ನೆರೆಹೊರೆಯವರನ್ನು ವಿಚಾರಿಸಿದ್ದಾರೆ. ಎಲ್ಲೂ ಮಗ ಕಾಣದೇ ಹೋದಾಗ ಹತ್ತಿರದ ಕಲ್ಲುಕ್ವಾರಿಯೊಂದರ ಬಳಿ ತಲಾಶ್‌ ಮಾಡಿದ್ದರು. ಆ ವೇಳೆ ಅಲ್ಲಿನ ಕ್ವಾರಿ ಹೊಂಡದಲ್ಲಿ ಬಾಲಕ ಪತ್ತೆಯಾಗಿದ್ದಾನೆ. 

ಇನ್ನೂ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಜಲು ಹೋಗಿದ್ದ ವೇಳೆ ಬಾಲಕ ಸಾವನ್ನಪ್ಪಿರುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

Leave a Comment