SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಮಲ್ನಾಡ್ನಲ್ಲಿ ಹಾಗೂ ಬಯಲು ಸೀಮೆಗಳಲ್ಲಿ ಹೋರಿ ಹಬ್ಬಕ್ಕೆ ಸೋಶಿಯಲ್ ಮೀಡಿಯಾ ಭಾಷೆಯಲ್ಲಿ ಹೇಳುವುದಾದರೆ, ಸಿಕ್ಕಾಪಟ್ಟೆ ಟ್ರೆಂಡ್ ಇದೆ, ಲಕ್ಷಗಟ್ಟಲೇ ವಿವ್ಸ್ ಬರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಜೀವ ಹೋಗುವಷ್ಟು ಕ್ರೇಜ್ ಹೋರಿಹಬ್ಬಗಳಿಗಿದೆ. ಆದರೆ ಹೋರಿ ಹಬ್ಬಕ್ಕೆಂದೆ ಲಕ್ಷ ಲಕ್ಷ ಕೊಟ್ಟು ಖರೀದಿಸುವ ಹೋರಿಗಳು ಮಿಸ್ ಆದರೆ, ಅದರಿಂದಾಗುವ ನುಕ್ಸಾನು ಅಷ್ಟಿಷ್ಟಲ್ಲ ಈ ಬಗ್ಗೆ ಮಲೆನಾಡು ಟುಡೆ ಈ ಹಿಂದೆ ವಿಸ್ತೃತ ವರದಿ ಮಾಡಿತ್ತು. ಕಾಣೆಯಾಗ್ತಿವೆ ಲಕ್ಷದ ರೇಟಿನ ಹೋರಿಗಳು | ನೆಗೆದು ಗುಮ್ಮುವ ಮಿಂಚಿನ ಓಟದ ಹೋರಿ ಹಬ್ಬದ ಹಿಂದಿನ ರೋಚಕತೆ ಬಗ್ಗೆ JP ಬರೆಯುತ್ತಾರೆ ಹೆಸರಿನ ವರದಿಯನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ನೊಮ್ಮೆ ಗಮನಿಸಬಹುದಾಗಿದೆ.
ಸದ್ಯ ಈ ವಿಷಯದಲ್ಲಿ ಹೊಸದೊಂದು ಅಪ್ಡೇಟ್ ಬಂದಿದೆ. ಇದು ಹೋರಿಪ್ರಿಯರಿಗೆ ಖಂಡಿತ ಸಂತೋಷ ಮೂಡಿಸುತ್ತದೆ. ಅದೇನಂದರೆ ಹೋರಿ ಹಬ್ಬಗಳಲ್ಲಿ ಸಾಲಿನಲ್ಲಿ ಬಿಟ್ಟ ಹೋರಿಗಳು ಮಿಸ್ ಆದರೆ ಅವುಗಳನ್ನ ಪತ್ತೆ ಮಾಡಲು ವ್ಯಕ್ತಿಯೊಬ್ಬರು ಬುಲ್ ಟ್ರ್ಯಾಕರ್ ಕಂಡು ಹಿಡಿದಿದ್ದಾರೆ. ಶಿಕಾರಿಪುರ ಪಟ್ಟಣದಲ್ಲಿ ಸಿಟಿಜನ್ ಬ್ಯಾಟರಿಯಲ್ಲಿ ಆಟೋ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಿದಾಯತ್ “ಬುಲ್ ಟ್ರ್ಯಾಕರ್ ಡಿವೈಸ್ ” ಕಂಡುಹಿಡಿದಿದ್ದು ನಾಗರೀಕರ ಪ್ರಶಂಸೆಗೆ ಒಳಗಾಗಿದ್ದಾರೆ. ಹೋರಿ ಕಳೆದುಕೊಂಡವರ ಪರಿಸ್ಥಿತಿ ಅರಿತು ಕಳೆದ ಎರಡು ತಿಂಗಳಿನಿಂದ ಶ್ರಮವಹಿಸಿ ಕಾರಿನಲ್ಲಿ ಬಳಸುವ ಜಿ.ಪಿ.ಎಸ್ ಡಿವೈಸ್ ಅಪ್ಡೇಟ್ ಮಾಡಿದ್ದಾರೆ. ಈ ಟ್ರಾಕರ್ನ್ನು ಹೋರಿಗಳಿಗೆ ಅಳವಡಿಸಿದರೆ, ಅವುಗಳು ನೆಟ್ವರ್ಕ್ ಇಲ್ಲದ ಸ್ಥಳಕ್ಕೆ ಹೋದರು ಸಹ ಪತ್ತೆಯಾಗುತ್ತವೆ.ಇದರಿಂದ ದುಬಾರಿ ದುಡ್ಡು ಹಾಕಿ ಹೋರಿಗಳನ್ನು ಖರೀದಿಸುವ ಮಾಲೀಕರಿಗೆ ಅನುಕೂಲವಾಗಲಿದೆ. ಇಲ್ಲಿವರೆಗೂ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ತಮ್ಮ ಫೋಟೋಗಳನ್ನು ಹಾಕಿ ಹೋರಿಗಳನ್ನು ಹುಡುಕಿಕೊಡಿ ಎನ್ನುತ್ತಿದ್ದ ಹೋರಿ ಪ್ರಿಯರಿಗೆ ಈ ಬುಲ್ ಟ್ರ್ಯಾಕರ್ ಡಿವೈಸ್ ಅನುಕೂಲ ಮಾಡಿಕೊಡಲಿದೆ.
SUMMARY | Bull tracker device research to detect missing bulls in hori habba
KEY WORDS | Bull tracker device research to missing bulls in hori habba, Bull tracker device to hori habba, Bull tracker device to missing bulls
