SHIVAMOGGA | Jan 16, 2024 | ಶಿವಮೊಗ್ಗದ ಪಿಳ್ಳಂಗೆರೆ ಸಮೀಪ ಬೈಕ್ವೊಂದನ್ನ ಸುಟ್ಟುಹಾಕಿರುವ ಘಟನೆ ಸಂಭವಿಸಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್
ಇಲ್ಲಿನ ವೀ ರವಿನಾಯ್ಕ ರವರ ತೋಟದ ಹತ್ತಿರ ಶಿವಮೊಗ್ಗ ನಿವಾಸಿಯೊಬ್ಬರು ಹೀರೊ ಸ್ಪ್ಲೆಂಡರ್ ಪ್ರೋ ಬೈಕನ್ನು ನಿಲ್ಲಿಸಿ ರವಿನಾಯ್ಕ ರವರ ತೋಟದ ಗುತ್ತಿಗೆ ಕೆಲಸದ ಬಗ್ಗೆ ಮಾತನಾಡಲು ಹೋಗಿದ್ದರು..
ಈ ವೇಳೆ ಅವರ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಬಳಿಕ ಅವರ ಬೈಕ್ ಸುಟ್ಟುಹಾಕಲಾಗಿದೆ ಎಂಬ ವಿಚಾರ ಗೊತ್ತಾಗಿದೆ. ಹೋಗಿ ನೋಡಿದರೆ, ಪಿಳ್ಳಂಗೆರೆ ಹೈಸ್ಕೂಲ್ ಹಿಂಭಾಗದಲ್ಲಿ ಬೈಕನ್ನು ಸುಟ್ಟು ಹಾಕಿದ್ದರು.
ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿ ಸುಟ್ಟು ಹಾಕಿರುವ ಪ್ರಕರಣ ಕುತೂಹಲ ಮೂಡಿಸಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಲಾಗಿದೆ.