ಶಿವಪ್ಪನಾಯಕ ವೃತ್ತದ ಬಳಿ ಪ್ರೀತಿಸ್ತಿದ್ದ ಯುವತಿಗೆ ಇರಿದ ಯುವಕ! ಕೋಟೆ ಪೊಲೀಸ್​ ಸ್ಟೇಷನ್ ಕೇಸ್

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 16, 2024  | ಪರಸ್ಪರ ಪ್ರೇಮಿಸಿದ್ದ ಯುವಕ-ಯುವತಿ ನಡುವೆ ಮಾತಿಗೆ ಮಾತು ಬಂದು, ಯುವತಿಗೆ ಚಾಕುವಿನಿಂದ ಇರಿದ ಘಟನೆ  ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತ  (Man stabs girl near Shivappanayaka Circle)ದ ಸಮೀಪ ನಡೆದಿದೆ. ಇವತ್ತು ಮಧ್ಯಾಹ್ನದ ನಂತರ ಈ ಘಟನೆ ಸಂಭವಿಸಿದ್ದು. ಘಟನೆಯಲ್ಲಿ  ಇಬ್ಬರು ಸಹ ಗಾಯಗೊಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆ ಆಡೋನಹ್ಳಳಿ ಗ್ರಾಮದ ಯುವಕ ಯುವತಿ ಪರಸ್ಪರ ಪ್ರೇಮಿಸ್ತಿದ್ದರು. ಈ ಮಧ್ಯೆ  ಪ್ರೀತಿಯಲ್ಲಿ ಭಿನ್ನರಾಗ ಹೊಮ್ಮಿದೆ. ಒಂದೇ ಸಮುದಾಯದವರಾದರು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಸಾಲದ್ದಕ್ಕೆ ಪ್ರೀತಿಯಲ್ಲಿನ ಭಿನ್ನರಾಗದ ಹಿನ್ನೆಲೆಯಲ್ಲಿ ಇವತ್ತು ಶಿವಪ್ಪನಾಯಕ ವೃತ್ತದ ಬಳಿಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. 

ಈ ವೇಳೆ ಸಿಟ್ಟಿನ ಬರದಲ್ಲಿ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಯುವತಿಯು ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನೂ ಘಟನೆಯನ್ನು ನೋಡಿದ ಸ್ಥಳೀಯುರು ಯುವಕನನ್ನ ಹಿಡಿದು ಆತನಿಗೆ ಧರ್ಮದೇಟು ನೀಡಿದ್ದಾರೆ. ಅಲ್ಲದೇ ಯುವತಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಇನ್ನೊಂದೆಡೆ ಪೆಟ್ಟು ತಿಂದ ಯುವಕ ಕೂಡ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಗೆ ದಾಖಲಾಗಿದ್ದು, ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು (Kote Police Station Case)ಪರಿಶೀಲನೆ ನಡೆಸ್ತಿದ್ದಾರೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor