KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’
ನಿನ್ನೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ ಸಡಗರದಿಂದ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ವಿಶೇಷವಾಗಿ ಗಾಂಧಿ ಬಜಾರ್ನ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಅಲಂಕಾರವನ್ನು ಮಾಡಲಾಗಿದ್ದು, ವಿಶೇಷವಾಗಿ ಕಾಣುತ್ತಿದೆ.
ಹಿಂದೂಮಹಾಸಭಾ ಅಲಂಕಾರ ಸಮಿತಿಯು ಈ ಸಲ ಉಗ್ರ ನರಸಿಂಹನ ಅಲಂಕಾರವನ್ನು ಆಯ್ದುಕೊಂಡಿದ್ದು, ಅದರಂತೆ ನಿನ್ನೆ ಸಂಜೆ ಹೊತ್ತಿಗೆ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಮೂರ್ತಿಯನ್ನು ಕೂರಿಸಲು ಕಲಾವಿದರ ತಂಡ ಮುಂದಾಯ್ತು.
#ಶಿವಮೊಗ್ಗ #ಹಿಂದೂಮಹಾಸಭಾಗಣಪತಿ ಅಲಂಕಾರ #ಗಾಂಧಿಬಜಾರ್ #Shivamogga #Shivamoggahindu #Shimoga #hindhumahasaba #hindumahasaba pic.twitter.com/N1dmLoVfGX
— malenadutoday.com (@CMalenadutoday) September 27, 2023
ಬೃಹತ್ ಕ್ರೇನ್ ಬಳಸಿ, ಹಲವು ಕಲಾವಿದರು, ಈ ಮೊದಲೇ ತಯಾರಿಸಿದ್ದ ಉಗ್ರನರಸಿಂಹನ ಮೂರ್ತಿಯನ್ನು,ತಾತ್ಕಾಲಿಕವಾಗಿ ಸಿದ್ದಪಡಿಸಿರುವ ದ್ವಾರ ಬಾಗಿಲನ ಮೇಲೆ ಕೂರಿಸಿದರು. ಕಲಾವಿದರ ಕೆಲಸ ಹಾಗೂ ಅಲಂಕಾರವನ್ನು ಕಣ್ತುಂಬಿಕೊಳ್ಳಲು ನಿನ್ನೆ ತಡರಾತ್ರಿಯಾದರೂ ಶಿವಪ್ಪ ನಾಯಕ ಮೂರ್ತಿಯ ಸಮೀಪ ನೂರಾರು ಜನರು ಜಮಾಯಿಸಿದ್ದರು.
ಮೊಬೈಲ್ಗಳಲ್ಲಿ ರೀಲ್ಸ್ ಮಾಡಲು ವಿಡಿಯೋ ತೆಗೆಯುತ್ತಿದ್ದವರ ಸಂಖ್ಯೆಯಂತು ವಿಶೇಷವಾಗಿ. ಅದರಲ್ಲಿಯು ಉಗ್ರ ನರಸಿಂಹರ ಮೂರ್ತಿಯನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಹಿಡಿಯುವಾಗ ಜನರು ಮೊಬೈಲ್ಗಳಲ್ಲಿ ದೃಶ್ಯವನ್ನು ಸೆರೆ ಹಿಡಿದು ಘೋಷಣೆ ಕೂಗುತ್ತಿದ್ದರು.
ಇನ್ನಷ್ಟು ಸುದ್ದಿಗಳು
