ಫ್ರೆಂಡ್ಸ್ ಜೊತೆ ಹೋಗಿ ವಾಪಸ್ ಆಗ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್! ವಿದ್ಯಾರ್ಥಿನಿ ಸಾವು

SHIVAMOGGA  |  Jan 16, 2024  |  ಶಿವಮೊಗ್ಗದ ಕಲ್ಲಾಪುರದ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ವಿಂಡ್ ವೀಲ್​ ನೋಡಿಕೊಂಡು ಸ್ನೇಹಿತರ ಜೊತೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. 

ಶಿವಮೊಗ್ಗಕ್ಕೆ ಬರುವ ವೇಳೆ ರಸ್ತೆ ಅಪಘಾತ 

ಭದ್ರಾವತಿ ಮೂಲದ ವಿದ್ಯಾರ್ಥಿನಿಯು ಶಿವಮೊಗ್ಗ ಶಿಕ್ಷಣ ಸಂಸ್ಥೆಯೊಂದರಲ್ಲಿ ಓದುತ್ತಿದ್ದರು. ನಾಲ್ಕೈದು ಸ್ನೇಹಿತರ ಜೊತೆಗೆ ಸವಳಂಗ ಸಮೀಪ ಇರುವ ವಿಂಡ್ ವೀಲ್ ನೋಡಲು ತೆರಳಿದ್ದರು. ಅಲ್ಲಿಂದ ವಾಪಸ್ ಆಗುವ ಸಂದರ್ಭದಲ್ಲಿ  ಕಲ್ಲಾಪುರ ಬಳಿ ಅಪಘಾತವಾಗಿದೆ. 

ವಿದ್ಯಾರ್ಥಿನಿ ಓಡಿಸುತ್ತಿದ್ದ ದ್ವಿಚಕ್ರ ವಾಹನ ರಸ್ತೆಪಕ್ಕದ ಅಂಗಡಿಯೊಂದಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಯುವತಿ ತೀವ್ರವಾಗಿ ಗಾಯಗೊಂಡಿದ್ದರು. ಹಿಂಬದಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗೂ ತೀವ್ರ ಗಾಯವಾಗಿತ್ತು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸ್ ಕೇಸ್ ದಾಖಲಾಗಿದೆ. 


Leave a Comment