ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ!/ ಒಳಗೆ ಬನ್ನಿ ಎಂದಿದ್ದಕ್ಕೆ , ಕುಡಿದು ಹೊರಗೆ ಬೋರ್ಡ್ ಒಡೆದರು/ ಬಸ್ ನಲ್ಲಿ ಗೋಮಾಂಸ ಸಾಗಿಸ್ತಿದ್ದವ ಅರೆಸ್ಟ್
Here is the details of three news from Shimoga and Chikmagalur districtಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮೂರು ಸುದ್ದಿಗಳ ವಿವರ ಇಲ್ಲಿದೆ
KARNATAKA NEWS/ ONLINE / Malenadu today/ Sep 17, 2023 SHIVAMOGGA NEWS
ಗೋಮಾಂಸ ಸಾಗಿಸ್ತಿದ್ದವ ಅರೆಸ್ಟ್
ಶಿವಮೊಗ್ಗ ಜಿಲ್ಲೆಯಲ್ಲಿ ಶಿರಾಳಕೊಪ್ಪದಿಂದ ಸಾಗರಕ್ಕೆ ಖಾಸಗಿ ಬಸ್ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ರಾಣೇಬೆನ್ನೂರು ಮೂಲದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ. ಇಮ್ತಿಯಾಜ್ ಬಂಧಿತ ಆರೋಪಿ. ಸಾಗರ ಪೊಲೀಸರು ನಡೆಸಿದ ದಾಳಿ ಒಂದು ಬೈಕ್ನ್ನ ವಶಕ್ಕೆ ಪಡೆಯಲಾಗಿದೆ. ಖಾಸಗಿ ಬಸ್ನಲ್ಲಿ ದನದ ಮಾಂಸ ತಂದು ಸಾಗರದಲ್ಲಿ ಮಾರುತ್ತಿದ್ದ ಆರೋಪಿ ಇವರ ಮೇಲೆ ಕೇಳಿಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಳಗಡೆ ಕುಡಿಯಿರಿ ಎಂದಿದ್ದಕ್ಕೆ ಬೋರ್ಡ್ ಒಡೆದರು
ಹೊರಗಡೆ ಕುಡಿಯಬೇಡಿ, ಒಳಗೆ ಹೋಗಿ ಕುಡಿಯಿರಿ ಎಂದಿದ್ದಕ್ಕೆ ಗಲಾಟೆ ಮಾಡಿ ಹಲ್ಲೆಗೆ ಮುಂದಾದ ಆರೋಪವೊಂದು ಸಾಗರ ತಾಲ್ಲೂಕಿನಲ್ಲಿ ಕೇಳಿಬಂದಿದೆ. ವರದಹಳ್ಳಿ ಸರ್ಕಲ್ ಬಳಿಯಲ್ಲಿರುವ ಸೌಪರ್ಣಿಕಾ ಹೋಟೆಲ್ನಲ್ಲಿ ನಡೆದ ಘಟನೆ ಇದಾಗಿದೆ. ಘಟನೆಯಲ್ಲಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷರೊಬ್ಬರು ಸೇರಿ ಹಲವರ ವಿರುದ್ಧ ಕೇಸ್ ದಾಖಲಾಗಿದೆ. ಒಳಗೆಡೆ ಹೋಗಿ ಕುಡಿಯಿರಿ ಎಂದಿದ್ದಕ್ಕೆ ಹೋಟೆಲ್ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿ, ಹೋಟೆಲ್ನ ಬೋರ್ಡ್ ಒಡೆದು ಸಾಮಾಗ್ರಿಗಳನ್ನು ಧ್ವಂಸ ಮಾಡಿರುವ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
10 ಚಕ್ರದ ಲಾರಿ ಪಲ್ಟಿ!
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಲ್ಲಿ ಟೆನ್ ವೀಲ್ಹ್ ಲಾರಿಯಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ನಡುರಸ್ತೆಯಲ್ಲಿ ಲಾರಿ ಉರುಳಿ ಬಿದ್ದಿದ್ದು ಸಂಚಾರಕ್ಕೆ ಕೆಲವೊತ್ತು ಅಡೆತಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಲಾರಿಯಲ್ಲಿದ್ದ ಪ್ಲೇವುಡ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಾರಿ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಲಾರಿಯಲ್ಲಿಯೇ ಸಿಲುಕಿದದ್ದ ಚಾಲಕ ಹಾಗೂ ಕ್ಲೀನರ್ನ್ನ ಸ್ಥಳೀಯರು ಬಚಾವ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ