KARNATAKA NEWS/ ONLINE / Malenadu today/ Sep 19, 2023 SHIVAMOGGA NEWS
ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಎಳನೀರು ಮಾರುವವರ ಮೇಲೆ ನಾನು ಹೊಸಮನೆ ರೌಡಿ ಎಂದು ಹೇಳಿಕ ಹಲ್ಲೆ ಮಾಡಿದ ಘಟನೆ ಸಂಬಂಧ ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ (Vinobanagar Police Station)ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಕಳೆದ 17/09/2023 ರಂದು ನಡೆದ ಘಟನೆ ಇದಾಗಿದೆ. ಇಲ್ಲಿನ ನಿವಾಸಿಯೊಬ್ಬರು ಕಿರಾಣಿ ಅಂಗಡಿ ಜೊತೆ ಎಳನೀರು ಮಾರಾಟ ಮಾಡುತ್ತಿರುತ್ತಾರೆ. ಸಂಜೆ ಹೊತ್ತಿಗೆ ಬಂದ ಚಿನ್ಮಯಿ ಎಂಬಾತ, ದುಡ್ಡು ಕೊಡುವುದಿಲ್ಲ ಹಾಗೆ ಒಂದು ಎಳನೀರು ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಅಂಗಡಿ ಮಾಲಿಕರು ಸಾಲ ಕೊಡುವುದಿಲ್ಲ ಎಂದಿದ್ದಾರೆ.
ಇದರಿಂದ ಆಕ್ರೋಶಗೊಂಡ ಚಿನ್ಮಯಿ ಎಂಬಾತ, ನಾನು ಹೊಸ ಮನೆ ರೌಡಿ, ನನಗೆ ಎಳನೀರು ಕೊಡಲ್ಲ ಅಂತೀಯಾ ಎಂದು ಅಲ್ಲಿದ್ದ ಎಳನೀರು ಕಾಯಿಗಳನ್ನು ತೆಗೆದು ಅಂಗಡಿ ಮೇಲೆ ಎಸೆದಿದ್ದಾನೆ. ಅಲ್ಲದೆ ಕೆಲವನ್ನು ರೋಡಿಗೆಸದಿದ್ದಾನೆ.
ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾನೆ. ತಪ್ಪಿಸಲು ಬಂದವರ ಮೇಲೂ ಹಲ್ಲೆ ಮಾಡಿ, ಕಲ್ಲುಗಳನ್ನು ತೂರಿ ಹಲ್ಲೆ ಮಾಡಿದ್ದಾನೆ.ಬಳಿಕ ಅಲ್ಲಿದ್ದ ಇನ್ನಷ್ಟು ಸ್ಥಳೀಯರು ಬಂದು ಜಗಳ ಬಿಡಿಸಿದ್ದಾರೆ. ಘಟನೆಯಲ್ಲಿ ಅಂಗಡಿ ಮಾಲೀಕರು ಹಾಗು ಅವರ ಕುಟುಂಬಸ್ಥರು ಗಾಯಗೊಂಡಿದ್ದು ಪೊಲೀಸರು IPC 1860 (U/s-504,323,324,354(B),427,506) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ
