ಪತ್ರಕರ್ತರಿಗೆ ಸನ್ಮಾನ/ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಶಿವಮೊಗ್ಗದಲ್ಲಿ ಸನ್ಮಾನ

Felicitation to journalists/ Media Academy awardees felicitated in Shimoga

ಪತ್ರಕರ್ತರಿಗೆ ಸನ್ಮಾನ/  ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಶಿವಮೊಗ್ಗದಲ್ಲಿ ಸನ್ಮಾನ

 

MALENADUTODAY.COM/ SHIVAMOGGA / KARNATAKA WEB NEWS

 

ವಿಶ್ವಾಸವೇ ಮರೆಯಾಗುತ್ತಿ ರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾ ಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್ ಹೇಳಿದ್ದಾರೆ. 




ಪತ್ರಿಕಾಭವನದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.




ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯ ಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾ ಗುತ್ತದೆ. ಮಾಧ್ಯಮ ಅಕಾಡೆಮಿ ಬಂದ ಮೇಲೆ ಪತ್ರ ಕರ್ತರನ್ನು ಗುರುತಿಸುವಂತ ಕೆಲಸ ಆಗುತ್ತಿದೆ. ವೃತ್ತಿ ಪರರಿಗೆ ಪ್ರಶಸ್ತಿಗಳನ್ನುನೀಡಿ ಬೆನ್ನು ತಟ್ಟುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸೇವೆ ಪರಿಗಣಿಸಿ ನೀಡುವ ಪುರಸ್ಕಾರ ದಿಂದ ಪತ್ರಿಕೋದ್ಯಮಕ್ಕೆ ಗರಿ ಮೂಡಿದೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ಕರೆದರೂ ಪತ್ರಿಕೋದ್ಯ ಮದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

 

ಆತ್ಮಾವಲೋಕನ ಅಗತ್ಯ

 

ಪತ್ರಿಕೋದ್ಯಮ ಬಲಿಷ್ಠವಾಗಿ ಬೆಳೆಯಬೇಕು ಪತ್ರಕರ್ತರು ಬದ್ದತೆಯಿಂದ ಕೆಲಸ ಮಾಡಬೇಕು ಎನ್ನುವುದು ಸಮಾಜದ ನಿರೀಕ್ಷೆ. ಆದರೆ, ಇತ್ತೀಚೆಗೆ ವೃತ್ತಿ ಬದ್ಧತೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಅನೇಕ ಸವಾಲುಗಳ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸನ್ಮಾನಗಳು, ಪುರಸ್ಕಾರಗಳಿಂದ ಪತ್ರಿಕೆಗಳನ್ನು ಗುರುತಿ ಸುವಂತ ಕೆಲಸ ಆಗುತ್ತದೆ. ಉದ್ಯಮಿ ಇಂದು ಪೈಪೋಟಿಯಿಂದ ಕೂಡಿದೆ. ಸಾಮಾಜಿಕ ಮಾಧ್ಯಮ ಗಳಿಂದಾಗಿ ಸ್ಪರ್ಧೆ ಏರ್ಪಟ್ಟಿದ್ದು, ಮುದ್ರಣ ಮಾಧ್ಯಮ ಇಂದಿಗೂ ಹೆಚ್ಚಿನ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಹೇಳಿದರು.



Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

 

ಷಡಾಕ್ಷರಿ ಅಭಿನಂದನೆ

 

ಮುಖ್ಯ ಅತಿಥಿಗಳಾಗಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಪತ್ರಕರ್ತರು ಸರ್ಕಾರಿ ನೌಕರರಂತೆ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ ೧೨ ಮಂದಿ ಶಿವಮೊಗ್ಗ ಜಿಲ್ಲೆಯ ವರೇ ಇರುವುದು ಪತ್ರಿಕೋದ್ಯಮದಲ್ಲಿ ಶಿವಮೊಗ್ಗ ಜಿಲ್ಲೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸು ತ್ತದೆ. ಇಂದು ಪ್ರಶಸ್ತಿಗಳನ್ನು ಲಾಭಿ ಮಾಡಿ ತೆಗೆದು ಕೊಳ್ಳುವವರ ಮಧ್ಯೆ ಅರ್ಹತೆಯಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲು. ಇಂದು ಅಭಿನಂದಿಸಲ್ಪಡುವ ಪತ್ರಕರ್ತರು ಮಾದರಿ ಪತ್ರಕರ್ತ ರರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ಯುವ ಪತ್ರಕರ್ತರಲ್ಲಿ ಉತ್ಸಾಹ ಹೆಚ್ಚಿಸುತ್ತದೆ ಎಂದರು.

 

ಸಾಧಕರಿಗೆ ಸನ್ಮಾನ

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತ ನಾಡಿ, ಇತ್ತೀಚೆಗೆ ಪ್ರಶಸ್ತಿಗಳು ಲಾಭಿಗೆ ಒಳಗಾಗಿವೆ. ಇದರ ನಡುವೆಯೂ ಅರ್ಹತೆಯಿಂದ ಪ್ರಶಸ್ತಿಗಳಿ ಸುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ. ಪತ್ರಿಕೋದ್ಯ ಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

 

ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಕೆ.ತಿಮ್ಮಪ್ಪ ಹುಲಿಮನೆ, ನಾಗರಾಜ್ ನೇರಿಗೆ, ರಾಮಸ್ವಾಮಿ ಹುಲ್ಕೊಡು, ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ದೇಶಕ ಮರುಳೀಧರ್ ಅವರನ್ನು   ಸನ್ಮಾನಿಸಲಾಯಿತು.

 

ಕಾರ್ಯಕ್ರಮವನ್ನು ಸಂಘದ ನಗರ ಕಾರ್ಯ ದರ್ಶಿ ಗೋ.ವ.ಮೋಹನಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಡಿ.ವತ್ಸಲ ಸೂರ್ಯ ನಾರಾಯಣ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ವಂದಿಸಿದರು.ರಾಮಚಂದ್ರ ಗುಣಾರಿ, ರಾ.ನ.ಮೂರ್ತಿ, ಗಜೇಂದ್ರ ಸ್ವಾಮಿ ಪ್ರಶಸ್ತಿ ಪುರ ಸ್ಕೃತರ ಪರಿಚಯ ಮಾಡಿದರು. ಕಾರ್ಯ ಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಮತ್ತವರ ಕುಟುಂಬ ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಗಳು ಭಾಗವಹಿಸಿದ್ದರು.






 

 



ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / fire accident /  ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್​ನಲ್ಲಿ ನಿಲ್ಲಿಸಿದ್ದ ಏಳು ಬೈಕ್​ಗಳು!

Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 





HASHTAGS/ 

 

kannada news live, kannada news paper kannada news channel, kannada news today,kannada news tv9,kannada news channel live,kannada news live today, live,kannada news anchors list, kannada news anchor,kannada news app,kannada news app download,kannada news articles,kannada news anchor salary,kannada news anchors names,kannada news all,kannada news bangalore,kannada news belgaum,kannada news bidar,kannada news breaking,kannada news bangalore today,kannada news bijapur,kannada news budget,kannada news bharti, kannada news channel list,news channel trp,kannada news channel number in tata sky,  kannada news dailyhunt, kannada news daily, kannada news dharwad,kannada news davangere,kannada news epaper today,kannada news etv, kannada news english,kannada newspaper online,kannada news eenadu,kannada news evening,kannada news election,kannada news editor special,kannada news first,kannada news film,kannada news first channel live, Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga

#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada