ಶಿವಮೊಗ್ಗದ ವ್ಯಕ್ತಿಗೆ ಬ್ಯಾಡ್ಮಿಂಟನ್ ಅಕಾಡೆಮಿ ಹೆಸರಲ್ಲಿ 4 ಲಕ್ಷ ವಂಚನೆ : ಏನಿದು ಪ್ರಕರಣ

prathapa thirthahalli
Prathapa thirthahalli - content producer

Facebook investment fraud ಶಿವಮೊಗ್ಗ: ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಪಾಲುದಾರಿಕೆ ನೀಡುವುದಾಗಿ ನಂಬಿಸಿ, ದುಬೈನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 4 ಲಕ್ಷ ವಂಚಿಸಿರುವ ಬಗ್ಗೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Facebook investment fraud ಘಟನೆಯ ವಿವರ

ದುಬೈನಲ್ಲಿ ನೆಲೆಸಿದ್ದ ದೂರುದಾರರಿಗೆ ಒಬ್ಬ ಅಪರಿಚಿತ ವ್ಯಕ್ತಿ ಫೇಸ್‌ಬುಕ್ ಮೂಲಕ ಸಂದೇಶ ಕಳುಹಿಸಿದ್ದ. ತಾನು ಇಎಸ್ ಸ್ಪೋರ್ಟ್ಸ್ ಎಂಬ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ನಡೆಸುತ್ತಿದ್ದು, ಅದರಲ್ಲಿ ಶೇರುಗಳನ್ನು ಖರೀದಿಸಿ ಪಾಲುದಾರರಾಗುವಂತೆ ಆಹ್ವಾನಿಸಿದ್ದ.ಇದನ್ನು ನಂಬಿದ ದೂರುದಾರರು, ಶಿವಮೊಗ್ಗದಲ್ಲಿರುವ ತಮ್ಮ ಮಾವನ ಮನೆಗೆ ಅಪರಿಚಿತ ವ್ಯಕ್ತಿ ಬಂದಾಗ ನಗದು ರೂಪದಲ್ಲಿ 1 ಲಕ್ಷ ನೀಡಿದ್ದಾರೆ. ನಂತರ, ದೂರುದಾರರು ತಮ್ಮ ಪತ್ನಿಯ ಮಾಂಗಲ್ಯ ಸರವನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿ 3 ಲಕ್ಷ ಸಾಲ ಪಡೆದು, ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಒಟ್ಟು 3 ಲಕ್ಷ ಹಣವನ್ನು ಅಪರಿಚಿತ ವ್ಯಕ್ತಿಯ ಪತ್ನಿಯ ಖಾತೆಗೆ ಹಂತ ಹಂತವಾಗಿ ವರ್ಗಾಯಿಸಿದ್ದಾರೆ. ಈ ರೀತಿ ಒಟ್ಟಾರೆಯಾಗಿ 4 ಲಕ್ಷ ಹಣವನ್ನು ನೀಡಿದ್ದಾರೆ.

- Advertisement -

ಹಣ ನೀಡಿದ ಒಂದು ತಿಂಗಳ ನಂತರ, ಅಪರಿಚಿತ ವ್ಯಕ್ತಿ ದೂರುದಾರರಿಗೆ ಪುನಃ ಕರೆ ಮಾಡಿ, ಅಕಾಡೆಮಿ ನಡೆಸಲು ಇನ್ನೊಂದು 6 ಲಕ್ಷ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ದೂರುದಾರರು ಹಣ ನೀಡಲು ನಿರಾಕರಿಸಿದಾಗ, ಒಟ್ಟಾರೆ 10 ಲಕ್ಷ ನೀಡಿದರೆ ಮಾತ್ರ ಅಕಾಡೆಮಿ ಮುಂದುವರಿಸಲು ಸಾಧ್ಯ. ಇಲ್ಲವಾದರೆ ಮೊದಲು ನೀವು ನೀಡಿದ 4 ಲಕ್ಷ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿದ್ದಾನೆ

https://malenadutoday.com/shivamogga-astrologer-cheats-woman/

ಇದಾದ ನಂತರ ದೂರುದಾರರು ಸುಮಾರು 15 ದಿನಗಳ ಕಾಲ ಕರೆ ಮಾಡಿದರೂ ಮತ್ತು ಮೆಸೇಜ್​ ಕಳುಹಿಸಿದರೂ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ತಾವು ಮೋಸ ಹೋಗಿರುವುದು ಅರಿತು, ತಾವು ಕಳೆದುಕೊಂಡ 4 ಲಕ್ಷ ಹಣವನ್ನು ಹಿಂದಿರುಗಿಸುವಂತೆ ಅಪರಿಚಿತ ವ್ಯಕ್ತಿ ಮತ್ತು ಆತನ ಪತ್ನಿ ವಿರುದ್ಧ ದೂರುದಾರರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Share This Article