KARNATAKA NEWS/ ONLINE / Malenadu today/ Jun 4, 2023 SHIVAMOGGA NEWS
Malenadu today/ ಕಾಡಾನೆ ದಾಳಿಗೆ ತುತ್ತಾಗಿದ್ದ ವನ್ಯಜೀವಿ ಡಾಕ್ಟರ್ ವಿನಯ್ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸುದೀರ್ಘ ಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ವೇಳೇ ಅವರಿಗೆ ಚಿಕಿತ್ಸೆ ನೀಡಿದ್ದ ತಜ್ಞ ವೈದ್ಯರ ತಂಡ ಹಾಗೂ ಆಸ್ಪತ್ರೆಯ ಸಿಬ್ಬಂದಿ ಬೀಳ್ಕೊಟ್ಟಿದ್ದಾರೆ. ಅಲ್ಲದೆ ಅವರು ಗುಣಮುಖರಾಗಿರುವುದು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅವರ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ.
ಶಿವಮೊಗ್ಗ ಜೈಲ್ ಬೆನ್ನಲ್ಲೆ, ಇವತ್ತು ಮಹಿಳಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ರೇಡ್!
ಮೂರು ತಿಂಗಳು ವಿಶ್ರಾಂತಿ
ಇನ್ನೂ ಮೂರು ತಿಂಗಳುಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಅವರ ಆರೋಗ್ಯದ ದೃಷ್ಟಿಯಿಂದ, ಅವರ ಇರುವಿಕೆಯ ಸ್ಥಳವನ್ನು ಸ್ಪಷ್ಟಪಡಿಸಿಲ್ಲ. ಡಾ.ವಿನಯ್ರನ್ನು ಭೇಟಿಯಾಗಬೇಕು, ಯೋಗಕ್ಷೇಮ ವಿಚಾರಿಸಬೇಕು ಎನ್ನುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಆದರೆ, ಈ ವಿಶ್ರಾಂತಿಯ ಅವಧಿಯಲ್ಲಿ ಜನರ ಭೇಟಿಯು , ವಿನಯ್ರವರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ . ಹೀಗಾಗಿ ಸದ್ಯದ ಮಟ್ಟಿಗೆ ಡಾ. ವಿನಯ್ರವರ ಭೇಟಿಗೆ ಯಾರಿಗೂ ಅವಕಾಶ ಇರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಗುಣಮುಖರಾದ ಬಳಿಕ, ಅವರೇ ಎಲ್ಲರನ್ನೂ ಭೇಟಿಯಾಗುತ್ತಾರೆ ಎಂದು ವಿನಯ್ರವರ ಆಪ್ತರು ತಿಳಿಸಿದ್ದಾರೆ.
ಮನೆಯಲ್ಲಿಯೇ ಮುಂದುವರಿಯಲಿದೆ ಚಿಕಿತ್ಸೆ!
ಸದ್ಯ ಡಾ.ವಿನಯ್ರವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಮೇಲ್ವಿಚಾರಣೆಯನ್ನು ಕುಟುಂಬಸ್ಥರು ಹಾಗೂ ಸ್ನೇಹಿತ ವಲಯದಲ್ಲಿನ ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸಹ, ಎಲ್ಲಾ ರೀತಿಯ ನೆರವು , ಸಹಕಾರ ನೀಡುತ್ತಿದ್ದು, ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದೆ.
ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರಿಂದ ಮೊದಲ ಸಭೆ! ಸಚಿವರ ಎದುರು ಅಧಿಕಾರಿಗಳಿಗೆ ಬೇಳೂರು ಗೋಪಾಲಕೃಷ್ಣ ಫುಲ್ ಕ್ಲಾಸ್!
ಮತ್ತೆ ನಗುಮುಖದಲ್ಲಿ ವಿನಯ್!
ಡಾ.ವಿನಯ್ರವರ ಮುಖದಲ್ಲಿ ಮತ್ತೆ ಅವರ ಸ್ಮೈಲ್ ಮರುಕಳಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಅವರನ್ನು ವೈದ್ಯರ ತಂಡ ಬಿಳ್ಗೊಟ್ಟು, ಫೋಟೋ ಕ್ಲಿಕ್ಕಿಸಿಕೊಂಡಿತ್ತು. ಈ ಫೋಟೋದಲ್ಲಿ ವಿನಯ್ರವರು ನಗುಮುಖದಲ್ಲಿ ನಿಂತಿರುವುದು, ಅವರ ಬಗ್ಗೆ ಕಾಳಜಿ ಹೊಂದಿದವರಲ್ಲಿ ಸಂತಸ ಮೂಡಿಸಿದೆ.
ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಮಾಡದಿದ್ದರೇ ಪಿಂಚಣಿ ಕಟ್! ಎಲ್ಲಿ ಏನು ವಿವರ ಇಲ್ಲಿದೆ
ಒಂದು ತಿಂಗಳ ಅವಧಿಯಲ್ಲಿ ವಿಧಿಯನ್ನೆ ಗೆದ್ದ ಡಾ. ವಿನಯ್
11-04-23 ರಂದು ಕಾಡಾನೆ ತುಳಿತಕ್ಕೆ ಒಳಗಾದ ವಿನಯ್ ಬದುಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಅಂದು ಬೆಳಿಗ್ಗೆ ಸುಮಾರು 8.30 ರ ಸಮಯ. ವಿನಯ್ ಮತ್ತು ತಂಡ ಜೀನಹಳ್ಳಿಯ ಪ್ರದೇಶದಲ್ಲಿ ಕಾಡಾನೆಗೆ ಡಾರ್ಟ್ ಮಾಡಲು ತೆರಳಿದ್ದರು. ಈ ವೇಳೆ ಕಾಡಾನೆ, ಒಮ್ಮಲೆ ತಿರುಗಿ ದಾಳಿ ಮಾಡಿತ್ತು. . ಆಗ ಅಲ್ಲಿದ್ದ ಸಿಬ್ಬಂದಿಗಳು ಎದ್ದುಬಿದ್ದು ಓಡಿದರು. ಆದ್ರೆ ವಿನಯ್ ಗೆ ಓಡಲು ಸಾಧ್ಯವಾಗದೆ ಎಡವಿ ಬಿದ್ದರು. ಆಗ ಕಾಡಾನೆ ಸೊಂಡಲು ಮತ್ತು ಬಲಗಾಲನ್ನು ವಿನಯ್ ಎದೆಯ ಮೇಲೆ ಸವರಿದೆ. ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದ ಸಿಬ್ಬಂದಿಗಳು ಏರ್ ಫೈರ್ ಮಾಡಿ ಸದ್ದು ಮಾಡಿದ್ದಾರೆ. ಆನೆ ಬಿಟ್ಟು ಕದಲಿದಾಗ ಮತ್ತೊಬ್ಬ ವೈದ್ಯರು ಕಾಡಾನೆಯನ್ನು ಡಾರ್ಟ್ ಮಾಡಿದ್ದಾರೆ. ಗಾಯಾಳು ವಿನಯ್ ಗೆ ತಕ್ಷಣ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯ್ತು.
ಬಿಜೆಪಿ ಪರ ಅಧಿಕಾರಿಗಳೇ ಮೊದಲ ಟಾರ್ಗೆಟ್! ಸಂಸದರಿಗೆ ಸಹಕರಿಸುವ ಅಧಿಕಾರಿಗಳಿಗೆ ವರ್ಗಾವಣೆ ಎಂದ ಬೇಳೂರು ಗೋಪಾಲಕೃಷ್ಣ!
ವಿಶೇಷ ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿಗೆ ಶಿಫ್ಟ್
ವಿನಯ್ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಗಾಯಾಳುವನ್ನು ಏರ್ ಲಿಫ್ಟ್ ಮಾಡಬೇಕೆಂದು ವೈದ್ಯರು ಸಲಹೆ ನೀಡಿದಾಗ ಅಧಿಕಾರಿಗಳು ಹಿಂದೆ ಮುಂದೆ ನೋಡದೆ ಗ್ರೀನ್ ಸಿಗ್ನಲ್ ನೀಡಿದ್ರು. ಆದರೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅನುಮತಿ ಸಿಗಲಿಲ್ಲ. ಎರಡನೆಯದಾಗಿ ಬಾಡಿ ತುಂಬಾ ಶೇಖ್ ಆದ್ರೆ ರೋಗಿ ಆರೋಗ್ಯ ಮತ್ತಷ್ಟು ಗಂಭೀರವಾಗುತ್ತೆ. ಹೀಗಾಗಿ ಬೈ ರೂಟ್ ಅಂಬುಲೆನ್ಸ್ ಮೂಲಕ ಎಕ್ಮಾ ಟ್ರೀಟ್ ಮೆಂಟ್ ನಲ್ಲಿ ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ನುರಿತ ವೈದ್ಯರ ಚಿಕಿತ್ಸೆಗೆ ವಿನಯ್ ಸ್ಪಂಧಿಸಿದ್ದು, ದಿನದಿನಕ್ಕೂ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.