ಪ್ರವಾಸ ಫಿಕ್ಸ್​ ಮಾಡಂಗಿಲ್ಲ! ಶಿವಮೊಗ್ಗದಲ್ಲಿ ಮತದಾನದ ದಿನ ಯಾವೆಲ್ಲಾ ಟೂರಿಸ್ಟ್​ ಪ್ಲೇಸ್ ಬಂದ್ ಆಗುತ್ತೆ ಗೊತ್ತಾ?

Do you know which tourist places will be closed on polling day in Shimoga?/ ಮತದಾನದ ದಿನ ಜನರು ಮತಗಟ್ಟೆಗೆ ಹೋಗಿ ಮತದಾನ ಮಾಡಲಿ, ಇದಕ್ಕೆ ಬದಲಾಗಿ ಪ್ರವಾಸಕ್ಕೆ ಹೋಗದಿರಲಿ, ಅದರಿಂದ ಬೇರೆಯವರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಪ್ರಸಿದ್ಧ ಪ್ರವಾಸಿ ಸ್ಥಳಗಳು ಮತದಾನದ ದಿನ ಬಂದ್ ಆಗಿರಲಿವೆ.

ಪ್ರವಾಸ ಫಿಕ್ಸ್​ ಮಾಡಂಗಿಲ್ಲ!  ಶಿವಮೊಗ್ಗದಲ್ಲಿ ಮತದಾನದ ದಿನ  ಯಾವೆಲ್ಲಾ ಟೂರಿಸ್ಟ್​ ಪ್ಲೇಸ್ ಬಂದ್ ಆಗುತ್ತೆ ಗೊತ್ತಾ?

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗ/  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತದಾನವಾಗಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ವಿಶೇಷವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಸ್ಥಳಗಳಲ್ಲಿಯು ಮತದಾನಕ್ಕೆ ಗಮನಾರ್ಹ ಸಹಕಾರ ಸಿಗುತ್ತಿದೆ. ಪೂರಕವಾಗಿ ಹೇಳುವುದಾದರೆ, ಶಿವಮೊಗ್ಗ ಜಿಲ್ಲೆ ವಿವಿಧ ಪ್ರವಾಸಿ ತಾಣಗಳು ಮತದಾನದ ದಿನದಂದು ಬಂದ್ ಇರಲಿದೆ. 

SSLC  ಶಿವಮೊಗ್ಗದಲ್ಲಿ 624 ಅಂಕ ತೆಗೆದವರು ಯಾರು ಗೊತ್ತಾ? ಜಿಲ್ಲೆಯ Rank  ಕುಸಿಯಲು  ಕಾರಣ ಏನು? ಯಾವ ತಾಲ್ಲೂಕಿನಲ್ಲಿದೆ ಕಡಿಮೆ ಫಲಿತಾಂಶ?

ಪ್ರವಾಸಿ ತಾಣಗಳು ಬಂದ್ 

ಮತದಾನದ ದಿನ ರಜೆ ಇರುವ ಹಿನ್ನೆಲೆಯಲ್ಲಿ ಜನರು ವೋಟು ಹಾಕುವುದನ್ನ ಬಿಟ್ಟು ಕುಟುಂಬ ಸಮೇತ ಪ್ರವಾಸಕ್ಕೆ ಹೊರಡುವ ಸಾಧ್ಯತೆಗಳಿರುತ್ತದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಹುತೇಕ ಪ್ರವಾಸಿ ಕೇಂದ್ರಗಳು ಅಂದು ಪ್ರವಾಸಿಗರಿಗೆ ನಿರ್ಬಂಧ ಹೇರುತ್ತಿದೆ. 

KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್ 

ಸಿಗಂದೂರು ಚೌಡೇಶ್ವರಿ ದರ್ಶನ ಇರಲ್ಲ

ಮುಖ್ಯವಾಗಿ ಶಿವಮೊಗ್ಗದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮತದಾನದ ದಿನದಂದು ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಸಂಬಂಧ  ದೇವಿಯ ಭಕ್ತಾಧಿಗಳು, ಸಾರ್ವಜನಿಕರು ಶ್ರೀಕ್ಷೇತ್ರಕ್ಕೆ ಆಗಮಿಸುವ ಅಭಿಲಾಷೆಯನ್ನು ಹೊಂದಿದ್ದರೆ ಯಾತ್ರಾದಿನವನ್ನು ಮುಂದೂಡಿ ಎಂದು ಈಗಾಗಲೇ  ಸಿಗಂದೂರು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿದ್ದಾರೆ. 

ಕವಿಶೈಲಕ್ಕಿಲ್ಲ ಪ್ರವೇಶ 

ಇನ್ನೂ ಇತ್ತ  ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೇ. 10ರಂದು ಕುವೆಂಪು ಅವರ ಕವಿಶೈಲ ಸ್ಮಾರಕವು ಮುಚ್ಚಿರಲಿದೆ. ಈ ಸಂಬಂಧ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕುಪ್ಪಳಿಯ ಕವಿಮನೆ, ಕವಿಶೈಲದ ಸ್ಮಾರಕ ಮತ್ತು ಹಿರೇಕೂಡಿಗೆ ಕವಿ ಜನ್ಮಸ್ಥಳ ಸ್ಮಾರಕವು ಬುಧವಾರ ಮುಚ್ಚಿರುತ್ತದೆ. ಆ ದಿನ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 

ಜೋಗ ಜಲಪಾತ ಕಾಣಲು ಆಗಲ್ಲ

ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಮತದಾನದ ದಿನದಂದು ನಿರ್ಬಂಧ ವಿಧಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕರ ಗಮನ ಸೆಳೆಯುಲು ಜೋಗದಲ್ಲಿ ಪ್ಲೆಕ್ಸ್ ಕೂಡ ಹಾಕಲಾಗಿದೆ.  ಜೋಗ ನೋಡಲು ಬರುವ ಪ್ರವಾಸಿಗರಿಂದಾಗಿ  ವ್ಯಾಪಾರಸ್ಥರು, ಛಾಯಾಚಿತ್ರಗಾರರು, ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೊ ಚಾಲಕರು, ಟ್ಯಾಕ್ಸಿ ಚಾಲಕರು, ಭದ್ರತಾ ಸಿಬ್ಬಂದಿ ಹೀಗೇ ಹಲವರು ಮತದಾನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದು, ಅಂದು ನಿರ್ಬಂಧ ಹೇರುವ ಮೂಲಕ ಮತದಾನಕ್ಕೆ ಪ್ರೇರಣೆ ನೀಡಲಾಗುತ್ತಿದೆ. 

ಲಯನ್​ ಸಫಾರಿ ಬಂದದ್, ಆನೆ ಬಿಡಾರವೂ ಡೌಟ್

ಇತ್ತ ತ್ಯಾವರೆ ಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿಯು ಮತದಾನದದಿನದಂದು ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬಹುತೇಕ ಸಕ್ರೆಬೈಲ್ ಆನೆ ಬಿಡಾರವೂ ಸಹ ಪ್ರವಾಸಿಗರಿಗೆ ಪ್ರವೇಶ ನೀಡುವುದು ಅನುಮಾನ. ಇಷ್ಟೆ ಅಲ್ಲದೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಅಂದು ಬಂದ್ ಆಗಿರುವ ಸಾದ್ಯತೆ ಇದೆ.  

liquor ban/ ಎಲ್ಲಿ ಹುಡುಕಿದರೂ ಸಿಗೋದಿಲ್ಲ ಮದ್ಯ! ಮೂರುವರೆ ದಿನ ರಾಜ್ಯದೆಲ್ಲೆಡೆ ಲಿಕ್ಕರ್ ಬ್ಯಾನ್

ಶಿವಮೊಗ್ಗ/ ನಿನ್ನೆ ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೆ , ರಾಜ್ಯದೆಲ್ಲೆಡೆ ಮದ್ಯ ಮಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ.  ಮೇ 10 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ನಿನ್ನೆಯಿಂದಲೇ ಮದ್ಯ ಮಾರಾಟ ನಿಷೇಧಗೊಳಿಸಿ ಆದೇಶಿಸಲಾಗಿದೆ.

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಎಲ್ಲಿವರೆಗೂ ಈ ನಿರ್ಬಂಧ 

  • ಮೇ 08 ಸಂಜೆ 5 ಗಂಟೆಯಿಂದ ಗುರುವಾರ ಅಂದರೆ ಮೇ 11 ರ ಬೆಳಗ್ಗೆ  6 ಗಂಟೆವರೆಗೆ ರಾಜ್ಯದಲ್ಲಿ ಮದ್ಯ ಮಾರಾಟವ  ನೀಷೇಧವಿರಲಿದೆ. 

  • ಇನ್ನೂ   ಚುನಾವಣಾ ಫಲಿತಾಂಶದ ಅಂದರೆ 13 ಮೇ 2023 ರಂದು  ಬೆಳಿಗ್ಗೆ 6 ಗಂಟೆಯಿಂದ ಮರುದಿನ 14 ಮೇ 2023ರ ಬೆಳಿಗ್ಗೆ  6 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ 

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

 ಮತದಾನದ ಮೇಲೆ ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ಹಾಗೂ ಅಹಿತಕರ ಘಟನೆಗೆ ಆಸ್ಪದವಾಗದಂತೆ ಮದ್ಯ ಮಾರಾಟವನ್ನು ನಿಷೇಧಗೊಳಿಸಲಾಗಿದೆ. ಅಲ್ಲದೆ ನಿಷೇದಿತ ದಿನಗಳನ್ನು ಶುಷ್ಕದಿನವನ್ನಾಗಿಸಲಾಗಿದೆ. 

 

SSLC  ಶಿವಮೊಗ್ಗದಲ್ಲಿ 624 ಅಂಕ ತೆಗೆದವರು ಯಾರು ಗೊತ್ತಾ? ಜಿಲ್ಲೆಯ Rank  ಕುಸಿಯಲು  ಕಾರಣ ಏನು? ಯಾವ ತಾಲ್ಲೂಕಿನಲ್ಲಿದೆ ಕಡಿಮೆ ಫಲಿತಾಂಶ?

ತೀರ್ಥಹಳ್ಳಿ/ ಶಿವಮೊಗ್ಗ ಇಲ್ಲಿನ ಚಿಟ್ಟೆಬೈಲಿನಲ್ಲಿರುವ ಪ್ರಜ್ಞಾಭಾರತಿ ಆಂಗ್ಲ‌ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎಚ್.ಎಸ್.ಅಮಿತ್ ಶಾಸ್ತ್ರಿ 624 ಅಂಕ ಗಳಿಸಿದ್ದಾರೆ.

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಇವರು ಶಿವಪ್ರಸಾದ್ ಮತ್ತು ವೀಣಾ ಅವರ ಪುತ್ರರಾಗಿದ್ದಾರೆ. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದಾರೆ.  ಇನ್ನೂ  ಬೆಂಗಳೂರಿನ ಹೊಸೂರು‌ ರಸ್ತೆಯಲ್ಲಿರುವ ನ್ಯೂ ಮೆಕಾಲೆ ಇಂಗ್ಲಿಷ್ ಶಾಲೆಯ ಭೂವಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಶಾಲೆಯ ಯಶಸ್ ಗೌಡ, ಸವದತ್ತಿಯ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್, ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆಯ ಭೀಮನಗೌಡ ಹನುಮಂತಗೌಡ ಪಾಟೀಲ್ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಲೆನಾಡಿನಲ್ಲಿ ಕಮ್ಮಿಯಾಯ್ತು ಸ್ಕೋರ್​!?

ಇನ್ನೂ ಈ ಸಲ  ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ  29 ನೇ ಸ್ಥಾನ ಪಡೆದುಕೊಂಡಿದೆ.  ಯಾವಾಗಲು 15 ರೊಳಗೆ ಇರುತ್ತಿದ್ದ ಸ್ಥಾನ ಈ ಸಲ ಮತ್ತಷ್ಟು ಕುಸಿದಿದ್ದು, ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಚಿಂತನೆ ಮಾಡಬೇಕಾದ ಪ್ರಶ್ನೆ ಮೂಡಿದೆ. 

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಭದ್ರಾವತಿ ಮತ್ತು ಶಿಕಾರಿಪುರ ತಾಲೂಕಿನ ಫಲಿತಾಂಶಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ,  ಭದ್ರಾವತಿಯಲ್ಲಿ ಶೇ. 75ರಷ್ಟು ಫಲಿತಾಂಶ ಹೊರಬಿದ್ದಿದೆ. ಇನ್ನೂ ಸ್ಥಾನ ಶಿಕಾರಿಪುರ ತಾಲೂಕಿನಲ್ಲಿ, ಶೇ. 81ರಷ್ಟು, ಶಿವಮೊಗ್ಗ ಸಾಗರ-85, ಸೊರಬ-86, ತೀರ್ಥಹಳ್ಳಿ ಮತ್ತು ಹೊಸನಗರ-91 ರಷ್ಟು ಫಲಿತಾಂಶ ಬಂದಿದೆ. 

ಭದ್ರಾವತಿಯ ಉರ್ದು ಶಾಲೆಯೊಂದರಲ್ಲಿ 152 ಮಕ್ಕಳು ಎಸ್ ಎಸ್ ಎಲ್‌ ಸಿ ಪರೀಕ್ಷೆ ಬರೆದಿದ್ದು, ಆ ಪೈಕಿ 56 ಮಕ್ಕಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ವಿಶೇಷ ಅಂದರೆ,  71 ಶಾಲೆಗಳಲ್ಲಿ ನೂರರಷ್ಟು ಸಾಧನೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.



ವಿಡಿಯೋವನ್ನು  ಭಾರತೀಯ ಅರಣ್ಯಸೇವೆಯ ಅಧಿಕಾರಿ ಸುಶಾಂತ್ ನಂದಾ ರವರ ಟ್ವಿಟ್ಟರ್‌ನಲ್ಲಿ ಮೊದಲು ಪೋಸ್ಟ್ ಆಗಿದ್ದು ಆನಂತರ ಎಲ್ಲೆಡೆ ವೈರಲ್​ ಆಗಿದೆ. ವಿಶೇಷ ಅಂದರೆ, ಈ ವಿಡಿಯೋ ದೃಶ್ಯ ಶಿವಮೊಗ್ಗ ಜಿಲ್ಲೆ ಆಗುಂಬೆಯದ್ದಾಗಿದೆ

15 ಅಡಿ ಉದ್ದ ಬೃಹತ್ ಗಾತ್ರದ ನಾಗರ ಹಾವನ್ನು ಹಾವು ಹಿಡಿಯುವ ತಜ್ಞ ಎಸ್ ಎಸ್​ ಜಯಕುಮಾರ್​, ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಿರುವ ವಿಡಿಯೋವನ್ನ ಸುಶಾಂತ್ ನಂದಾ ಹಂಚಿಕೊಂಡಿದ್ದು, ಸದ್ಯ ದೃಶ್ಯ ವೈರಲ್​ ಆಗಿದೆ. 

 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media