Dina Bhavishya 11 Feb 2026 / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಕೃಷ್ಣ ಪಕ್ಷದ ನವಮಿ ತಿಥಿಯು ಬೆಳಗ್ಗೆ 9.38 ರವರೆಗೆ ಇರಲಿದ್ದು, ನಂತರ ದಶಮಿ ಆರಂಭವಾಗಲಿದೆ. ಅನುರಾಧ ನಕ್ಷತ್ರವು ಬೆಳಗ್ಗೆ 10.52 ರವರೆಗೆ ಇದ್ದು, ನಂತರ ಜ್ಯೇಷ್ಠಾ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರುತ್ತದೆ. ಅಮೃತ ಘಳಿಗೆ ರಾತ್ರಿ 3.40 ರಿಂದ 5.28 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಮತ್ತು ಯಮಗಂಡ ಕಾಲ ಬೆಳಗ್ಗೆ 7.30 ರಿಂದ 9.00 ರವರೆಗೆ ಇರುತ್ತದೆ. (Kannada Daily Horoscope)

ಇವತ್ತಿನ ರಾಶಿಫಲ/ Dina Bhavishya 11 Feb 2026
ಮೇಷ / ಆಕಸ್ಮಿಕ ಪ್ರಯಾಣ. ಆರ್ಥಿಕ ಬಿಕ್ಕಟ್ಟು, ಆರೋಗ್ಯದಲ್ಲಿ ವ್ಯತ್ಯಯ. ಶ್ರಮದ ದಿನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ದಿನ.
ವೃಷಭ / ಕೆಲಸಗಳಲ್ಲಿ ಜಯ,ಪ್ರಮುಖ ಮಾಹಿತಿ ಲಭ್ಯವಾಗಲಿವೆ. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ದಿನವಾಗಿದ್ದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವರು.ಉದ್ಯೋಗ ಮತ್ತು ವ್ಯಾಪಾರ ಸರಾಗವಾಗಿ ಸಾಗಲಿದೆ.
ಮಿಥುನ / ಹೊಸ ಕೆಲಸಗಳಿಗೆ ಶ್ರೀಕಾರ, ಶುಭ ಸುದ್ದಿಗಳು ಕೇಳಿ ಬರಲಿವೆ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರಲಿದ್ದು, ವಸ್ತು ಲಾಭವಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಸಂತೃಪ್ತಿಕರವಾಗಿರುತ್ತವೆ.

ಕರ್ಕಾಟಕ / ಕೆಲಸಗಳನ್ನು ಮುಂದೂಡುವ ಸಾಧ್ಯತೆಯಿದೆ. ಆರ್ಥಿಕ ವ್ಯವಹಾರ ನಿರಾಸೆ ಉಂಟುಮಾಡಲಿದ್ದು, ಶ್ರಮ ತಪ್ಪುವುದಿಲ್ಲ. ದೈವ ದರ್ಶನ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಕಿರಿಕಿರಿ.
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
ಸಿಂಹ / ಸಾಲ ಮಾಡುವ ಸಂಭವ,ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೆಲಸಗಳಲ್ಲಿ ಅಡೆತಡೆ, ಅನಾರೋಗ್ಯ ಉದ್ಯೋಗ ಮತ್ತು ವ್ಯಾಪಾರ ಸಾಮಾನ್ಯ.
ಕನ್ಯಾ / ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳವರು. ಆರ್ಥಿಕ ಅಭಿವೃದ್ಧಿ. ಪ್ರಮುಖ ವ್ಯಕ್ತಿಗಳ ಪರಿಚಯವಾಗಲಿದ್ದು, ಗೌರವ ಲಭಿಸುತ್ತದೆ, ಉದ್ಯೋಗ ಮತ್ತು ವ್ಯಾಪಾರ ಈ ದಿನ ಸರಾಗವಾಗಿ ನಡೆಯಲಿದೆ.
ತುಲಾ / ಸಾಲ ಆಗಬಹುದು, ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕುಟುಂಬದಲ್ಲಿ ಕಿರಿಕಿರಿ ಮತ್ತು ಸ್ನೇಹಿತರೊಂದಿಗೆ ಮಾತಿನ ಚಕಮಕಿ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಒಡಕು ಮೂಡಬಹುದು
ವೃಶ್ಚಿಕ / ನೂತನ ಉದ್ಯೋಗ ಪ್ರಾಪ್ತಿಯಾಗಲಿದ್ದು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ಸಾಹದ ವಾತಾವರಣವಿರುತ್ತದೆ. ಕಾರ್ಯಜಯ ಸಿಗಲಿದ್ದು, ಸಂತೋಷದಲ್ಲಿ ದಿನ ಕಳೆಯುವರು.
ಧನುಸ್ಸು / ಕೆಲಸ ಮುಂದಕ್ಕೆ ಹೋಗುವುದಿಲ್ಲ. ಕುಟುಂಬದ ಸದಸ್ಯರೊಂದಿಗೆ ಜಗಳ. ದೈವ ದರ್ಶನ, ಶ್ರಮ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲ ಸಾಮಾನ್ಯ ದಿನ.

ಮಕರ /ಪರಿಚಯ ಹೆಚ್ಚಾಗಲಿದ್ದು, ಆಶ್ಚರ್ಯಕರ ಘಟನೆಗಳು ನಡೆಯಲಿವೆ. ಅಮೂಲ್ಯ ಮಾಹಿತಿ ಲಭ್ಯವಾಗಲಿದ್ದು, ಉದ್ಯೋಗ ಪ್ರಯತ್ನ ಸಫಲವಾಗುತ್ತವೆ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಈ ದಿನ ಅನುಕೂಲ.
ಶಿವಮೊಗ್ಗ: ಸೋಗಾನೆ ಜೈಲಿಗೆ ಗಾಂಜಾ, ಮೊಬೈಲ್ ಎಸೆದಿದ್ದ ನಾಲ್ವರು ಅರೆಸ್ಟ್
ಕುಂಭ / ಹೊಸ ಕೆಲಸ ಕೈಗೆತ್ತಿಕೊಳ್ಳಲಿದ್ದು, ಆರ್ಥಿಕ ವ್ಯವಹಾರಗಳಲ್ಲಿ ಪ್ರಗತಿ. ವಾಹನ ಯೋಗ, ಪ್ರಮುಖ ವ್ಯಕ್ತಿಗಳ ಪರಿಚಯವಾಗಲಿದೆ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಹೊಸ ಆಸೆ ಚಿಗುರುತ್ತವೆ.
ಮೀನ / ಆರ್ಥಿಕ ಬಿಕ್ಕಟ್ಟು ಎದುರಾಗಲಿದ್ದು, ದೂರ ಪ್ರಯಾಣ ಮಾಡಬೇಕಾಗಬಹುದು. ಕಿರಿಕಿರಿ ಮತ್ತು ಆಧ್ಯಾತ್ಮಿಕ ಚಿಂತನೆ ಇರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡದ ದಿನ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

ನವಮಿ ದಿನದ ಪಂಚಾಂಗ: ದೂರ ಪ್ರಯಾಣ, ಕೆಲಸದಲ್ಲಿ ಜಯ, ಉದ್ಯೋಗ ಭಾಗ್ಯ, ವಾಹನ ಯೋಗ ಯಾರಿಗೆಲ್ಲಾ?Dina Bhavishya 11 Feb 2026,Kannada Daily Horoscope

