ಡಾ.ಬಿ.ಡಿ ಬೂಕಾಂತ್​ಗೆ ರಾಜ್ಯ ಸಚಿವ ದರ್ಜೆ ಸ್ಥಾನ! ಶಿವಮೊಗ್ಗ, ಶಿಕಾರಿಪುರ ಕಾಂಗ್ರೆಸ್​ ವಲಯದಲ್ಲಿ ಸಂಚಲನ! ಅಚ್ಚರಿ! ಅಸಮಾಧಾನ?

ಕೊನೆಯ ನವೀಕರಣ: 11 ಫೆಬ್ರವರಿ 2026, 5:50 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
BJP Leader Bhukanth
BJP Leader Bhukanth

ಮಲೆನಾಡು ಟುಡೆ ಸುದ್ದಿ / ರಾಜ್ಯ ಸರ್ಕಾರದ ನಿಗಮ-ಮಂಡಳಿ ಅಧ್ಯಕ್ಷರಿಗೆ ನೀಡುವ ರಾಜ್ಯ ಮಂತ್ರಿ ದರ್ಜೆಯ ಸ್ಥಾನಮಾನದ ಪಟ್ಟಿಯಲ್ಲಿ ಶಿಕಾರಿಪುರ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಶಿವಮೊಗ್ಗ, ಶಿಕಾರಿಪುರ ಕಾಂಗ್ರೆಸ್​ ವಲಯದಲ್ಲಿ ಅಸಮಾಧಾನವೆ ಭುಗಿಲೇಳುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಇಷ್ಟೆಕ್ಕೆಲ್ಲಾ ಕಾರಣವಾಗಿರುವುದು ಪ್ರಕಟಗೊಂಡಿರುವ ಸರ್ಕಾರದ ಅಧಿಸೂಚನೆಯಲ್ಲಿ ಶಿಕಾರಿಪುರದ ಬಿಜೆಪಿ ಮುಖಂಡ ಡಾ. ಬಿ.ಡಿ ಭೂಕಾಂತ್ ಅವರಿಗೆ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ.

BJP Leader Bhukanth
BJP Leader Bhukanth

ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ. ಏಕೆಂದರೆ ಬಿಡಿ ಬೂಕಾಂತ್ (BJP Leader Bhukanth) ಬಿಜೆಪಿಯಲ್ಲಿ ಗುರುತಿಸಿಕೊಂಡವರು, ಮತ್ತು ಬಿಎಸ್​ವೈ ಕುಟುಂಬದ ಆಪ್ತರು ಎಂಬ ವಿಚಾರ. ಬಿಜೆಪಿಯಲ್ಲಿ ಗುರುತಿಸಿಕೊಂಡವರು ಎಂದು ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ತಮ್ಮ ಸೋಶಿಯಲ್ ಗ್ರೂಪ್​ಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಪಟ್ಟಿ ಹೊರಬಿದ್ದ ಬೆನ್ನಲ್ಲೆ ಶಿಕಾರಿಪುರ ತಾಲ್ಲೂಕು ಕಾಂಗ್ರೆಸ್ ಹಾಗೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ. 

ರಾಹುಲ್ ಗಾಂಧಿ ಮೆಚ್ಚಿ ಬೆನ್ನುತಟ್ಟಿದ್ದ ಶಿವಮೊಗ್ಗ NSUI ಚೇತನ್​ಗೆ ಮಂಡಳಿ ಅಧ್ಯಕ್ಷಸ್ಥಾನ!

ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತಕ್ಕೆ  ಬಿ.ಡಿ ಬೂಕಾಂತ್​ರವರನ್ನು ಅಧ್ಯಕ್ಷರು. ಈಗಾಗಲೇ ಐದು ವರ್ಷ ಅವರು ಅಧ್ಯಕ್ಷರಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ದರ್ಜೆ ಸ್ಥಾನಮಾನ ನೀಢಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡರ ಪ್ರತಿಕ್ರಿಯೆ ಇನ್ನಷ್ಟೆ ಲಭ್ಯವಾಗಬೇಕಿದೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebookwhatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epapermalenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

BJP Leader Bhukanth
BJP Leader Bhukanth
BJP Leader Bhukanth Appointed by Congress Gov,Karnataka Politics, Corporation Board Appointments,ಮಲೆನಾಡು ಟುಡೆ.ಡಾ. ಭೂಕಾಂತ್

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor