ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸ್ ಸ್ಟೇಷನ್ ಎದುರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸ್ತಿದ್ದಾರೆ. ಇದಕ್ಕೆ ಕಾರಣ ಮಾಳೂರು ಪೊಲೀಸರು ಕಾಂಗ್ರೆಸ್ ಕಡೆಯವರು ಮರಳು ಸಾಗಿಸಿದರೇ ಕೇಸ್ ಹಾಕುತ್ತಿದ್ದಾರೆ ಎಂಬುದು ಆರೋಪ .
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ / ಸಂಘಟನೆಗಳ ಪ್ರತಿಭಟನೆ
ನಡೆದಿದ್ದು ಏನು?
ಹೊಳೆಕೊಪ್ಪದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಎರಡು ಕಡೆಯುವರು ಮರಳು ತುಂಬುತ್ತಿದ್ದಾರೆ. ಈ ಮಧ್ಯೆ ನಿನ್ನೆ ರಾತ್ರಿ ರೇಡ್ ಮಾಡಿದ್ದ ಮಾಳೂರು ಪೊಲೀಸರು ಕಾಂಗ್ರೆಸ್ ಪಕ್ಷದ ಕಡೆಯವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ಖಾಲಿಯಿದ್ದ ಪಿಕಪ್ ಲೋಡ್ ಮಾಡಿಸಿ ಸೀಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು
ಕಿಮ್ಮನೆ ರತ್ನಾಕರ್ ಆಕ್ರೋಶ
ಇನ್ನೂ ಇದೇ ವಿಚಾರವಾಗಿ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಇವತ್ತು ಮಾಳೂರು ಪೊಲೀಸ್ ಸ್ಟೇಷನ್ ಎದುರೇ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕಾರ್ಯಕರ್ತರ ಜೊತೆಯಲ್ಲಿ ಆಗಮಿಸಿ ಪ್ರತಿಭಟಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು? ಬಿಜೆಪಿಯವರಿಗೊಂದು , ಕಾಂಗ್ರೆಸ್ನವರಿಗೊಂದು ಆಗಬಾರದು? ಹಾಕಿದ್ರೆ ಇಬ್ಬರ ಮೇಲೂ ಕೇಸು ಹಾಕಬೇಕು! ಅದನ್ನು ಬಿಟ್ಟು, ಮಾಳೂರು ಪೊಲೀಸರು ಕಾಂಗ್ರೆಸ್ ಕಡೆಯವರನ್ನು ಟಾರ್ಗೆಟ್ ಮಾಡಿ ರೇಡ್ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com