BIG NEWS | ರಾಜ್ಯದಲ್ಲಿರುವ ಎರಡು ಗ್ರಾಮೀಣ ಬ್ಯಾಂಕ್ ವೀಲಿನ | ಈ ಮಾಹಿತಿ ಬಹುಮುಖ್ಯ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 8, 2025 ‌‌ 

ವಿವಿಧ ಬ್ಯಾಂಕ್​ಗಳ ವಿಲೀನದ ನಂತರ ಇದೀಗ ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್​ಗಳ ವಿಲೀನಕ್ಕೆ ಮುಂದಾಗಿದ್ದು, ಈ ಸಂಬಂಧ ಮೇ 1  ರಿಂದಲೇ ಒಂದು ರಾಜ್ಯ ಒಂದು RRB ಕಾನೂನು ಜಾರಿಗೆ ಬರಲಿದೆ. 

ಈ ನಿಟ್ಟಿನಲ್ಲಿ ದೇಶದಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿ  ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. 

ಮೇ 1 ರಿಂದ ಈ ಬ್ಯಾಂಕ್​ಗಳು ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಪ್ರಾಯೋಜಕ ಬ್ಯಾಂಕ್ ಆಗಿ ಕೆನರಾ ಬ್ಯಾಂಕ್ ಕೆಲಸ ಮಾಡಲಿದ್ದು ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಇರಲಿದೆ.  

ಉಳಿಂದತೆ ದೇಶದಲ್ಲಿ  11 ರಾಜ್ಯಗಳಲ್ಲಿರುವ 15 ಆರ್‌ಆರ್‌ಬಿಗಳನ್ನು ವಿಲೀನಗೊಳ್ಳುತ್ತಿದ್ದು, ಒಟ್ಟಾರೆ  43 ಬ್ಯಾಂಕ್‌ಗಳ ಸಂಖ್ಯೆಯು 28ಕ್ಕೆ ಇಳಿಯಲಿದೆ.

Share This Article