ಜಸ್ಟ್​ ₹3K ಗೆ ಆಸೆ ಪಟ್ಟು ಜೈಲು ಪಾಲಾದ ಅಧಿಕಾರಿ | ಸಾಗರದಲ್ಲಿ ಹೀಗಾಯ್ತು ಓದಿ

ಹಂಚಿಕೊಳ್ಳಿ
WhatsApp Facebook X Telegram
ಜಸ್ಟ್​ ₹3K ಗೆ ಆಸೆ ಪಟ್ಟು ಜೈಲು ಪಾಲಾದ ಅಧಿಕಾರಿ | ಸಾಗರದಲ್ಲಿ ಹೀಗಾಯ್ತು ಓದಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌ 

ಜಸ್ಟ್​ ಮೂರು ಸಾವಿರ ರೂಪಾಯಿಗಾಗಿ ಸರ್ಕಾರಿ ನೌಕರ ಇದೀಗ ಜೈಲಿಗೆ ಹೋಗಬೇಕಾದ ಸನ್ನಿವೇಶ ಸಾಗರದಲ್ಲಿ ಕಾಣಸಿಕ್ಕಿದೆ. ಇಲ್ಲಿನ ಆರ್​ಐ ಒಬ್ಬರು 3 ಸಾವಿರ ರೂಪಾಯಿ ಕ್ಯಾಶ್ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಗಂಭೀರವಾಗಿದ್ದು, ತನಿಖೆ ಮುಂದುವರಿದಿದೆ. 

ಏನಿದು ಕೇಸ್​ | ಇಲ್ಲಿನ ನಿವಾಯಿಸಯೊಬ್ಬರು ತಹಶೀಲ್ದಾರ್‌ ಕಚೇರಿಯಿಂದ ಅನುಮತಿ ಸಿಗದಿದ್ದರೂ ಜಮೀನು ಸಮತಟ್ಟುಗೊಳಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಸ್ಥಳಕ್ಕೆ ಬಂದ ತಾಳಗುಪ್ಪ ವೃತ್ತದ ಕಂದಾಯ ನಿರೀಕ್ಷಕ ಮಂಜುನಾಥ್ ಎಸ್.ಎಂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಮೊದಲು  ಫೋನ್‌ ಪೇ ಮೂಲಕ ₹3 ಸಾವಿರ ಪಡೆದುಕೊಂಡಿದ್ದರು. ಆನಂತರ ಮೂರು ಸಾವಿರ ರೂಪಾಯಿ ಕ್ಯಾಶ್ ಕೇಳಿದ್ದರು. ಇದನ್ನು ಕೊಡುವಾಗ ಸಂತ್ರಸ್ತ ಲೋಕಾಯುಕ್ತರಿಗೆ ಕಂಪ್ಲೆಂಟ್ ಮಾಡಿದ್ದ. ಕೇಸ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ರೇಡ್ ಮಾಡಿದ್ದರು. 

ಲೋಕಾಯುಕ್ತ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ, ಸಿಬ್ಬಂದಿ ಟೀಕಪ್ಪ, ಮಂಜುನಾಥ ಎಂ., ಸುರೇಂದ್ರ ಎಚ್.ಜಿ., ಯೋಗೇಶ್ ಜಿ.ಸಿ., ಪ್ರಶಾಂತ್ ಕುಮಾರ್, ಚನ್ನೇಶ್, ದೇವರಾಜ್, ಅರುಣ್ ಕುಮಾರ್, ಚಂದ್ರಿಬಾಯಿ, ಗಂಗಾಧರ, ತರುಣ್ ಕುಮಾರ್, ಜಯಂತ್ ಕೆ.ಸಿ., ಗೋಪಿ ವಿ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor