ಕೊಟ್ಟ ದುಡ್ಡು ಕೇಳಿದ್ದಕ್ಕೆ ಡಿಪೋ ಕ್ರಾಸ್ ಬಳಿ ಕರೆಸಿ ನಡೆಸಿದ್ರು ಕೃತ್ಯ! ಭದ್ರಾವತಿ ಓಲ್ಡ್​ ಟೌನ್​ನಲ್ಲಿ ನಡೆದಿದ್ದೇನು?

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಲು ಕರೆದು ಯವಕನ ಮೇಲೆ ಐದಾರು ಮಂದಿ ಹಲ್ಲೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕು ಭದ್ರಾವತಿ ಓಲ್ಡ್ ಟೌನ್​ ಪೊಲೀಸ್ ಠಾಣೆಯ ಲಿಮಿಟ್ಸ್​ನಲ್ಲಿ ಘಟನೆ ನಡೆದಿದೆ. ಈ ವೇಳೆ ವ್ಯಕ್ತಿಯ ಬಳಿಯಿದ್ದ ಚಿನ್ನವನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. 

bhadravati old town police
bhadravati old town police

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಆರೋಪಿ ಬೈಕ್​ ಕೊಡಿಸುವುದಾಗಿ ಹೇಳಿದಾಗಿ ಐವತ್ತು ಸಾವಿರ ರೂಪಾಯಿ ಪಡೆದುಕೊಂಡಿದ್ದ. ಆದರೆ, ಬೈಕ್​ ಕೊಡಿಸದೇ ವಂಚಿಸಿದ್ದ. ಈ ನಡುವೆ ಕೊಟ್ಟ ಹಣವನ್ನಾದರೂ ವಾಪಸ್ ಕೊಡು ಎಂದು ಕೇಳಿದ್ದಕ್ಕೆ, ಆರೋಪಿ ಸಂತ್ರಸ್ತನಿಗೆ ಹಣ ಕೊಡುತ್ತೇನೆ ಡಿಪೋಕ್ರಾಸ್​ ಬಳಿ ಬಾ ಎಂದು ಕರೆಸಿಕೊಂಡಿದ್ದಾನೆ. ಆತನ ಮಾತು ನಂಬಿ ಸ್ಥಳಕ್ಕೆ ಬಂದ ಸಂತ್ರಸ್ತರ ಮೇಲೆ ಆರೋಪಿ ಹಾಗೂ ಆತನ ಜೊತೆಗಿದ್ದ ಆರೋಪಿಗಳು ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಸಚಿನ್​ ಜೊತೆಗೆ ಬಂದಿದ್ದ ಸ್ನೇಹಿತರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ ಸಂತ್ರಸ್ತನ ಮೇಲೆ ಇದ್ದ, 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ, 15 ಸಾವಿರ ಕ್ಯಾಶ್ ಹಾಗೂ ಮೊಬೈಲ್​ ಕಿತ್ತುಕೊಂಡು ಹೋಗಿದ್ದಾರೆ. ಇನ್ನೂ ಈ ವಿಚಾರವಾಗಿ ಸಂತ್ರಸ್ತರು 2 ಬೈಕ್‌ಗಳು ಮತ್ತು 1 ಕಾರಿನಲ್ಲಿ ಮಂಜ (A2), ಗ್ರಾಬ್ರಿಯಲ್ ಸಂತೋಷ ಅಲಿಯಾಸ್ ಇಲಿಮರಿ , ಕುಟ್ಟಿ  ಮತ್ತು ಇತರೆ 5 ರಿಂದ 6 ಜನರು ಹಲ್ಲೆ ನಡೆಸಿದರು ಎಂದು ದೂರು ಕೊಟ್ಟು ಎಫ್​ಐಆರ್​ ದಾಖಲಿಸಿದ್ದಾರೆ. 

bhadravati old town police
bhadravati old town police

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಹಾಗೂ ನಿರ್ದೇಶಕರಾಗಿ ಡಿ.ಎಸ್. ಅರುಣ್ ಆಯ್ಕೆ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಭದ್ರಾವತಿ ಡಿಪೋ ಕ್ರಾಸ್ ಬಳಿ ಹಣ ಕೇಳಿದ ರೈತನ ಮೇಲೆ ರಾಡ್‌ನಿಂದ ಹಲ್ಲೆ, 2.5 ಲಕ್ಷ ರೂ. ದರೋಡೆ , Bhadravathi Robbery Farmer Sachin Attacked with Iron Rod, 2.5 Lakh Gold and Cash Stolen bhadravati old town police station case 
Share This Article