ಶ್ರೀಗಂಧ ಕಳ್ಳರಿಗೆ ಶಾಕ್: ಮಂಡಗದ್ದೆ ರೇಂಜ್​ನಲ್ಲಿ ನಡೆಯಿತು​ ಸೀಕ್ರೆಟ್​ ಆಪರೇಕ್ಷನ್​ ! ಇಬ್ಬರು ಅರೆಸ್ಟ್!

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಶ್ರೀಗಂಧದ ಮರಗಳನನ್ನು ಹಿಡಿದ ಬೆನ್ನಲ್ಲೆ ಇದೀಗ ತೀರ್ಥಹಳ್ಳಿ ರೇಂಜ್​ನಲ್ಲಿ ಅಂತಹುದ್ದೆ ಒಂದು ವರದಿ ಹೊರಬಿದ್ದಿದೆ. ಅಕ್ರಮವಾಗಿ ಶ್ರೀಗಂಧ ಸಾಗಣೆಯಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾ‌ರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದೆ.

Sandalwood seized Mandagadde, 33 Kg Sandalwood smuggling, Thirthahalli Forest, Illegal Sandalwood transport,
Sandalwood seized Mandagadde, 33 Kg Sandalwood smuggling, Thirthahalli Forest, Illegal Sandalwood transport,

33 Kg Sandalwood Seized in Mandagadde

ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆಜಿ ಶ್ರೀಗಂಧದ ತುಂಡುಗಳನ್ನು (33 Kg Sandalwood Seized in Mandagadde) ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿಎಫ್‌ಒ ಅಜ್ಜಯ್ಯ, ಎಸಿಎಫ್ ಮಧುಸೂದನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಇಳಿಕೆ ಇಲ್ಲ, ಏರಿಕೆಯಿಲ್ಲ! ಅಡಿಕೆ ರೇಟು ಎಷ್ಟಿದೆ? ರೈತರಿಗೆ ಸಿಕ್ಕ ದರ ಎಷ್ಟು?

33 Kg Sandalwood Seized in Mandagadde
33 Kg Sandalwood Seized in Mandagadde

ಮೇಲಿನಪಟ್ರೊಳ್ಳಿ ಗ್ರಾಮದ ಸ.ನಂ.06ರಲ್ಲಿ ಶ್ರೀಗಂಧ ಮರ ಕಡಿತಲೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟ ತುಂಡುಗಳ ಜತೆಗೆ ಆರೋಪಿಗಳಾದ ಕಣಗಲಕೊಪ್ಪ ಗ್ರಾಮದ ಸತೀಶ್ (32), ಪ್ರಕಾಶ್ (32) ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಂಡದಲ್ಲಿ ಡಿಆರ್ ಎಫ್‌ಒ ಅಮಿತ್, ಅರಣ್ಯ ರಕ್ಷಕ ಸಿಬ್ಬಂದಿ ಕಿರಣ್‌ ಕುಮಾ‌ರ್, ಮಹಾದೇವ್, ಚಾಲಕ ಅರುಣ್ ಇದ್ದರು ಎಂದು ತಿಳಿದುಬಂದಿದೆ. 

ಶಿವಮೊಗ್ಗದಲ್ಲಿ ಸಿಎಂ ವಿರುದ್ದ ಪ್ರತಿಭಟನೆ, ಹೈಕಮಾಂಡ್​ ಮೆಚ್ಚಿಸಲು ಭಗವದ್ಗೀತೆಗೆ ಅವಮಾನ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗದಲ್ಲಿ ಸಿಎಂ ವಿರುದ್ದ ಪ್ರತಿಭಟನೆ, ಹೈಕಮಾಂಡ್​ ಮೆಚ್ಚಿಸಲು ಭಗವದ್ಗೀತೆಗೆ ಅವಮಾನ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಮಂಡಗದ್ದೆಯಲ್ಲಿ 33 ಕೆಜಿ ಶ್ರೀಗಂಧ ವಶ; ಕಣಗಲಕೊಪ್ಪ ಗ್ರಾಮದ ಇಬ್ಬರು ಆರೋಪಿಗಳ ಬಂಧನ 33 Kg Sandalwood Seized in Mandagadde Two Accused Arrested in Illegal Smuggling Attempt shivamogga news 
Share This Article