ಭದ್ರಾವತಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ!ಎಸ್​ಪಿ ಭೇಟಿ ! ಹೇಗಿದೆ ಬಂದೋಬಸ್ತ್​! ?

Bhadravati Hindu Mahasabha Ganapati Rajbeedi Utsava! ಭದ್ರಾವತಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ!ಎಸ್​ಪಿ ಭೇಟಿ ! ಹೇಗಿದೆ ಬಂದೋಬಸ್ತ್​! ?

ಭದ್ರಾವತಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ!ಎಸ್​ಪಿ  ಭೇಟಿ ! ಹೇಗಿದೆ ಬಂದೋಬಸ್ತ್​! ?

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’

ಶಿವಮೊಗ್ಗದ ಪ್ರಮುಖ ಗಣಪತಿಗಳಲ್ಲಿ ಒಂದಾದ ಭದ್ರಾವತಿ ತಾಲ್ಲೂಕು (Bhadravati Taluk) ಹಿಂದೂ ಮಹಾಸಭಾ ಗಣಪತಿಯ ಅದ್ದೂರಿ ರಾಜಬೀದಿ ಉತ್ಸವ ಇಂದು ನಡೆಯಲಿದೆ. 

ಈ ಹಿನ್ನೆಲೆಯಲ್ಲಿ ವಿಶೇಷ ಭದ್ರತೆಯನ್ನ ಪೊಲೀಸ್ ಇಲಾಖೆ ಕೈಗೊಂಡಿದೆ. ನಿನ್ನೆಯಷ್ಟೆ ಭದ್ರಾವತಿ ಎಸ್​ಪಿ ಮಿಥುನ್ ಕುಮಾರ್ ಭೇಟಿಕೊಟ್ಟಿದ್ದು ಬಂದೋಬಸ್ತ್​ನ್ನು ಖುದ್ದಾಗಿ ಗಮನಿಸಿದರು. ಅಲ್ಲದೆ ಸ್ಥಳೀಯ ಜನರ ಜೊತೆಗೆ ಬೆರೆತ ಎಸ್​ಪಿ ಮಿಥುನ್ ಕುಮಾರ್, ಗಣೇಶನ ರಾಜಬೀದಿ ಉತ್ಸವದ ವ್ಯವಸ್ಥೆಗಳನ್ನು ಪರಿಶೀಲಿಸಿದರು. 

ಇನ್ನೂ   ದಿನಾಂಕ 26-09-2023 ರಂದು ಅಂದರೆ ಇಂದು ನಡೆಯಲಿರುವ  ಭದ್ರಾವತಿ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 10 ಪೊಲೀಸ್  ಉಪಾಧೀಕ್ಷಕರು,

20 ಪೋಲಿಸ್ ನಿರೀಕ್ಷಕರು, 60 ಪೊಲೀಸ್ ಉಪನಿರೀಕ್ಷಕರು, 100 ಸಹಾಯಕ ಪೊಲೀಸ್ ಉಪನಿರೀಕ್ಷಕರು, 600 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 500 ಗೃಹರಕ್ಷಕ ದಳ ಸಿಬ್ಬಂದಿಗಳು, 06 ಡಿಎಆರ್ ತುಕಡಿ, 08 ಕೆಎಸ್ಆರ್.ಪಿ ತುಕಡಿ, 01 ಕ್ಯೂಆರ್.ಟಿ ತುಕಡಿ ಮತ್ತು 01 ಆರ್.ಎ.ಎಫ್ ಕಂಪನಿಯನ್ನು ನಿಯೋಜಿಸಲಾಗಿದೆ. .

ಈ ಸಂಬಂಧ  ಭದ್ರಾವತಿ ನಗರದ ಕನಕ ಮಂಟಪದಲ್ಲಿ  ಬ್ರೀಫಿಂಗ್ ನಡೆಸಿದ ಎಸ್​ಪಿ ಮಿಥುನ್ ಕುಮಾರ್​ , ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?