ಕೆಲಸ ಮುಗಿಸಿ ಮನೆಗೆ ಮರಳುವಾಗ ವಿಧಿ! ಭದ್ರಾವತಿಯಲ್ಲಿ 4 ಪಲ್ಟಿಯಾದ ಗೂಡ್ಸ್​ ವೆಹಿಕಲ್! ಮಹಿಳೆ ಸಾವು

Bhadravathi Road  ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಅಂತರಗಂಗೆ ಸಮೀಪದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ಸರಕು ಸಾಗಣೆ ವಾಹನದ ಚಕ್ರ ಕಳಚಿ ಬಿದ್ದು ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ದೊಡ್ಡೇರಿ ಬಳಿಯ ನೆಟ್ಟಗಲ್ಲಟ್ಟಿ ವಾಸಿ ಬೊಮೋಜಿರಾವ್ ಪತ್ನಿ ಲಕ್ಷ್ಮಮ್ಮ(48) ಮೃತಪಟ್ಟವರು. ನೆಟ್ಟಗಲ್ಲಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕ ಮಹಿಳೆಯರನ್ನು ಪ್ರತಿದಿನ ಗಾಜನೂರು ಸಮೀಪದ ಅಡಕೆ ನರ್ಸರಿ ಕೆಲಸಕ್ಕೆ ಸರಕು ಸಾಗಣೆ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. 

ಭದ್ರಾವತಿ: ಚಲಿಸುತ್ತಿದ್ದ ವಾಹನದ ಚಕ್ರ ಕಳಚಿ ಪಲ್ಟಿ; ಮಹಿಳೆ ಸಾವು, ಐವರು ಆಸ್ಪತ್ರೆಗೆ ದಾಖಲು Bhadravathi Road Accident: One Dead and Five Injured Near Antaragange  

ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಮಂಗಳವಾರ ಸಂಜೆಯು ಸಹ ಎಂದಿನಂತೆ ಕೆಲಸ ಮುಗಿಸಿ ಊರಿಗೆ ವಾಪಸ್ಸಾಗುವಾಗ ಈ ಅಪಘಾತ ಸಂಭವಿಸಿದೆ. ಅಂತರಗಂಗೆ ರುದ್ರಭೂಮಿ ಬಳಿ (Bhadravathi Road) ವಾಹನದ ಚಕ್ರ ಕಳಚಿಬಿದ್ದು ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಪಲ್ಟಿಯಾಗಿತ್ತು. ಅಪಘಾತದಲ್ಲಿ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟರೆ, ವಾಹನದ ಚಾಲಕ ಸೇರಿದಂತೆ ಐವರು ಗಾಯ ಗೊಂಡಿದ್ದಾರೆ. ಗಾಯಗೊಂಡವರನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಭದ್ರಾವತಿ: ಚಲಿಸುತ್ತಿದ್ದ ವಾಹನದ ಚಕ್ರ ಕಳಚಿ ಪಲ್ಟಿ; ಮಹಿಳೆ ಸಾವು, ಐವರು ಆಸ್ಪತ್ರೆಗೆ ದಾಖಲು Bhadravathi Road Accident: One Dead and Five Injured Near Antaragange