ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹೊಸನಗರದ ಬಳಿಕ ಇದೀಗ ಶಿಕಾರಿಪುರದಲ್ಲಿ ಕಾಡಾನೆ ಹಾವಳಿ (Wild Elephant) ಶುರುವಾಗಿದೆ. ಇಲ್ಲಿ ಓಡಾಡುತ್ತಿರುವ ಒಂಟಿ ಸಲಗವೊಂದು ಸ್ಥಳೀಯವಾಗಿ ಭಯ ಸೃಷ್ಟಿ ಮಾಡಿದೆಯಷ್ಟೆ ಅಲ್ಲದೆ ಫಸಲು ಹಾಳು ಮಾಡುತ್ತಿದೆ. ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಕೊರಟಿಕರೆ ಹಾಗೂ ಮಾಯತಮ್ಮನ ಮುಚಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಆನೆ ಕಾಣಿಸಿಕೊಂಡಿದೆ.

ಆನೆ ಮೆಕ್ಕೆಜೋಳ, ಭತ್ತ ಹಾಗೂ ಸೂರ್ಯಕಾಂತಿ ಬೆಳೆಗಳನ್ನ ತುಳಿದು ತಿಂದು ಹಾಳು ಮಾಡಿದೆ ಎಂದು ರೈತರು ಹೇಳುತ್ತಿದ್ದಾರೆ. ಇಲ್ಲಿನ ಶಿವನಪಾದ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಆನೆ ಬೀಡುಬಿಟ್ಟಿದೆ ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಎಸಿಎಫ್ ರವೀಂದ್ರ ನಾಯಕ್ ತಮ್ಮ ಸಿಬ್ಬಂದಿಗಳು ಜೊತೆಗೆ ಕಾಡಾನೆ ಓಡಾಟದ ಬಗ್ಗೆ ಮಾನಿಟರ್ ಮಾಡ್ತಿದ್ದಾರೆ. ಆನೆಯನ್ನು ಜನವಸತಿ ಪ್ರದೇಶದಿಂದ ದೂರ ಓಡಿಸುವ ಪ್ರಯತ್ನ ನಡೆಯುತ್ತಿದೆ. ಹೋತನಕಟ್ಟೆ ಮತ್ತು ಮುಡಬಸಿದ್ದಾಪುರ ಗ್ರಾಮಗಳಲ್ಲಿ ಸಂಚರಿಸಿದ್ದ Wild Elephant ಈ ಆನೆ ಇದೀಗ ಸುಣ್ಣದಕೊಪ್ಪದತ್ತ ಬಂದಿದೆ ಅಂತಾ ಹೆಳಲಾಗುತ್ತಿದ್ದು, ಆನೆಯು ಭದ್ರಾ ವನ್ಯಜೀವಿ ವಲಯದಿಂದ ಬಂದಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.. ಶೆಟ್ಟಿಹಳ್ಳಿ, ಅರಸಾಳು, ರಿಪ್ಪನ್ಪೇಟೆ, ಚೋರಡಿ ಹಾಗೂ ಸೊರಬದ ಉಳವಿ ಮೂಲಕ ಸಾಗಿ ಬಂದಿರುವ ಸಲಗ, ಸಾಗದ್ದೆ, ಕೊಡಕಣೆ, ತೊಗರ್ಸಿ ಮಾರ್ಗವಾಗಿ ಬ್ಯಾಡಗಿವರೆಗೂ ಸಂಚರಿಸಿತ್ತು. ಇದೀಗ ತಾಳಗುಂದ ಹೋಬಳಿಯಲ್ಲಿ ಕಾಣಿಸಿಕೊಂಡಿದೆ.

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿಕಾರಿಪುರದಲ್ಲಿ ಕಾಡಾನೆ ಹಾವಳಿ ಸುಣ್ಣದಕೊಪ್ಪ ಭಾಗದಲ್ಲಿ ಬೆಳೆ ಹಾನಿ, ರೈತರಲ್ಲಿ ಆತಂಕ Wild Elephant Menace in Shikaripura: Crop Damage Reported, Forest Dept Alert