ಭದ್ರಾವತಿ ಕೋರ್ಟ್​ : IPS ಜಿತೇಂದ್ರ ಕುಮಾರ್​ ದಯಾಮ ಚಾರ್ಜ್​ಶೀಟ್​ ಸಲ್ಲಿಸಿದ್ದ ಕೇಸ್​​ನಲ್ಲಿ ನಾಲ್ವರಿಗೆ ಶಿಕ್ಷೆ

ajjimane ganesh

Bhadravathi Court ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ (Conviction) ವಿಧಿಸಿದೆ. ಪ್ರತಿಯೊಬ್ಬರಿಗೂ 2 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ತಲಾ ₹77,000/- ರಂತೆ ಒಟ್ಟು ₹3,08,000/- ದಂಡ ವಿಧಿಸಿ ಆದೇಶ ಹೊರಡಿಸಿದೆ.

ಶಿವಮೊಗ್ಗ : 2 ರೂಪಾಯಿ ಡಾಕ್ಟರ್ ಬಿ.ಎಲ್.ಸುರೇಶ್ ತಳ್ಯಾಳ್​ ಇನ್ನಿಲ್ಲ!

- Advertisement -

ನಡೆದಿದ್ದೇನು?

ಭದ್ರಾವತಿ ತಾಲ್ಲೂಕು ಆನವೇರಿ ಗ್ರಾಮದ ನಿವಾಸಿ ತಿಮ್ಮಪ್ಪ ಎಂಬುವವರ ಮೇಲೆ ಅದೇ ಗ್ರಾಮದ ರಾಜಪ್ಪ, ಭರತ, ರಂಗನಾಥ ಮತ್ತು ಹನುಮಂತಪ್ಪ ಎಂಬುವವರು  2022ರ ನವೆಂಬರ್ 13ರಂದು  ಹಲ್ಲೆ ಮಾಡಿದ್ದರು. 

ಆಸ್ತಿ ವಿವಾದದ ಕಾರಣ ಜಗಳ ತೆಗೆದು,  ಜಾತಿಯ ಹೆಸರಿನಿಂದ ನಿಂದಿಸಿ, ಅಶ್ಲೀಲ ಪದಗಳಿಂದ ಬೈದು.  ಮನೆಯಿಂದ ಹೊರಗೆ ಎಳೆದು ಹಾಕಿ, ನಮ್ಮ ಮನೆಯನ್ನೇ ತೆಗೆದುಕೊಳ್ಳುತ್ತೀಯಾ ಎಂದು ಪ್ರಶ್ನಿಸಿ, ಖಾರದ ಪುಡಿ ಎರಚಿ ಕಾಲುಗಳಿಂದ ಒದ್ದು ಹಲ್ಲೆ ಮಾಡಿ, ಜೀವ ಬೆದರಿಕೆಯನ್ನೂ ಹಾಕಿದ್ದರು.

Bhadravathi Court Delivers Landmark Verdict in SC/ST Act Case: 4 Sentenced.
Bhadravathi Court Delivers Landmark Verdict in SC/ST Act Case: 4 Sentenced.

ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್

ಈ ಘಟನೆಯ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ IPC 143, 147, 148, 504, 323, 324, 506, 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ (SC/ST Act) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿಗಳಾಗಿದ್ದ ಭದ್ರಾವತಿ ಉಪ ವಿಭಾಗದ ASP ಜಿತೇಂದ್ರ ಕುಮಾರ ದಯಾಮ ಐಪಿಎಸ್ ರವರು ತನಿಖೆ ಪೂರ್ಣಗೊಳಿಸಿ , ನ್ಯಾಯಾಲಯಕ್ಕೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು. 

ಈ ಕೇಸ್​ನ ವಿಚಾರಣೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ಕೇಸ್​ನಲ್ಲಿ ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ: 2025ರ ಅಕ್ಟೋಬರ್ 30ರಂದು ತೀರ್ಪು ಪ್ರಕಟಿಸಿದ್ದಾರೆ. 

ಶಿವಮೊಗ್ಗ : ಕರ್ನಾಟಕ ಸಂಘದ ಸಮೀಪ ಬಸ್​ ಸ್ಟ್ಯಾಂಡ್​ ಬಳಿ ವ್ಯಕ್ತಿ ಶವ ಪತ್ತೆ! ಆಗಬೇಕಿದೆ ಗುರುತು ಪತ್ತೆ

Bhadravathi Court Delivers Landmark Verdict in SC/ST Act Case: 4 Sentenced.
Bhadravathi Court Delivers Landmark Verdict in SC/ST Act Case: 4 Sentenced.

ಭದ್ರಾವತಿ ಕೋರ್ಟ್ ಶಿಕ್ಷೆ /Bhadravathi Court

ಆರೋಪಿಗಳಾದ  ರಾಜಪ್ಪ ಈ.ಬಿ. (51), ಭರತ್ ಈ.ಆರ್. (20), ರಂಗನಾಥ @ ರಂಗೇಶ್ (34) ಮತ್ತು ಹನುಮಂತಪ್ಪ ಈ.ಬಿ. (53) (ಎಲ್ಲರೂ ಆನವೇರಿ ಗ್ರಾಮದ ನಿವಾಸಿಗಳು) ವಿರುದ್ಧದ ಆರೋಪಗಳು ದೃಡಪಟ್ಟಿದ್ದು. 2 ವರ್ಷ ಕಠಿಣ ಕಾರಾವಾಸ & ತಲಾ 77,000/- ರೂ ದಂಡವನ್ನು, ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆಯನ್ನು, ಅನುಭವಿಸತಕ್ಕದ್ದು ಎಂದು ಆದೇಶಿಸಿದ್ದಾರೆ. ಒಟ್ಟು ದಂಡದ ಹಣ 3,08,000/- ರೂ ಗಳಲ್ಲಿ ನೊಂದವರಿಗೆ 2,00,000/- ರೂಗಳನ್ನು ಪರಿಹಾರ ನೀಡುವಂತೆ ಆದೇಶಿಸಿರುತ್ತದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Bhadravathi Court Delivers Landmark Verdict in SC/ST Act Case: 4 Sentenced.

Share This Article
Leave a Comment

Leave a Reply

Your email address will not be published. Required fields are marked *