ಅಧಿಕಾರ ಕಳೆದುಕೊಂಡ ಮೇಲೂ ಪೈಲೆಟ್​ ಇಟ್ಕೊಂಡು ಯಾಕೆ ಓಡಾಡ್ತಿದ್ದಾರೆ ಕೆ.ಎಸ್​. ಈಶ್ವರಪ್ಪ | ದುಬೈ ಬೆದರಿಕೆ ಕರೆ ಮತ್ತ ಆಯನೂರು ಮಂಜುನಾಥ್ ಮಾತು!

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ಕೆಪಿಸಿಸಿ ವಕ್ತಾರರಾಗಿರುವ ಆಯನೂರು ಮಂಜುನಾಥ್ ತಮ್ಮ ಮೊದಲ ಸುದ್ದಿಗೋಷ್ಟಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪನವರು  ಮಾತನಾಡಿದ್ದು ಬರೇ ಶಿವಮೊಗ್ಗ ದಲ್ಲಿ ಬೆಂಕಿ ಹಚ್ಚುವ ಬಗ್ಗೆ ಎಂದಿರುವ ಆಯನೂರು ಮಂಜುನಾಥ್  ಅವರು ಕೇವಲ ಶಿವಮೊಗ್ಗದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.  

ಈಶ್ವರಪ್ಪನವರು ಶಿವಮೊಗ್ಗದ ಶಾಂತಿಯನ್ನು ಮತ್ತಷ್ಟು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಕುರಿ ಕೊಚ್ಚುವ ರೀತಿಯಲ್ಲಿ ಕೊಚ್ಚಿ ಹಾಕುತ್ತೇವೆ ಎಂದು ಮತ್ತೆ ಮತ್ತೆ ಉದ್ರೇಕಕಾರಿಯಾಗಿ ಮಾತನಾಡುತ್ತಿದ್ದಾರೆ.  ಹಸಿರು ರಕ್ತ, ಕೆಂಪು ರಕ್ತ ಎನ್ನುತ್ತಿದ್ದಾರೆ. ಇವರು ಯಾವಾಗ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡಿದ್ದರು ?  ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರನ ಬಗ್ಗೆ, ಡಿ.ಕೆ. ಶಿವಕುಮಾರ್ ಸಹೋದರನ ಮೇಲೆ ದಾಳಿಯಾಗಿದ್ದರೆ ಎಂದು ಮಾತನಾಡುತ್ತಾರೆ.ಇವರು ಶಿವಮೊಗ್ಗವನ್ನು ಏನು ಮಾಡಲು ಹೊರಟಿದ್ದಾರೆ.. ಎಂದು ಪ್ರಶ್ನೆ ಮಾಡಿದ್ದಾರೆ.  

ಈಶ್ವರಪ್ಪರಿಗೆ ರಾಗಿಗುಡ್ಡ ವಿಚಾರ ಬೇಗನೇ ತಣ್ಣಗಾಗಿದ್ದು ಇಷ್ಟವಿಲ್ಲ  ಅನಿಸುತ್ತೆ. ಯಾಕಿಷ್ಟು ಉದ್ರೇಕಕಾರಿಯಾಗಿ ಮಾತನಾಡಬೇಕು. ಶಿವಮೊಗ್ಗದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದ ಆಯನೂರು ಮಂಜುನಾಥ್​   ಈಶ್ವರಪ್ಪ ಇನ್ನು ಸರ್ಕಾರದ ಪೈಲೇಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ.  ಅವರಿಗೆ ಯಾವ ಸಾಂವಿಧಾನಿಕ ಹುದ್ದೆ ಇದೆ ಎಂದು ಈ ರೀತಿ ಓಡಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಸರ್ಕಾರದ ದುಡ್ಡಲ್ಲಿ ಪೈಲಟ್ ಇಟ್ಟುಕೊಂಡು ಓಡಾಡಬೇಡಿ. 

ಈಶ್ವರಪ್ಪರಿಗೆ ಅಧಿಕಾರ ಹೋಗುತ್ತಿದ್ದಂತೆ, ದುಬೈನಿಂದ ಬೆದರಿಕೆ ಕರೆ ಬರುತ್ತೆ. ಅದು ಈವರೆಗೂ ಕಂಡು ಹಿಡಿಯಲು ಆಗಿಲ್ಲ. ಅವರಿಗೆ ಬೆದರಿಕೆ ಇದ್ದರೆ, ಗನ್ ಮ್ಯಾನ್ ಇಟ್ಟುಕೊಳ್ಳಲಿ. ಎಲ್ಲರಿಗೂ ನಾನು ಬರುತ್ತಿದ್ದೆನೆ ಎಂದು ತಿಳಿಯಲು ಪೈಲಟ್ ನೊಂದಿಗೆ ಬರುವುದು ಬೇಡ ಎಂದರು. 

ಯಾರಿಗೂ ತಿಳಿಯದಂತೆ ಗನ್ ಮ್ಯಾನ್ ಇಟ್ಟುಕೊಂಡು ಓಡಾಡಲಿ ಎಂದು ಸಲಹೆ ನೀಡಿದ ಆಯನೂರು ಮಂಜುನಾಥ್ ಸಂಸತ್ ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕ್ಷೇತ್ರದೆಲ್ಲೆಡೆ ಸಂಚಾರ ನಡೆಸಲಾಗುತ್ತಿದೆ. ನಾನು ಸಂಸತ್ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಲ್ಲ ಎಂದಿದ್ದಾರೆ 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Leave a Comment