SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಬೈಕ್ನಲ್ಲಿ ತೆರಳುತ್ತಾ ಸಾರ್ವಜನಿಕರಿಗೆ ಲಾಂಗ್ ತೋರಿಸಿ ಹೆದರಿಸುತ್ತಿದ್ದ ಮೂವರ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ಜನವರಿ 13 ರಂದು ಈ ಘಟನೆ ನಡೆದಿದೆ. ಮಿಳಘಟ್ಟ ಟು ಅಣ್ಣಾನಗರ ರಸ್ತೆಯಲ್ಲಿ ಮೂವರು ಆರೋಪಿಗಳು ಬೈಕ್ನಲ್ಲಿ ಸಾಗುತ್ತಾ ತಮ್ಮನ್ನು ಓವರ್ ಟೇಕ್ ಮಾಡುವ ವಾಹನಗಳಿದ್ದವರಿಗೆ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಎಣ್ಣೆ ಹೊಡೆಯುತ್ತಿದ್ದ ವೇಳೆ ನಡೆದ ಗಲಾಟೆ ವಿಕೋಪ ಹೋಗಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ರಸ್ತೆಯಲ್ಲಿರುವ ಬಾರ್ವೊಂದರಲ್ಲಿ ಆರು ಮಂದಿ ಕುಡಿದಿದ್ದು, ಈ ವೇಳೆ ಅವರ ನಡುವೆ ಗಲಾಟೆಯಾಗಿದೆ. ಆ ಬಳಿಕ ಆರು ಮಂದಿಯ ಪೈಕಿ ಇದ್ದ ಯುವಕನೊಬ್ಬ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಪುನಃ ಗಲಾಟೆ ಮಾಡಿದ್ದಾನೆ. ಈ ವೇಳೆ ಓರ್ವನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.
ಎಟಿಎಂನಲ್ಲಿ ಹಣ ತೆಗೆದುಕೊಡುವುದಾಗಿ ನಂಬಿಸಿ 55 ಸಾವಿರ ರೂಪಾಯಿ ವಂಚಿಸಿದ ಘಟನೆಯೊಂದು ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಹುಣಸೆಕಟ್ಟೆಯ 65 ವರ್ಷದ ನಿವಾಸಿ ಮೋಸ ಹೋದವರು. ಮೋಸ ಮಾಡಿದ ಆರೋಪಿಯು ಮೊದಲು ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ 16 ಸಾವಿರ ರೂಪಾಯಿ ಹಣವನ್ನು ವಿತ್ಡ್ರಾ ಮಾಡಿಕೊಟ್ಟಿದ್ದಾರೆ. ಆಬಳಿಕ ಎಟಿಎಂನಿಂದ ಹೊರಕ್ಕೆ ಎಂಜಲು ಉಗಿಯುವ ನೆಪದಲ್ಲಿ ಹೋಗಿ ಬೇರೊಂದು ಎಟಿಎಂ ಕಾರ್ಡ್ನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಮರುದಿನ ಅದರಿಂದ ಸುಮಾರು 55 ಸಾವಿರ ರೂಪಾಯಿಯನ್ನು ಬಿಡಿಸಿದ್ದಾನೆ. ಇತ್ತ ಸಂತ್ರಸ್ತರ ಮಗ ಎಟಿಎಂ ಕಾರ್ಡ್ ಬದಲಾಗಿದ್ದನ್ನು ನೋಡಿ, ಅಕೌಂಟ್ ಬ್ಲಾಕ್ ಮಾಡಿಸಿ, ಖಾತೆ ಪರಿಶೀಲಿಸಿದಾಗ ವಂಚನೆ ಆಗಿರುವುದು ಗೊತ್ತಾಗಿದೆ.

SUMMARY | shivamogga crime news
KEY WORDS | shivamogga crime news