ಹೊಸನಗರ ,ಭದ್ರಾವತಿ, ಶಿಕಾರಿಪುರದಲ್ಲಿ ವಿ.ಆರ್.ಡಬ್ಲ್ಯು ಹುದ್ದೆಗೆ ಅರ್ಜಿ ಆಹ್ವಾನ 

Malenadu Today

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಹೊಸನಗರ: ವಿ.ಆರ್.ಡಬ್ಲ್ಯು ಹುದ್ದೆಗೆ ಅರ್ಜಿ ಆಹ್ವಾನ 

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು  ಗ್ರಾಮೀಣ ಪುನರ್ವಸತಿ ಯೋಜನೆಯಡಿ ಹೊಸನಗರ ತಾಲ್ಲೂಕಿನ ಪುರಪ್ಪೆಮನೆ, ನಗರ(ಮೂಡುಗೊಪ್ಪ) ಗ್ರಾಮ ಪಂಚಾಯ್ತಿಗಳಲ್ಲಿ ವಿ.ಆರ್.ಡಬ್ಲ್ಯು ಹುದ್ದೆಯು ಖಾಲಿಯಿದ್ದು, ಗ್ರಾ.ಪಂ/ಹತ್ತಿರದ ಗ್ರಾಮ ಪಂಚಾಯ್ತಿಗಳಲ್ಲಿ ವಾಸವಿರುವ 18 ರಿಂದ 45 ವಯೋಮಿತಿಯೊಳಗಿನ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆಯನ್ನು ಹೊಸನಗರ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎಂ.ಆರ್.ಡಬ್ಲ್ಯು ಆಗಿ ಕಾರ್ಯ ನಿರ್ವಹಿಸುತ್ತಿರುವ ರವಿಕುಮಾರ್ ಮೊ.ಸಂ: 9731922693 ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ದಾಖಲಾತಿಗಳನ್ನು ಅ.10 ರೊಳಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

——————-

ಶಿಕಾರಿಪುರ: ವಿ.ಆರ್.ಡಬ್ಲ್ಯು ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು  ಗ್ರಾಮೀಣ ಪುನರ್ವಸತಿ ಯೋಜನೆಯಡಿ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ, ತರಲಘಟ್ಟ, ಕಪ್ಪನಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ವಿ.ಆರ್.ಡಬ್ಲ್ಯು ಹುದ್ದೆಯು ಖಾಲಿಯಿದ್ದು, ಗ್ರಾ.ಪಂ/ಹತ್ತಿರದ ಗ್ರಾಮ ಪಂಚಾಯ್ತಿಗಳಲ್ಲಿ ವಾಸವಿರುವ 18 ರಿಂದ 45 ವಯೋಮಿತಿಯೊಳಗಿನ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆಯನ್ನು ಶಿಕಾರಿಪುರ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎಂ.ಆರ್.ಡಬ್ಲ್ಯು ಆಗಿ ಕಾರ್ಯ ನಿರ್ವಹಿಸುತ್ತಿರುವ ಹುಚ್ಚರಾಯಪ್ಪ ಮೊ.ಸಂ: 9741161346 ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ದಾಖಲಾತಿಗಳನ್ನು ಅ.10 ರೊಳಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಭದ್ರಾವತಿ: ವಿ.ಆರ್.ಡಬ್ಲ್ಯು ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು  ಗ್ರಾಮೀಣ ಪುನರ್ವಸತಿ ಯೋಜನೆಯಡಿ ಭದ್ರಾವತಿ ತಾಲ್ಲೂಕಿನ ಗುಡುಮಘಟ್ಟ, ಹನುಮಂತಾಪುರ, ಸನ್ಯಾಸಿಕೊಡಮಗ್ಗಿ, ಕಲ್ಲಹಳ್ಳಿ ಮತ್ತು ತಡಸ ಗ್ರಾಮ ಪಂಚಾಯ್ತಿಗಳಲ್ಲಿ ವಿ.ಆರ್.ಡಬ್ಲ್ಯು ಹುದ್ದೆಯು ಖಾಲಿಯಿದ್ದು, ಗ್ರಾ.ಪಂ/ಹತ್ತಿರದ ಗ್ರಾಮ ಪಂಚಾಯ್ತಿಗಳಲ್ಲಿ ವಾಸವಿರುವ 18 ರಿಂದ 45 ವಯೋಮಿತಿಯೊಳಗಿನ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ನಿಗದಿತ ಅರ್ಜಿ ನಮೂನೆಯನ್ನು ಭದ್ರಾವತಿ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎಂ.ಆರ್.ಡಬ್ಲ್ಯು ಆಗಿ ಕಾರ್ಯ ನಿರ್ವಹಿಸುತ್ತಿರುವ ದಿನೇಶ್- ಮೊ.ಸಂ: 7899137243 ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ದಾಖಲಾತಿಗಳನ್ನು ಅ.10 ರೊಳಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 

 


 

Share This Article