ನಡು ದಾರಿಯಲ್ಲಿ ಬೈಕ್​ ಅಡ್ಡಗಟ್ಟಿ ಮಹಿಳೆಯ ಕೊಲೆಯತ್ನ! ಸಿಕ್ಕಿಬಿದ್ದ ಇಬ್ಬರು!

Anandapura | ದಾರಿಯಲ್ಲಿ ಹೋಗ್ತಿದ್ದವರನ್ನ ಅಡ್ಡಹಾಕಿ ಮಹಿಳೆಯೊಬ್ಬರ ಕೊಲೆಗೆ ಯತ್ನಿಸಿದ ಘಟನೆಯ ಸಂಬಂಧ ಸಾಗರ ಆನಂದಪುರ ಪೊಲೀಸರು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.

 ಆನಂದಪುರ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ , Anandapura Woman Assault and Robbery Case: Two Arrested | Malenadu Today

ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ (Anandapura )

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಸಕಲ್ ಬೈಲ್ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದವರನ್ನ ತಡೆದು, ಬೈಕ್​ನಲ್ಲಿ ಹಿಂಬದಿ ಕುಳಿದಿದ್ದ  ಮಹಿಳೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಲಾಗಿತ್ತು. ದಿನಾಂಕ 05-01-2026 ರಂದು ಸಂಜೆ 7-00 ಗಂಟೆಯ ಸುಮಾರಿಗೆ ದೂರುದಾರರು  ಶೃತಿ ಎಂಬುವವರನ್ನು ಮಸಕಲ್ ಬೈಲ್ ಬಸ್ ನಿಲ್ದಾಣದಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ವ್ಯಕ್ತಿಯೊಬ್ಬ ಬೈಕ್​ ಅಡ್ಡ ಹಾಕಿ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ. ಮರುಕ್ಷಣವೇ ಸ್ಟೀಲ್ ರಾಡ್‌ನಿಂದ ಶೃತಿ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದ. ಈ ಸಂಬಂದ ಕೊಲೆ ಯತ್ನ ಆರೋಪ ಸೇರಿದಂತೆ  ಕಲಂ 126(2), 309 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್​ ಕುರಿತಾಗಿ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ  ನೇತೃತ್ವದಲ್ಲಿ ಶಿವಮೊಗ್ಗ ಸಿಡಿಆರ್ ವಿಭಾಗದ ಪಿಎಸ್ಐ ಪ್ರವೀಣ್ ಎಸ್.ಪಿ, ಸಿಬ್ಬಂದಿಗಳಾದ ಇಂದ್ರೇಶ, ಎ.ಎಸ್.ಐ ಗುರು, ಹೆಚ್.ಸಿ ಸಿದ್ದರೂಡ, ಪ್ರಶಾಂತ್, ಪರಶುರಾಮ್, ತಾಹಿರ್ ಹಾಗೂ ಪಿಸಿಗಳಾದ ಉಮೇಶ್ ಲಮಾಣಿ ಮತ್ತು ಹರ್ಷ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದೆ. 

 ಆನಂದಪುರ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ , Anandapura Woman Assault and Robbery Case: Two Arrested | Malenadu Today

ಆನಂದಪುರ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ , Anandapura Woman Assault and Robbery Case: Two Arrested | Malenadu Today

ಶಿವಮೊಗ್ಗ: ಹೃದಯಾಘಾತದಿಂದ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾವು 

10-01-2026 ರಂದು ಸೊರಬ ತಾಲ್ಲೂಕಿನ ತತ್ತೂರು ವಡ್ಡಿಗೆರೆಯ ಗೋವಿಂದ ವೈ (24 ವರ್ಷ) ಎಂಬಾತನನ್ನು ಮತ್ತು ಇದೇ ಗ್ರಾಮದ ಕಿರಣ ಕುಮಾರ್ (32 ವರ್ಷ) ಎಂಬುವವರನ್ನು ಬಂಧಿಸಿದೆ. ಕಿರಣ ಕುಮಾರ್ ಕೊಲೆ ಯತ್ನಕ್ಕೆ ಕುಮ್ಮಕ್ಕು ನೀಡಿದ್ದ ಆರೋಪ ಎದುರಿಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. 

 ಆನಂದಪುರ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ , Anandapura Woman Assault and Robbery Case: Two Arrested | Malenadu Today

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ

 ಆನಂದಪುರ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ , Anandapura Woman Assault and Robbery Case: Two Arrested | Malenadu Today