ಮಹಿಳೆಗೆ ಬ್ಯಾಗಲ್ಲಿ ಪೌಡರ್​ ಇದೆ ನೋಡಿ ಅಂದ್ರು ಅಷ್ಟೇ, ಆಮೇಲ್​ ಏನಾಯ್ತು ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Chain Snatching in Sagara Thieves Loot 30g Gold Chain
Chain Snatching in Sagara Thieves Loot 30g Gold Chain

ಸಾಗರ :  ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ವಿಧವಿಧವಾದ ರೀತಿಯಲ್ಲಿ ನಡೆಯುತ್ತಿವೆ. ಒಂದು ದಿನ ಬಳಸಿದ ಐಡಿಯಾವನ್ನು ಕಳ್ಳರು ಮರುದಿನ ಬಳಸುತ್ತಿಲ್ಲ; ಬದಲಾಗಿ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಹಿಂದೆ ಮಹಿಳೆಯರ ಬಳಿ ವಿಳಾಸ ಕೇಳುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದವರು, ಇದೀಗ ವಸ್ತುಗಳನ್ನು ಮಾರುವ ನೆಪದಲ್ಲಿ ಬಂದು ಕಳ್ಳತನ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ಪ್ರಕರಣ ಸಾಗರದ ಸುಭಾಷ್ ನಗರದಲ್ಲಿ ನಡೆದಿದೆ.

Chain Snatching in Sagara Thieves Loot 30g Gold Chain
Chain Snatching in Sagara Thieves Loot 30g Gold Chain

ಶಿವಮೊಗ್ಗ ಉದ್ಯಮಿಗೆ ಮಹಾರಾಷ್ಟ್ರದಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ, 3 ದಿನ ಕೂಡಿಟ್ಟು 2.17 ಕೋಟಿ ಲೂಟಿ

ಘಟನೆಯ ವಿವರ

ಸಾಗರದ ಸುಭಾಷ್ ನಗರದ ಮನೆಯೊಂದರಲ್ಲಿ ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಗೇಟ್ ತೆರೆಯುವ ಶಬ್ದ ಕೇಳಿಸಿದೆ. ಇದನ್ನು ಗಮನಿಸಿದ ಮನೆಯೊಡತಿ, ತಮ್ಮ ಯಜಮಾನರು ಕೆಲಸದಿಂದ ಬಂದಿರಬಹುದೆಂದು ಭಾವಿಸಿ ಬಾಗಿಲು ತೆರೆದು ನೋಡಿದ್ದಾರೆ. ಆದರೆ ಅಲ್ಲಿ ಬಂದಿದ್ದು ಅವರ ಪತಿಯಲ್ಲ, ಬದಲಾಗಿ ಇಬ್ಬರು ಅಪರಿಚಿತ ಯುವಕರು.

ಅವರನ್ನು ಕಂಡ ಮಹಿಳೆ ನಿಮಗೆ ಏನು ಬೇಕು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಆ ಯುವಕರು ಪೌಡರ್ ತಂದಿದ್ದೇವೆ ನೋಡಿ ಎನ್ನುತ್ತಾ ತಮ್ಮ ಬ್ಯಾಗನ್ನು ತೆರೆದಿದ್ದಾರೆ. ಮಹಿಳೆಯು ಬ್ಯಾಗ್‌ನಲ್ಲಿ ಯಾವ ಪೌಡರ್ ಇದೆ ಎಂದು ನೋಡಲು ಬಗ್ಗಿದ ತಕ್ಷಣ, ಕಳ್ಳರು ಆಕೆಯ ಕೊರಳಿನಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಮಹಿಳೆಯು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Chain Snatching in Sagara Thieves Loot 30g Gold Chain
Chain Snatching in Sagara Thieves Loot 30g Gold Chain

Chain Snatching in Sagara Thieves Loot 30g Gold Chain

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor