ಶಿವಮೊಗ್ಗ ಉದ್ಯಮಿಗೆ ಮಹಾರಾಷ್ಟ್ರದಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ, 3 ದಿನ ಕೂಡಿಟ್ಟು 2.17 ಕೋಟಿ ಲೂಟಿ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಶಿವಮೊಗ್ಗ/ಠಾಣೆ | ಶಿವಮೊಗ್ಗದ ಬ್ಯುಸಿನೆಸ್​ ಮ್ಯಾನ್​ ಒಬ್ಬರನ್ನು ಮಹಾರಾಷ್ಟ್ರದಲ್ಲಿ ಗನ್​ ಇಟ್ಟು ಹೆದರಿಸಿ ಸುತ್ತಾಡಿಸಿ,  ₹2 ಕೋಟಿ ದೋಚಿದ ಘಟನೆ ಸಂಬಂಧ ಅಲ್ಲಿನ ಠಾಣೆಯ ಪೊಲೀಸರು ಆರೋಪಿಯೊಬ್ಬರನ್ನು ಬಂಧಿಸಿದ್ದಾರೆ. 

ಏನಿದು ಘಟನೆ

ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್‌ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಮೊತ್ತ ದೋಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 

ಶಿವಮೊಗ್ಗ ಉದ್ಯಮಿಯ 2.17 ಕೋಟಿ ರೂಪಾಯಿ ಸುಲಿಗೆ: ಮಹಾರಾಷ್ಟ್ರದಲ್ಲಿ ಪ್ರಮುಖ ಆರೋಪಿ ಬಂಧನ Shimoga Businessman Robbed maharashtra of 2.17 Crore: Main Accused Arrested in Thane
ಶಿವಮೊಗ್ಗ ಉದ್ಯಮಿಯ 2.17 ಕೋಟಿ ರೂಪಾಯಿ ಸುಲಿಗೆ: ಮಹಾರಾಷ್ಟ್ರದಲ್ಲಿ ಪ್ರಮುಖ ಆರೋಪಿ ಬಂಧನ Shimoga Businessman Robbed maharashtra of 2.17 Crore: Main Accused Arrested in Thane

ಈ ಸಂಬಂಧ ಠಾಣೆಯ ಮಾನ್‌ಪಾಡಾ ನಿವಾಸಿ ಅಂಕಿತ್ ಬಾಪು ಥೋಂಬ್ರೆ (40) ಎಂಬಾತನನ್ನು ಅಲ್ಲಿನ  ಪೊಲೀಸರು ಬಂಧಿಸಿದ್ದಾರೆ.  ಶಿವಮೊಗ್ಗದ ಉದ್ಯಮಿಗೆ ಕಳೆದ ಡಿಸೆಂಬರ್ 15ರಂದು ಅಂಕಿತ್ ಎಂಬಾತ ಕರೆ ಮಾಡಿ ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿ ಠಾಣೆ ಜಿಲ್ಲೆಯ ಕಾಶಿಮಿರಾಗೆ ಸಂತ್ರಸ್ತ ಉದ್ಯಮಿ ಪಯಣ ಬೆಳೆಸಿದ್ದರು. ಆನಂತರ ಅವರನ್ನು ಆರೋಪಿಗಳು ಕೂಡಿ ಹಾಕಿ ಮೂರು ದಿನ ವಿವಿಧ ಹೋಟೆಲ್​ಗಳಲ್ಲಿ ಇರಿಸಿದ್ದರು.  ಆರೋಪಿಗಳು ಉದ್ಯಮಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ಅವರ ಸಹಚರರು ಚಾಕುವಿನಿಂದ ಹಲ್ಲೆ ನಡೆಸಿದ್ದರು. ನೆಟ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್ ಪಡೆದು ಬ್ಯಾಂಕ್ ಖಾತೆಯಿಂದ ₹2,17,63,287 ಮೊತ್ತವನ್ನು ಅನಧಿಕೃತ ಆನ್‌ಲೈನ್ ವಹಿವಾಟುಗಳಿಗೆ ಬಳಕೆ ಮಾಡಿದ್ದರು. ಈ ಸಂಬಂಧ ಸಂತ್ರಸ್ತರು ನೀಡಿರುವ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಶಿವಮೊಗ್ಗ ಉದ್ಯಮಿಯ 2.17 ಕೋಟಿ ರೂಪಾಯಿ ಸುಲಿಗೆ: ಮಹಾರಾಷ್ಟ್ರದಲ್ಲಿ ಪ್ರಮುಖ ಆರೋಪಿ ಬಂಧನ Shimoga Businessman Robbed maharashtra of 2.17 Crore: Main Accused Arrested in Thane
ಶಿವಮೊಗ್ಗ ಉದ್ಯಮಿಯ 2.17 ಕೋಟಿ ರೂಪಾಯಿ ಸುಲಿಗೆ: ಮಹಾರಾಷ್ಟ್ರದಲ್ಲಿ ಪ್ರಮುಖ ಆರೋಪಿ ಬಂಧನ Shimoga Businessman Robbed maharashtra of 2.17 Crore: Main Accused Arrested in Thane

ಶಿವಮೊಗ್ಗ: ಹೃದಯಾಘಾತದಿಂದ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾವು 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಉದ್ಯಮಿಯ 2.17 ಕೋಟಿ ರೂಪಾಯಿ ಸುಲಿಗೆ: ಮಹಾರಾಷ್ಟ್ರದಲ್ಲಿ ಪ್ರಮುಖ ಆರೋಪಿ ಬಂಧನ Shimoga Businessman Robbed maharashtra of 2.17 Crore: Main Accused Arrested in Thane

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor