ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು

ಶಿವಮೊಗ್ಗ  ಜಿಲ್ಲೆಗೆ ಮತ್ತೆ ನಿನ್ನೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದರು. ಈ ಸಲ ಯಾವುದೇ ಸಿನಿಮಾ ಪ್ರಮೋಶನ್​ಗಾಗಿ ಅವರು ಭೇಟಿ ನೀಡಿರಲಿಲ್ಲ. ಬದಲಾಗಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಬಟೂರಿನ ದ್ಯಾಮವ್ವ ಜಾತ್ರೆ ಹಾಗೂ ಸಾಗರ ತಾಲ್ಲೂಕಿನ ಮಾರಿಜಾತ್ರೆ ನೋಡಲು ಶಿವಣ್ಣ ಬಂದಿದ್ದರು. 

ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ

ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆಗೆ ಆಗಮಿಸಿದ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧುಬಂಗಾರಪ್ಪ ತಾಯಿಯ ದರ್ಶನ ಪಡೆದರು, ಈ ವೇಳೇ  ಶಿವಣ್ಣನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಹಲವರು ಶಿವಣ್ಣರ ಜೊತೆ ಸೆಲ್ಪಿ ಕ್ಲಿಕ್ಕಿಸಿದರೇ , ಶಿವಣ್ಣರವರು ಸಹ ಮಾರಿಕಾಂಬೆಯ ದರ್ಶನ ಪಡೆದು, ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡರು. ಶಿವಮೊಗ್ಗ ಜಿಲ್ಲೆಗೆ ಬಂದಾಗ ತಮಗಾಗುವ ಆಪ್ತ ಅನುಭವವನ್ನು ಹಂಚಿಕೊಂಡರ ಅವರು, ಈ ತಾಯಿಯ ಜಾತ್ರೆಯಲ್ಲಿ ನನ್ನದೊಂದು ಅಳಿಲು ಸೇವೆಯಿದೆ. ಆ ಸೇವೆಯು ತಾಯಿಗೆ ಸಲ್ಲಲ್ಲಿ, ಅದರಿಂದ ನಾಲ್ಕು ಜನರಿಗೆ ಒಳ್ಳೆಯದಾಗಲಿ ಎಂದರು. 

Malenadu Today

ಬಂಗಾರಪ್ಪರ ಅಳಿಯಂದಿರಿಂದ ತಲಾ 5 ಲಕ್ಷ ರೂಪಾಯಿಗೆ ದೇಣಿಗೆ

ಇನ್ನೂ ಸೊರಬ ತಾಲ್ಲೂಕಿನ  ಆನವಟ್ಟಿ ಸಮೀಪದ ಕುಬಟೂರಿನಲ್ಲಿ ನಡೆಯುತ್ತಿರುವ  ದ್ಯಾಮವ್ವದೇವಿ ಜಾತ್ರೆಗೂ ಶಿವಣ್ಣ ಭೇಟಿಕೊಟ್ಟಿದ್ದರು. ಅವರಷ್ಟೆ ಅಲ್ಲದೆ  ಟಿಪಿಎಂಎಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್ ಕುಮಾರ್ ಸಹ ಭೇಟಿಕೊಟ್ಟಿದ್ದರು. ಈ ವೇಳೇ  ನಟ ಶಿವರಾಜ್ ಕುಮಾರ್‌ ಅವರು ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದರು, ಇದೇ  ವೇಳೆ ತಿಲಕ್‌ ಕುಮಾರ್ ಅವರು ದಂಪತಿ ಸಹ 5 ಲಕ್ಷ ದೇಣಿಗೆ ದೇವಸ್ಥಾನ ಸಮಿತಿಗೆ ನೀಡಿದರು. ಇನ್ನೂ ಶಿವಣ್ಣ ತಮ್ಮ ‘ವೇದ’ ಚಿತ್ರದ 50ನೇ ದಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment