ಜೈಲಿನಲ್ಲಿಯೇ ಹ್ಯಾಪಿ ಬರ್ತ್​ಡೇ ಕೇಸ್! 5 ತಿಂಗಳ ನಂತ್ರ ದಾಖಲಾಯ್ತು ಎಫ್​ಐಆರ್! ಏನಿದು ಶಿವಮೊಗ್ಗ ಸೆಂಟ್ರಲ್ ಜೈಲ್​​ ಕಥೆ!??

A case has been registered at Tunganagar police station on the complaint of the Superintendent of Shivamogga Central Jail. ಶಿವಮೊಗ್ಗ ಕೇಂದ್ರ ಕಾರಾಗೃಹ ಸೋಗಾನೆಯ ಅಧೀಕ್ಷಕಿಯವರು ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.

ಜೈಲಿನಲ್ಲಿಯೇ ಹ್ಯಾಪಿ ಬರ್ತ್​ಡೇ ಕೇಸ್! 5 ತಿಂಗಳ ನಂತ್ರ ದಾಖಲಾಯ್ತು ಎಫ್​ಐಆರ್! ಏನಿದು ಶಿವಮೊಗ್ಗ ಸೆಂಟ್ರಲ್ ಜೈಲ್​​ ಕಥೆ!??

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS

ಕಳೆದ ಮಾರ್ಚ್​ ತಿಂಗಳಿನಲ್ಲಿ ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಕೇಸ್​ವೊಂದು ಇದೀಗ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ಎಫ್​ಐಆರ್ ಆಗಿದ್ದು, ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಈ ಬಗ್ಗೆ ದೂರು ದಾಖಲಾಗಿದೆ. 

ಏನಿದು ಪ್ರಕರಣ? 

ಕಳೆದ ಮಾರ್ಚ್​ ತಿಂಗಳಿನಲ್ಲಿ ಸಾಗರ ಪೊಲೀಸರು ಅನುಮಾನಸ್ಪದವಾಗಿ ರಸ್ತೆಯಬದಿಯಲ್ಲಿ ವಾಹನವೊಂದನ್ನ ತಪಾಸಣೆಗೊಳಪಡಿಸಿದ್ದರು. ಅದರಲ್ಲಿ ನಿಷೇಧಿತ ಮಾತ್ರೆಗಳು ಹಾಗೂ ಮಾದಕವಸ್ತುಗಳು ದೊರೆತಿದ್ವು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಕರಾವಳಿಯಲ್ಲಿ ಓರ್ವನ ಕೊಲೆ ಸುಪಾರಿ ಕೇಸ್​ನ ಸುಳಿವು ಸಿಕ್ಕಿತ್ತು. ಅಲ್ಲದೆ ಡಾನ್​ ಆಗಬಯಸಿದ್ದ ಯುವಕನ ಕ್ರೈಂ ಕೃತ್ಯಕ್ಕೆ ಬ್ರೇಕ್ ಹಾಕಿದ್ದರು. ಇದರ ಪೂರ್ತಿ ಸ್ಟೋರಿ ಇಲ್ಲಿದೆ ಓದಿ ಡಾನ್ ಆಗುವ ಆಸೆಯಲ್ಲಿ ಮಂಗಳೂರಿಂದ ಶಿವಮೊಗ್ಗಕ್ಕೆ ಬಂದವ ಫಸ್ಟ್​ ಕೇಸ್​ನಲ್ಲಿಯೇ ಫಿಟ್​ ಆದ! ರೋಚಕವಾಗಿದೆ ಒಂದು ಮಾತ್ರೆ ಕಥೆ JP STORY 

ಇದೇ ವಿಚಾರದಲ್ಲಿ ತನಿಖಾ ಸಂದರ್ಭದಲ್ಲಿ ಸಾಗರ ಪೊಲೀಸರಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಸಜಾಬಂದಿಗಳು ಜೈಲಿನಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವಂತೆ. ಅದರಂತೆ ಪ್ರಕರಣದ ತನಿಖಾಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ಭೇಟಿಕೊಟ್ಟು ಈ ಸಂಬಂಧ ತನಿಖೆಯನ್ನು ನಡೆಸಿದ್ದರು. ಇದರ ಬೆನ್ನಲ್ಲೆ ಸಾಕಷ್ಟು ರೇಡ್​ಗಳು ಸಹ ನಡೆದಿದ್ದವು. ಆದರೆ ರೇಡ್​ನಲ್ಲಿ ಅಥವಾ ತನಿಖೆಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಸಾಕ್ಷ್ಯಗಳು ಸಹ ಸಿಕ್ಕಿರಲಿಲ್ಲ. 

ಇದೀಗ ಪ್ರಕರಣ ಸಂಬಂಧ ಸ್ವತಃ ಕೇಂದ್ರ ಕಾರಾಗೃಹದ ಅಧೀಕ್ಷಕಿಯವರಿಂದಲೆ ತುಂಗಾನಗರ ಪೊಲೀಸ್ ಸ್ಟೇಷನ್​ ನಲ್ಲಿ ದೂರು ದಾಖಲಾಗಿದ್ದು, ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದರ ಫೋಟೋ ವಿಡಿಯೋಗಳನ್ನು ತೆಗೆಯಲು ಮೊಬೈಲ್​ಗಳನ್ನು ಬಳಸಿದ್ದು, ಮತ್ತು ಸಾಗರ ಟೌನ್​ನಲ್ಲಿ ದಾಖಲಾದ ಪ್ರಕರಣದಲ್ಲಿ ಸಿಕ್ಕಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಪೊಲೀಸರು ಎಫ್​ಐಆರ್​ ದರ್ಜ್​ ಮಾಡಿದ್ದಾರೆ. ಒಟ್ಟಾರೆ, ಮಾರ್ಚ್​ ತಿಂಗಳಿನಲ್ಲಿ ನಡೆದ ಪ್ರಕರಣವೊಂದು ಇದೀಗ ಬೇರೆಯದ್ದೆ ರೂಟ್​ಗೆ ಬಂದು ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. ಕೈದಿಗಳ ಹುಟ್ಟುಹಬ್ಬದ ಫೋಟೋಗಳು ಇಷ್ಟಕ್ಕೆಲ್ಲಾ ಕಾರಣವಾಗಿರುವುದು ವಿಶೇಷ  

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು