ಅಮೃತ್ ನೋನಿ ಆರ್ಥೊಪ್ಲಸ್‌ ವಿಚಾರದಲ್ಲಿ ಹೊರಬಿತ್ತು ಬಿಗ್‌ ನ್ಯೂಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 21, 2025

ಶಿವಮೊಗ್ಗ | ಅಮೃತ್‌ನೋನಿ ಆರ್ಥೊ ಪ್ರಶ್ನೆ ಸಂಬಂಧಿಸಿದ ಡಬಲ್ ಬೈಂಡೆಡ್ ಮತ್ತು ರಾಂಡಮೈಜ್ ಹೂಮನ್ ಕ್ಲಿನಿಕಲ್ ಟ್ರಯಲ್‌ಗಲು ಯಶಸ್ವಿಯಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ‌‌ ನಿರ್ದೇಶಕ ಎ. ಕೆ.‌ಶ್ರೀನಿವಾಸಮೂರ್ತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೃತ ನೋನಿ ಉತ್ಪನ್ನಗಳ ತಯಾರಕರಾದ, ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್, CTRI-REG INDIA ದ ಮಾರ್ಗಸೂಚಿಗಳ ಅಡಿಯಲ್ಲಿ ಈ ಟ್ರಯಲ್‌ಗಳನ್ನು ನಡೆಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ಟ್ರಯಲ್‌ಗಳು ಯಶಸ್ವಿಯಾಗಿದೆ ಎಂದರು.

ಹಾಗೆಯೇ ಈ ಪ್ರಯೋಗಗಳು ಆಸ್ಟ್ರಿಯೋಆರ್ಥೈಟಿಸ್ (ಅಸ್ಸಿಸಂಧಿವಾತ), ರುಮಟಾಯ್ಸ್ ಆರ್ಥೈಟಿಸ್ (ರುಮಟಾಯ್ ಸಂಧಿವಾತ ಮತ್ತು ನಡೆಸಲಾಗಿದೆ ಎಂದರು. ಹೆಚ್ಚು ಜನ ಆರ್ಥೈಟಿಸ್ ಇಂದ ಬಳಲುತ್ತಿದ್ದಾರೆ, ಇದು ಜನಸಂಖ್ಯೆಯ 15% ರಷ್ಟಿದೆ. ಕ್ಯಾನ್ಸರ್, ಏಡ್ಸ್ ಮತ್ತು ಡಯಾಬಿಟೀಸಿಂತಲೂ ಇದು ಹೆಚ್ಚು ವ್ಯಾಪಕವಾಗಿದೆ. ಆರ್ಥೈಟಿಸ್ ಬಗೆಗೆ ಹೆಚ್ಚು ಅರಿವು ಮೂಡಿಸುವ ಅಗತ್ಯ ವಿದ ಏಕೆಂದರೆ ಇದರ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ. “ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯ ಬದಲಾವಣೆಗಳಿಂದಾಗಿ, ಇದೀಗ ವೈದ್ಯರು ಮಾತ್ರವಲ್ಲದೆ ಯುವಜನತೆಗೂ ಸಮಸ್ಯೆಯಾಗಿ ಕಾಡುತ್ತಿದೆ. ಅಧ್ಯಯನಗಳ ಪ್ರಕಾರ, 100 ಕ್ಕೂ ಹೆಚ್ಚು ಪ್ರಕಾರಗಳ ಆರ್ಥೈಟಿಸ್ ಇದೆ, ಅವುಗಳಲ್ಲಿ ಆಸ್ತಿಯೋ ಆರ್ಥೈಟಿಸ್, ರುಮಟಾಯ್ಡ್ ಆರ್ಥೈಟಿಸ್ ಮತ್ತು ಗೌಟ್ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಆರ್ಥೈಟಿಸ್ ಗೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ನಾವು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಔಷಧಿಗಳ ಮೂಲಕ ಉತ್ತಮ ನಿರ್ವಹಣಗೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್, ಆಧುನಿಕ ಸಂಶೋಧನೆಗಳೊಂದಿಗೆ ಅನುಭವಿ ಆಯುರ್ವೇದ ವೈದ್ಯರು ಮತ್ತು ವಿಜ್ಞಾನಿಗಳ ಸಹಯೋಗದೊಂದಿಗೆ ಮತ್ತು ಸುಧಾರಿತ R&D ಸಂಶೋಧನಾ ತಂತ್ರಗಳನ್ನು ಬಳಸಿಕೊಂಡು ಅಮೃತ ನೋನಿ ಅರ್ಥ್ ಪ್ಲಸ್ ಅನ್ನು ಅಭಿವೃದ್ಧಿಪಡಿಸಿದೆ. ಅತ್ಯುತ್ತಮವಾದ ಯಶಸ್ಸು ಸಾಧಿಸಿರುವ ಈ ಉತ್ಪನ್ನವು ಭಾರತದಲ್ಲಿ ಆಸ್ಟ್ರಿಯೋಆರ್ಥೈಟಿಸ್, ರುಮಟಾಯ್ ಆರ್ಥೈಟಿಸ್ ಮತ್ತು ಗೌಟ್ ನಿರ್ವಹಣೆಗಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಉತ್ಪನ್ನವಾಗಿ ಹೊರಹೊಮ್ಮಿದೆ. ಇದರ ವಿಶಿಷ್ಟ ಮತ್ತು ಪರಿಣಾಮಕಾರಿ ಸೂತ್ರದಿಂದಾಗಿ 30 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರು ತಮ್ಮ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಂತಹ ಕೀಲು ನೋವಿನ ಸಮಸ್ಯೆಗಳಿಗೆ ಗಮನಾರ್ಹ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 

ಈ ಉತ್ಪನ್ನದಲ್ಲಿ ಬಳಸಲಾದ ನೋನಿ ಹಾಗೂ ಔಷಧೀಯ ಗಿಡಮೂಲಿಕೆಗಳು ಅದರ ಜನಪ್ರಿಯತೆ ಮತ್ತು ಪರಿಣಾಮಕಾರಿತ್ರ್ಯಕ್ಕೆ ಕಾರಣವಾಗಿದೆ. ದೀರ್ಘಕಾಲೀನ ಕೀಲುನೋವಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದರು. 

SUMMARY | The company’s managing director A.K. shrinivas murthi said the double-bound and randomised human clinical trials related to the Amritnoni ortho question have been successful.Srinivasamurthy said.

KEYWORDS |  Amritnoni,  shrinivas, double bound,  trials, 

Leave a Comment