SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024
darshan thoogudeepa | ನಟ ದರ್ಶನ್ ತೂಗುದೀಪರವರಿಗೆ ಬೇಲ್ ಸಿಕ್ಕಿದೆ. ಆದರೆ ಅವರು ಇವತ್ತೆ ರಿಲೀಸ್ ಆಗುತ್ತಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವುದಾದರೆ, ಅದರ ವಿವರ ಹೀಗಿದೆ.
ಇವತ್ತು ಹೈಕೋರ್ಟ್ ನಟ ದರ್ಶನ್ ತೂಗುದೀಪರವರಿಗೆ ಹೆಲ್ತ್ ಮೆರಿಟ್ ಮೇಲೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ವೈದ್ಯಕೀಯ ಚಿಕಿತ್ಸೆಯ ಕಾರಣ ನೀಡಿದ್ದನ್ನ ಪುರಸ್ಕರಿಸಿದ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಬೇಲ್ ಸಿಕ್ಕ ತಕ್ಷಣ ದರ್ಶನ್ ರಿಲೀಸ್ ಆಗುವುದಿಲ್ಲ. ಅದಕ್ಕೆಂದೆ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಮೊದಲು ಬೇಲ್ ಆದೇಶದ ಪ್ರತಿಯನ್ನು ನ್ಯಾಯಾಲಯ ಸಂಬಂಧಪಟ್ಟ ಜೈಲಿಗೆ ಕಳಿಸಬೇಕು. ಅದರ ನಡುವೆ ಆರೋಪಿತರು ಜಾಮೀನಿನ ಷರತ್ತುಗಳನ್ನ ಪೂರ್ಣಗೊಳಿಸಬೇಕು.
ದರ್ಶನ್ ಪ್ರಕರಣದಲ್ಲಿಯು ನ್ಯಾಯಾಲಯದ ಆದೇಶವನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ದರ್ಶನ್ ಕಡೆಯುವರು ಈ ಆದೇಶವನ್ನು ತೆಗೆದುಕೊಂಡು ಹೋಗಿ ಜೈಲ್‌ಗೆ ನೀಡಬೇಕಾಗುತ್ತದೆ.
ಸಂಜೆ ಆರು ಗಂಟೆಯ ಒಳಗಾಗಿ ದರ್ಶನ್ ಕಡೆಯವರು ಆದೇಶ ಪ್ರತಿಯನ್ನು ಬಳ್ಳಾರಿಗೆ ತೆಗೆದುಕೊಂಡು ಹೋದರೆ, ಅಲ್ಲಿ ಜೈಲಿನ ಪ್ರಕ್ರಿಯೆ ಮುಗಿಸಿ ದರ್ಶನ್‌ರನ್ನ ಬಿಡುಗಡೆ ಮಾಡಲಾಗುತ್ತದೆ.
SUMMARY | darshan thoogudeepa , Actor Darshan Thoogudeepa got bail, he be released today,
KEYWORDS | darshan thoogudeepa , Actor Darshan Thoogudeepa got bail, he be released today,