SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 |
ಡಿವೈಡರ್ಗೆ ಕಾರು ಡಿಕ್ಕಿ ಪಲ್ಟಿ
ಭದ್ರಾವತಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಹೊಸ ಸೇತುವೆ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಅದೃಷ್ಟಕ್ಕೆ ಈ ಘಟನೆಯಲ್ಲಿ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ
ಮಳೆಗೆ ಕುಸಿದ ಸೇತುವೆ
ಭದ್ರಾವತಿಯಲ್ಲಿ ಮಳೆಯ ಅಬ್ಬರಕ್ಕೆ ಹಂಚಿನ ಸಿದ್ದಾಪುರ ಗ್ರಾಮದ ಸಮೀಪದ ಸೇತುವೆಯೊಂದು ಕುಸಿದು ಬಿದ್ದಿದೆ. ಇಲ್ಲಿನ ಭದ್ರಾಚಾನಲ್ ದಾಟಲು ಬಳಸುತ್ತಿದ್ದ ಸೇತುವೆ ಮಳೆಯ ನಡುವೆಯೇ ಕುಸಿದು ಬಿದ್ದಿದೆ. ಹಂಚಿನ ಸಿದ್ದಾಪುರ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಇದೀಗ ಮಳೆಗೆ ಕುಸಿದಿರುವ ಹಿನ್ನೆಲೆಯಲ್ಲಿ ಸಂಪರ್ಕ ಕಡಿತವಾಗಿದೆ.
ಸ್ಪೈಸ್ ಜೆಟ್ ಹಾರಾಟಕ್ಕೆ ಅಡ್ಡಿಯಾಗಿದ್ದೇನು?
ಅಕ್ಟೋಬರ್ ಹತ್ತರಿಂದ ಹಾರಾಟ ಆರಂಭಿಸಿದ್ದ ಸ್ಪೈಸ್ ಜೆಟ್ ವಿಮಾನ ನಿನ್ನೆ ಅನಿವಾರ್ಯ ಕಾರಣಗಳಿಂದ ವಿಮಾನ ಹಾರಾಟ ರದ್ದುಗೊಳಿಸಿದೆ. ವಿಮಾನ ಸಂಚಾರ ಕ್ಯಾನ್ಸಲ್ ಆಗಿದ್ದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಈ ನಡುವೆ ವಿಮಾನ ನಿಲ್ದಾಣದ ಮೂಲಗಿಳಿಂದಲೂ ಮಾಹಿತಿ ಸ್ಪಷ್ಟವಾಗಿಲ್ಲ
ಆಗುಂಬೆಯಲ್ಲಿ ಟ್ರಾಫಿಕ್ ಜಾಮ್
ದಸರಾ ಮುಗಿದು ಜನರು ಅವರರವರ ಕೆಲಸದ ಊರುಗಳಿಗೆ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಹಲವೆಡೆ ಟ್ರಾಫಿಕ್ ಜಾಸ್ತಿ ಇತ್ತು. ಅದರ ಬಿಸಿ ಆಗುಂಬೆ ಘಾಟಿಯಲ್ಲಿಯು ಕಾಣಿಸುತ್ತಿತ್ತು. ಹೆಚ್ಚು ವಾಹನಗಳ ಸಂಚಾರದಿಂದ ಆಗುಂಬೆ ಘಾಟಿಯಲ್ಲಿ ನಿನ್ನೆ ವಾಹನಗಳ ಓಡಾಟ ಎಂದಿಗಿಂತಲೂ ಜಾಸ್ತಿ ಇತ್ತು. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
SUMMARY | Shivamogga Fast news |Car hits divider overturns Bridge collapses due to rain SpiceJet shuts down flights Traffic jam in Agumbe
KEYWORDS | Shivamogga Fast news , Car hits divider overturns, Bridge collapses due to rain SpiceJet shuts down flights, Traffic jam in Agumbe