ಪ್ರಯಾಣಿಕರ ಗಮನಕ್ಕೆ! 23 ನೇ ತಾರೀಖು , ತಾಳಗುಪ್ಪ ಟ್ರೈನ್​ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ! ರೈಲ್ವೆ ಇಲಾಖೆ ಪ್ರಕಟಣೆ ತಿಳಿಯಿರಿ

Malenadu Today

KARNATAKA NEWS/ ONLINE / Malenadu today/ May 21, 2023 SHIVAMOGGA NEWS

ಪ್ರಯಾಣಿಕರ ಗಮನಕ್ಕೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯೊಂದನ್ನ ಹೊರಡಿಸಿದೆ. ಈ ಪ್ರಕಟಣೆಯಲ್ಲಿ  ತಾಳಗುಪ್ಪ- ಬೆಂಗಳೂರು(ನಂ.20652)  ಎಕ್ಸ್‌ಪ್ರೆಸ್ ರೈಲು ತುಮಕೂರುವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿದೆ. 

ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡ್ತಿದ್ದ ಕಾಡಾನೆ ಸೆರೆ

23ರಂದು ರೈಲು ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗ ತುಮಕೂರಿನ ಕ್ಯಾತಸಂದ್ರ ಬಳಿ ಮೇಲು ಸೇತುವೆ ನಿರ್ಮಾಣ ಮಾಡಲಾಗ್ತಿದೆ. ಅದರ ಪ್ರಮುಖ ಕಾಮಗಾರಿಯ ಕಾರಣಕ್ಕಾಗಿ ಮೇ 23ರಂದು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಕೆರೆಗೆ ಹಾರಿದ ನಾಲ್ಕು ಅವಳಿ ಜವಳಿ ಮಕ್ಕಳ ತಾಯಿ! ಘಟನೆಗೆ ಕಾರಣವಾಗಿದ್ದೇನು?

ಯಾವ್ಯಾವ ರೈಲುಗಳು ?.

ಯಶವಂತಪುರ-ಚಿಕ್ಕಮಗಳೂರು ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ತಾಳಗುಪ್ಪ- ಬೆಂಗಳೂರು(ನಂ.20652) (20652/Talguppa – KSR Bengaluru InterCity Express – Railway Enquiry) ಎಕ್ಸ್‌ಪ್ರೆಸ್ ರೈಲು ತುಮಕೂರುವರೆಗೆ ಮಾತ್ರ ಸಂಚರಿಸಲಿದೆ.

ಬೆಂಗಳೂರು- ಧಾರವಾಡ ಸಿದ್ಧಗಂಗ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಹೊರಡುವ ಬದಲಿಗೆ ತುಮಕೂರಿನಿಂದ ಹೊರಡಲಿದೆ. ಧಾರವಾಡದಿಂದ ಬೆಂಗಳೂರಿಗೆ ತೆರಳುವ ಬದಲು ಅರಸೀಕೆರೆಯಲ್ಲಿ ನಿಲ್ಲಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ತುಮಕೂರು ಮತ್ತು ಚಾಮರಾಜನಗರದ ನಡುವೆ ಸಂಚರಿಸುವ 07346 ಕ್ರಮ ಸಂಖ್ಯೆಯ ರೈಲು 45 ನಿಮಿಷ ತಡವಾಗಿ ಸಂಚರಿಸಲಿದೆ

17309 ಸಂಖ್ಯೆಯ ಯಶವಂತಪುರ-ವಾಸ್ಕೋಡಿಗಾಮ ರೈಲು ಸಹ 60 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ. 


ಸಾರ್ವಜನಿಕರಿಗೆ ಮಾಹಿತಿ! ನಾಳೆ ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!

ಹಳೆ ಸಿಟ್ಟಿಗೆ 6 ವರ್ಷದ ಬಾಲಕಿ ಫೋಟೋ ಮೇಲೆ ಅಶ್ಲೀಲ ವಿಕೃತಿ! ಮಹಿಳೆಗೆ ಕೋರ್ಟ್ ಶಿಕ್ಷೆ! ಸೋಶಿಯಲ್​ ಮೀಡಿಯಾದಲ್ಲಿ ಹೀಗೆಲ್ಲಾ ಮಾಡಬೇಡಿ ಹುಷಾರ್!

 

Share This Article