SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
20 ವರ್ಷದ ಯುವಕನಿಗೆ ಹೃದಯಾಘಾತ
ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ವಾಕ್ ಮಾಡುತ್ತಿದ್ದ 20 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಿಮ್ಸ್ನ ವಿದ್ಯಾರ್ಥಿ ಪ್ರಥ್ವಿ ಎಂಬಾತ ಸಾವನ್ನಪ್ಪಿರುವ ಯುವಕ. ಈತ 2 ನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ, ನಿನ್ನೆ ಹೆಲಿಪ್ಯಾಡ್ನಲ್ಲಿ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಅಲ್ಲಿಯೇ ವಾಕ್ ಮಾಡುತ್ತಿದ್ದರು ಇವರಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಅಲ್ಲದೆ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಯುವಕ ಪ್ರಥ್ವಿ ಮೃತಪಟ್ಟಿದ್ದರು
Palestine ಪ್ಲೆಕ್ಸ್ , ಕೊನೆಗೂ ದಾಖಲಾದ ದೂರು
ಶಿವಮೊಗ್ಗ ಜಿಲ್ಲೆ ಬಾವೈಕ್ಯತೆಯ ಕೇಂದ್ರ ಎನಿಸಿರುವ ಹಣಗೆರೆ ಕಟ್ಟೆಯಲ್ಲಿ ಪಾಲಿಸ್ತೈನಿ ಬೆಂಬಲಿತ ಪ್ಲೆಕ್ಸ್ ಹಾಕಿದ್ದ ಬಗ್ಗೆ ಮಾಜಿ ಗೃಹಸಚಿವರೇ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದರು. ಈ ಬಗ್ಗೆ ಗೃಹಇಲಾಖೆಗೂ ಮಾಹಿತಿ ನೀಡಿದ್ದರು. ಆದಾಗ್ಯು ಪ್ರಕರಣದ ಸಂಬಂಧ ಕ್ರಮ ಆಗಿರಲಿಲ್ಲ. ಇದೀಗ ಪ್ರಕರಣ ಕುರಿತಾಗಿ ಮಾಳೂರು ಪೊಲೀಸ್ ಠಾಣೆಯಲ್ಲಿ ಸುಮುಟೋ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ
ಮರಳಿಗಾಗಿ ಮರ್ಡರ್
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕುನಲ್ಲಿ ಮರಳಿನ ವಿಚಾರಕ್ಕೆ ಓರ್ವನನ್ನ ಕೊಲೆ ಮಾಡಲಾಗಿದೆ. ತುಂಗಭದ್ರಾ ನದಿಯಲ್ಲಿನ ಮರಳು ಸಾಗಾಟದ ಹಣದ ಹಂಚಿಕೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮರಿಗೊಂಡನಹಳ್ಳಿ ಹಾಗೂ ಕಡಕಟ್ಟೆ ಗ್ರಾಮದ ಜನರ ನಡುವೆ ಹೊಡೆದಾಟವಾಗಿದೆ. ಈ ವೇಳೆ ಓರ್ವನಿಗೆ ಇರಯಲಾಗಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆತನನ್ನ ಶಿವರಾಜ್ ಎಂದು ಗುರುತಿಸಲಾಗಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ