BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

BREAKING NEWS / Do you know who bjp candidate from Shivamogga Channabasappa (Chenni) is?

BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!
BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ-2023

ಕೊನೆಗೂ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ನಿಕ್ಕಿಯಾಗಿದೆ. ಟಿಕೆಟ್ ಕುತೂಹಲ ತಣಿದ ಬೆನ್ನಲ್ಲೆ ಇವತ್ತು ಶಿವಮೊಗ್ಗ ನಗರದಲ್ಲಿ ನಾಮಪತ್ರ ಸಲ್ಲಿಕೆಯ ಅಬ್ಬರ ಹಾಗೂ ಭರಾಟೆ ಕಾಣಲಿದೆ. 

ಶಿವಮೊಗ್ಗದಿಂದ ಚೆನ್ನಬಸಪ್ಪರಿಗೆ ಟಿಕೆಟ್

ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದಿರಿಸಿದ್ದ  ಶಿವಮೊಗ್ಗ ಬಿಜೆಪಿ  ಟಿಕೆಟ್ ಚನ್ನಬಸಪ್ಪರಿಗೆ ಸಿಕ್ಕಿದೆ. 

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಕಾರ್ಪೋರೇಟರ್ ಎಸ್.ಎನ್.ಚನ್ನಬಸಪ್ಪ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ.  ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿದೆ!

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಸಿದ್ದರಾಮಯ್ಯರ ವಿರುದ್ಧ ತಲೆಕಡಿವ ಹೇಳಿಕೆ!

ಕಾಂಗ್ರೆಸ್​ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋ ಮಾಂಸ ಭಕ್ಷಣೆ ವಿವಾದ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ  ಪ್ರತಿಭಟನೆ ನಡೆಸಿತ್ತು  

ಈ ವೇಳೆ ಚನ್ನಬಸಪ್ಪರವರು ಆಡಿದ್ದ ತಲೆ ಕಡಿಯುವ ಮಾತು ತೀವ್ರ ವಿರೋಧಕ್ಕೆ ಎಡೆಮಾಡಿಕೊಟ್ಟಿತ್ತು. ಕಾಂಗ್ರಸ್​ನಿಂದ ದೂರು ದಾಖಲಾಗಿ ಬಂಧನಕ್ಕೂ ಒಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದರು. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಈಶ್ವರಪ್ಪನವರ ಆಪ್ತ    

ನಗರಪಾಲಿಕೆಯನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಚನ್ನಬಸಪ್ಪ ಎಲ್ಲೆಡೆ ಚೆನ್ನಿ ಎಂದೇ ಕರೆಸಿಕೊಂಡವರು, ಈಶ್ವಪ್ಪನವರ ಆಶೀರ್ವಾದದಿಂದಲೇ ಒಂದೊಂದು ಹೆಜ್ಜೆ ಇಡುತ್ತಾ ಬಂದಿರುವ ಚೆನ್ನಿ,ಕೆಎಸ್​ಇ ಆಪ್ತ ಬಳಗದಲ್ಲಿ ಮೊದಲ ಲೈನ್​ನಲ್ಲಿ ನಿಂತವ್ರು

 ಚುನಾವಣಾ ರಾಜಕಾರಣದ ನಿವೃತ್ತಿ  ಸಂದರ್ಭದಲ್ಲಿಯು ಚೆನ್ನಬಸಪ್ಪ ಈಶ್ವರಪ್ಪನವರ ಪಕ್ಕದಲ್ಲಿ ನಿಂತಿದ್ದರು. ಈಶ್ವರಪ್ಪನವರ ಶಾಸಕ ಸ್ಥಾನದ ಆಡಳಿತಕ್ಕೆ ಶಿವಮೊಗ್ಗ ನಗರ ಪಾಲಿಕೆಯ ಮೇಲಿನ ಹಿಡಿತ ಅತ್ಯವಶ್ಯಕವಾಗಿತ್ತು. 

ಇದನ್ನ ಸಾಧ್ಯವಾಗಿಸಿದ್ದು ಚನ್ನಬಸಪ್ಪ ಎಂಬುದರಲ್ಲಿ ಅನುಮಾನವಿಲ್ಲ. ಆದಾಗ್ಯು, ಈ ನಡುವೆ ಅಭ್ಯರ್ಥಿಯಾಗಬೇಕು ಎನ್ನುವ ಈಶ್ವರಪ್ಪನವರು ಅವರ ಪುತ್ರನಿಗೆ ಟಿಕೆಟ್ ಕೇಳಿದ್ದು, ಆಪ್ತ ಚೆನ್ನಬಸಪ್ಪರಲ್ಲಿಯು ಬೇಸರ ಮೂಡಿಸಿತ್ತು ಎನ್ನಲಾಗಿತ್ತು. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಹಿಂದೂತ್ವವಾದಿ!

ಇನ್ನು ಚನ್ನಬಸಪ್ಪ ಶಿವಮೊಗ್ಗ ನಗರಸಭೆಯ ಅಧ್ಯಕ್ಷರಾಗಿದ್ದರು, ಆನಂತರ ಪಾಲಿಕೆಯಲ್ಲಿಯು ಅಧಿಕಾರವನ್ನು ಪಡೆದಿದ್ದರು. ಶಿವಮೊಗ್ಗ ನಗರಾಡಳಿತದ ಆಗುಹೋಗುಗಳಲ್ಲಿ ಸದಾ ಗುರಿತಿಸಿಕೊಳ್ತಿರುವ ಅವರು ಹಿಂದೂತ್ವವಾದಿ ಕೂಡ ಹೌದು, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿರುವ ಅವರು, ಹಿಂದೂ ವಿಚಾರದಲ್ಲಿ ಆಗಾಗ ಪ್ರಖರವಾಗಿ ಮಾತನಾಡಿದ್ದು ಇದೆ. 

ಗೋಪಿಸರ್ಕಲ್​ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ತಲವಾರ್ ಕೊಡ್ರೋ ಎಂದ ಮಾತು ಆ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. 

ಹಿಂದೂತ್ವಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಚನ್ನಬಸಪ್ಪರವರು, ಹರ್ಷನ ಕೊಲೆ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳಿಂದ ಆಕ್ರೋಶವನ್ನು ಎದುರಿಸಿದ್ದರು. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಲಿಂಗಾಯಿತ ಅಭ್ಯರ್ಥಿ

ಕುಟುಂಬ ರಾಜಕಾರಣವನ್ನು ವಿರೋಧಿಸಿದ್ದ ಚನ್ನಬಸಪ್ಪ, ಹಿಂದೇ ಶಿವಮೊಗ್ಗ ಗ್ರಾಮಾಂತರಕ್ಷೇತ್ರದ ಉಸ್ತುವಾರಿ ವಹಿಸಿದ್ದರು. ಆ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಟಿಕೆಟ್ ಕೊಡಬಾರದು ಎಂದು ತಾವು ನಿರ್ವಹಿಸ್ತಿದ್ದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. 

ಇನ್ನೂ ಶಿವಮೊಗ್ಗದಲ್ಲಿ ಲಿಂಗಾಯಿತ ಸಮುದಾಯದ ಮತ ನಿರ್ಣಾಯಕ ಸ್ಥಿತಿಯಲ್ಲಿದ್ದು, ಅದೇ ಸಮುದಾಯದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಅತ್ತ ಕಾಂಗ್ರೆಸ್ ಜೆಡಿಎಸ್​ ನಿಂದ ಲಿಂಗಾಯತ  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸ್ತಿದ್ದಾರೆ. 

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   

ಇವತ್ತು ನಾಮಪತ್ರ ಸಲ್ಲಿಕೆ 

 ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಬೆಳಗ್ಗೆ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ತೆರಳಿ, ರಾಮಣ್ಣ ಶೆಟ್ಟಿ  ಪಾರ್ಕ್, ಗಾಂಧಿಬಜಾರ್, ನೆಹರು ರಸ್ತೆ ಮೂಲಕ ಸಾಗಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 

ಇದನ್ನು ಸಹ ಓದಿ

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! ಕ

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,