SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ನಟ ದರ್ಶನ್ಗೆ ಸಿಕ್ಕ ರಾಜಾತಿಥ್ಯ ಪ್ರಕರಣದ ನಂತರ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಜೈಲು ಹಕ್ಕಿಗಳಿಗೆ ರಾಜಾತಿಥ್ಯ ನೀಡಿದ ದೊಡ್ಡ ಅಧಿಕಾರಿಗಳ ಗುಂಪನ್ನೆ ಅಮಾನತು ಮಾಡಲಾಗಿದೆ. ಈ ಕ್ರಮಗಳ ಪರಿಣಾಮವಾಗಿ ಜೈಲುಗಳಲ್ಲಿ ಬೀಡಿ ಸಿಗರೇಟಿಗಾಗಿ ಕೈದಿಗಳು ಪ್ರತಿಭಟನೆ ನಡೆಸಿದ ಘಟನೆಗಳು ಸಹ ನಡೆದಿದೆ. ಆದರೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇದೆಲ್ಲದಕ್ಕೂ ಮೀರಿದ ಘಟನೆಯೊಂದು ನಡೆದಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಹೊಡೆದಾಡಿದ್ದಾರೆ. ಅಷ್ಟೆ ಅಲ್ಲದೆ ಕಾರಾಗೃಹ ಸಿಬ್ಬಂದಿಗಳನ್ನ ಕೂಡ ಕೈದಿಗಳು ಹೆದರಿಸಿದ್ದಾರೆ. ಕಲ್ಲೂ ತೂರಾಟ ನಡೆಸಿದ್ದಾರೆ. ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ 21 ಮಂದಿ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ವಿಶೇಷ ಅಂದರೆ, ಇದೆಲ್ಲದಕ್ಕೂ ಕಾರಣವಾಗಿದ್ದು ಕೇವಲ ಬೀಡಿ ಸಿಗರೇಟು ಕೊಡದ ಸಿಟ್ಟಾ? ಖಂಡಿತ ಅಲ್ಲ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅರಾಜಕತೆ?
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ 12ನೇ ತಾರೀಖು ಅಕ್ಷರಶಃ ದೊಡ್ಡ ದೊಂಬಿ ನಡೆದಿದೆ. ಕಾವೇರಿ ವಿಭಾಗ ಹಾಗೂ ಶರಾವತಿ ವಿಭಾಗದ ಕೈದಿಗಳ ನಡುವೆ ಗ್ಯಾಂಗ್ ಫೈಟ್ (ವಾರ್ ಅಲ್ಲ) ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಜೈಲಿಗೆ ವಿಸಿಟ್ ಕೊಟ್ಟು ಕೈದಿಗಳ ಹೊಡೆದಾಟ ನಿಲ್ಲಿಸಿದ್ದಾರೆ. ಆ ಬಳಿಕ ಪರಿಶೀಲನೆ ನಡೆಸಿದಾಗ ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಒಂದು ವಿಚಾರ ಮನದಟ್ಟಾಗಿದೆ. ಹಾಗಾಗಿ ಆ ವಿಷಯವನ್ನು ತಕ್ಷಣವೇ ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಮೊದಲೇ ದರ್ಶನ್ ವಿಚಾರದಲ್ಲಿ ಕಂಗೆಟ್ಟಿದ್ದ ಕಾರಾಗೃಹ ಇಲಾಖೆ ತಕ್ಷಣವೇ ಶಿವಮೊಗ್ಗಕ್ಕೆ ರ್ನಾಟಕ ಕಾರಾಗೃಹ ಇಲಾಖೆಗೆ ನೂತನ ಡಿಐಜಿಯಾಗಿರುವ ಕೆ. ಸಿ. ದಿವ್ಯಶ್ರೀಯವರನ್ನ ಕಳುಹಿಸಿಕೊಟ್ಟಿದೆ.
ಶಿವಮೊಗ್ಗದಲ್ಲಿಯೇ ಕೆಲವು ದಿನಗಳಿಂದ ಉಳಿದುಕೊಂಡಿರುವ ಡಿಐಜಿಯವರು ಖುದ್ದು ಕೇಂದ್ರ ಕಾರಾಗೃಹದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಹಾಲಿ ಇರುವ ಅದೀಕ್ಷಕಿಯವರನ್ನ ವರ್ಗಾವಣೆ ಮಾಡಲಾಗಿದ್ದು, ಆ ಜಾಗಕ್ಕೆ ಈ ಹಿಂದೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡಿದ್ದ ಡಾ. ಪಿ ರಂಗನಾಥ್ ರವರನ್ನ ವರ್ಗಾವಣೆ ಮಾಡಲಾಗಿದೆ. ಇವತ್ತು ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಇಷ್ಟಕ್ಕೂ ಆ ವಿಚಾರವೇನು?
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆಗೆ ಕಂಡು ಬಂದ ಆ ವಿಚಾರವಾದರೂ ಏನು? ಈ ಪ್ರಶ್ನೆಯನ್ನ ಕೆದುಕುತ್ತಾ ಹೋದಾಗ ಸಿಕ್ಕ ಉತ್ತರ ಮತ್ತದೆ ರಾಜಾತಿಥ್ಯ! ಹೌದು, ಶಿವಮೊಗ್ಗ ಸೆಂಟ್ರಲ್ ಜೈಲ್ನಲ್ಲಿ ಕರಾವಳಿಯಿಂದ ಶಿಫ್ಟ್ ಆಗಿರುವ ನಟೋರಿಯಸ್ ಶರಣ್ ಪೂಜಾರಿ ಹಾಗೂ ಆತನ ಟೀಂಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಇದು ಇನ್ನೊಂದು ಟೀಂನ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಎಫೆಕ್ಟ್ ಎಂಬಂತೆ ಜೈಲ್ನಲ್ಲಿ ದೊಡ್ಡ ಗಲಾಟೆಯೇ ನಡೆದಿದೆ ಎಂಬುದು ಪೊಲೀಸ್ ಇಲಾಖೆ ಒಡಲಾಳದಲ್ಲಿ ದಾಖಲಾದ ಸತ್ಯವಾಗಿದೆ. ಇದಕ್ಕೆ ಕಾರಣ ಯಾರು? ಎಂಬುದನ್ನ ಸಹ ಶಿವಮೊಗ್ಗ ಪೊಲೀಸ್ ಇಲಾಖೆ ಗೃಹ ಇಲಾಖೆ ಹಾಗೂ ಕಾರಾಗೃಹ ಇಲಾಖೆ ತಿಳಿಸಿದೆ.
ಇವೆಲ್ಲದರ ನಡುವೆ ದೊಡ್ಡ ಕುರ್ಚಿಯಲ್ಲಿನ ವಹಿವಾಟಿನಿಂದಾಗಿ ತಳಮಟ್ಟದ ಹಾಗೂ ಕೈದಿಗಳ ಸಮೀಪ ಸಂಪರ್ಕದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳಿಗೆ ತೀರಾ ದೊಡ್ಡ ತೊಂದರೆಯಾಗಿದೆ. ಯಾಮಾರಿದ್ದರೇ ಅವರುಗಳ ಜೀವಕ್ಕೆ ಅಪಾಯ ಆಗುವ ಸನ್ನಿವೇಶವೂ ಇತ್ತು. ಅಷ್ಟರಲ್ಲಿ ಕಾರಾಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ತಪ್ಪು ತಿದ್ದುವ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಗೆ ಸಿಬ್ಬಂದಿಗಳ ಜೀವ ಅಪಾಯಕ್ಕೆ ಇಡುವಂತಹ ಅಪಾಯಕಾರಿ ವಹಿವಾಟನ್ನ ತಡೆಯುವ ಹಾಗೂ ಅಂತಹವರ ವಿರುದ್ಧ ಕ್ರಮಕ್ಕು ಮುಂದಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕುಸಿದು ಬಿದ್ದ ವ್ಯಕ್ತಿ ಸಾವು ತೀರ್ಥಹಳ್ಳಿ: ತಾಲೂಕಿನ ಬೇಗುವಳ್ಳಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಹಠಾತ್ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿದರಹಳ್ಳಿಯ ಶಾಮಣ್ಣ ಮೃತರಾದವರು. ಭಾನುವಾರ ರಾತ್ರಿ 11ಸುಮಾರಿಗೆ ನಡೆಯುತ್ತಿದ್ದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮೃತರು ಪಾಲ್ಗೊಂಡಿದ್ದು ಮೆರವಣಿಗೆ ಹೋಗುತ್ತಿದ್ದ ವೇಳೆ ಧಿಡೀರನೆಕುಸಿದು ಬಿದ್ದು ಸ್ಥಳದಲ್ಲಿ ಮೃತರಾಗಿದ್ದಾರೆ. ಮೆರವಣಿಗೆಯಲ್ಲಿ ಬಳಸಿದ್ದ ಡಿಜೆ ಶಬ್ದದಿಂದಾಗಿ ಹೃದಯ ಘಾತವಾಗಿರಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.