‘ಕಾಲ’ ತಂದಿಟ್ಟ ಸನ್ನಿವೇಶದಲ್ಲಿ 700 ಕಿಲೋಮೀಟರ್ ಸುತ್ತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ/ ಮನುಷ್ಯತ್ವ ಗೆಲ್ಲಿಸಿದ ಮಲೆನಾಡು!

ಬದುಕಿನ ದಿಕ್ಕನ್ನ ವಿದಿ ಬದಲಾಯಿಸುತ್ತೋ , ಹಣೆಬರಹ ಬದಲಾಯಿಸುತ್ತೋ ಅಥವಾ ಅದೃಷ್ಟವೆ ದಿಕ್ಕತಪ್ಪಿಸುತ್ತೋ  ಭಗವಂತನೇ ಬಲ್ಲ. ಆದರೆ ಕೆಲವೊಮ್ಮೆ ಮನುಷ್ಯತ್ವ ತನ್ನ ಪರೀದಿಯನ್ನೆ ಮೀರಿದಂತ ಪವಾಡ ಸೃಷ್ಟಿ ಮಾಡುತ್ತದೆ. ಅಂತಹದ್ದೊಂದು ಘಟನೆ ಶಿವಮೊಗ್ಗದ ಹೊಸನಗರ ದಲ್ಲಿ ನಡೆದಿದೆ. 

ನಡೆದಿದ್ದನ್ನ ಹೇಳುವುದಕ್ಕೂ ಮೊದಲು ಘಟನೆಯ ಪೂರ್ವಪರವನ್ನು ಹೇಳಿಬಿಡ್ತೀವಿ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಗೇರುಪುರದಲ್ಲಿರುವ ಹಿಂದುಳಿದ ವರ್ಗಗಳ ಇಂದಿರಾ ಗಾಂಧಿ ವಸತಿ ಶಾಲೆಯದು. ಅಲ್ಲಿಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್. ಆಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ತವಕದಲ್ಲಿದ್ದಳು, ಅವಳಲ್ಲಿ ಎಕ್ಸಾಮ್​ನ ಟೆನ್ಶನ್​ ಮಡುಗಟ್ಟಿತ್ತು, ಚೆನ್ನಾಗಿಯೆ ಓದಿದ್ದಳು, ದಿನ ಕಳೆದರೆ ಇಂಗ್ಷಿಷ್​ ಪರೀಕ್ಷೆಯಿತ್ತು. ಅಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಿವಿಗೆ ಬಿದ್ದಿತ್ತು, ತನ್ನೂರು ದೂರದ ಕೊಪ್ಪಳದ ಮನೆಯಿಂದ ಕರೆಯೊಂದು ಬಂದಿತ್ತು. ಮಗಳೇ ನಿಮ್ಮ ತಂದೆ ಹೋಗಿಬಿಟ್ಟರು ಎಂದಿತ್ತು ಆ ಕಡೆಯ ಧ್ವನಿ.. 

Malenadu Today

ನಾಳೆ ಅಂದರೆ ಪರೀಕ್ಷೆ, ಇಲ್ಲಿ ನೋಡಿದರೇ ಬದುಕು ಕೊಟ್ಟ ಅಪ್ಪನೇ ಇಲ್ಲ. ಆರ್ಶಿಯಾಳಿಗೆ ಭೂಮಿ ಕುಸಿದಂತಾಗಿತ್ತು. ಅವಳಲ್ಲಿ ಮಾತುಗಳಿರಲಿಲ್ಲ,  ಭವಿಷ್ಯದ ಪರೀಕ್ಷೆಯ ಆಸೆಯು  ಮಾಯವಾದ ಆಕೆಯ ಕಣ್ಣಲ್ಲಿ ತಂದೆಯ ನೆನಪು ಕಣ್ಣೀರಾಗುತ್ತಿತ್ತು. ಆದರೆ, ಶಾಲೆಯ ಶಿಕ್ಷಕರಿಗೆ ವಿದ್ಯಾರ್ಥಿನಿಯ ಭವಿಷ್ಯ ಕಾಣಿಸಿತು, ಪರೀಕ್ಷೆ ಬರೆಯಿದ್ದಿದ್ದರೇ ಹೇಗೆ, ಮತ್ತೆ ಕಟ್ಟು, ಓದು ಬರೀ, ಇದೆಲ್ಲಾ ತಾಪತ್ರಯದ ಕೆಲಸ, ಹಾಗಂತ ವಿದ್ಯಾರ್ಥಿನಿಯು ಪರೀಕ್ಷೆ ಬರೆಯುವ ಮನಸ್ಥಿತಿಯಲ್ಲಿದ್ಧಾಳಾ? ಅರ್ಥವಾಗಿಲಿಲ್ಲ! ಹೀಗಾಗಿ ವಿದ್ಯಾರ್ಥಿನಿಯನ್ನೆ ಟೀಚರ್ಸ್​ ಕೇಳಿದರು, ಏನಮ್ಮ ಹೇಗೆ ಮುಂದೆ, ಊರಿಗೆ ಹೊರಡ್ತಿಯಾ ? ಪರೀಕ್ಷೆ ಏನು ಮಾಡ್ತಿ? 

Malenadu Today

ವಿದ್ಯಾರ್ಥಿನಿ ಪರೀಕ್ಷೆ ಬರಿಯುತ್ತೇನೆ ಎನ್ನುತ್ತಾಳೆ, ವಿಚಾರ ತಿಳಿದುಕೊಂಡ ಶಿಕ್ಷಕರು ತಕ್ಷಣವೇ ಒಂದು ಒಮಿನಿ ವ್ಯವಸ್ಥೆ ಮಾಡುತ್ತಾರೆ. ಕೂಡಲೇ ವಿದ್ಯಾರ್ಥಿನಿಯನ್ನು ಕರೆದುಕೊಂಡು ಕೊಪ್ಪಳಕ್ಕೆ ಹೊರಡುತ್ತಾರೆ. ಸರಿಸುಮಾರು ಹೋಗಿ ಬರುತ್ತಾ ಒಟ್ಟು ಏಳನೂರು ಕಿಲೋಮೀಟರ್ ಪ್ರಯಾಣ. ಕೊಪ್ಪಳದ ಊರಿಗೆ ಹೋಗಿ, ಅಲ್ಲಿ ವಿದ್ಯಾರ್ಥಿನಿಗೆ ಆಕೆಯ ತಂದೆ ಅಬಿದ್ ರ ಅಂತಿಮ ದರ್ಶನ ಮಾಡಿಸುತ್ತಾರೆ ಶಿಕ್ಷಕರು. 

Malenadu Today

ಮಗಳಾಗಿ ತಂದೆಯ ಕೊನೆಯ ಕ್ಷಣದಲ್ಲಿ ಮಾಡಬೇಕಾದ ವಿಧಿವಿಧಾನಗಳನ್ನ ಮುಗಿಸಿಕೊಂಡು ಮತ್ತೆ ಒಮಿನಿ ಏರುತ್ತಾಳೆ ಆರ್ಶಿಯಾ, ಅಲ್ಲಿಂದ ಮತ್ತೆ ಹೊಸನಗರಕ್ಕೆ ಪರೀಕ್ಷೆ ಸಮಯಕ್ಕೆ ವಾಹನ ತಲಪುತ್ತದೆ. ಶಿಕ್ಷಕರ ಒತ್ತಾಸೆಗೆ ಒಮಿನಿ ಚಾಲಕನು ದೇಹದ ದಣಿವನ್ನೆಲ್ಲಾ ಬದಿಗೊತ್ತಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದ. 

Malenadu Today

ಅದಾಗಲೇ ಆರ್ಶಿಯಾ ಸ್ನೇಹಿತೆಯರು, ಪರೀಕ್ಷೆ ಬೇಕಿದ್ದ ಅವಶ್ಯಕತೆಗಳನ್ನು ಸಿದ್ದಪಡಿಸಿದ್ದರು, ಆರ್ಶಿಯಾ ಬರುತ್ತಲೆ ಗುರುವಿನ ಕಾಲಿಗೊಂಡು ನಮಸ್ಕರಿಸಿ, ಸೀದಾ ಎಕ್ಸಾಮ್ ಸೆಂಟರ್​ಗೆ ಹೋಗುತ್ತಾಳೆ. ಎರಡುವರೆ ತಾಸು ಕುಳಿತು ಪರೀಕ್ಷೆ ಬರುತ್ತಾಳೆ. ಹೊರಗೆ ಬರುತ್ತಲೇ , ಮೊಬೈಲ್​ನಲ್ಲಿ ವಿಡಿಯೋ ಕಾಲ್ ಹಚ್ಚುತ್ತಾಳೆ. ಆ ಕಡೆ ಅಪ್ಪನ ಅಂತ್ಯಕ್ರಿಯೆ ನಡೆಯುತ್ತಿರುತ್ತದೆ. ಮಗಳಿಂದಲೇ ಹೋಗಿ ಬಾ ಅಪ್ಪಾ..! ಎಂದು ಕಣ್ಣಾಲಿಯಲ್ಲಿ ನೀರು ತುಂಬಿಕೊಂಡು ಬಿಳ್ಕೊಡುತ್ತಾರೆ. ವಿದ್ಯಾರ್ಥಿನಿಯರು ಆರ್ಶಿಯಾ ಬುಜಕ್ಕೆ ಕೈ ಇಟ್ಟು ಸಂತೈಸುತ್ತಾರೆ. 

Malenadu Today

ಆರ್ಶಿಯಾಳಿಗಾಗಿ ಶಿಕ್ಷಕರು, ಊರಿನವರು, ವಿದ್ಯಾರ್ಥಿನಿಯರು , ಚಾಲಕ ಹೀಗೆ ಪ್ರತಿಯೊಬ್ಬರು ಒಂದಾಗಿ, ಅವಳ ದುಃಖದಲ್ಲಿ ಪಾಲ್ಗೊಂಡರು, ಸಮಾಧಾನಪಡಿಸಿದರು, ಅವಳಿಗೆ ದೈರ್ಯ ತುಂಬಿದರು, ಪರೀಕ್ಷೆಯನ್ನು ಬರೆಸಿದರು. ಮುಂದಾಗುವುದ ಬಲ್ಲವರ್ಯಾರು ಇಂದೇ ನಾಲ್ಕು ಜನರಿಗೆ ಉಪಕಾರವಾಗು ಎನ್ನುತ್ತಾ, ಬಡ ಹುಡುಗಿಯ ಬದುಕಿನ ಕ್ಷಣಕ್ಕೆ ನೆರವಾದವರು, ಚಿಕ್ಕದ್ದೊಂದು ಥ್ಯಾಂಕ್ಸ್​ ಕೂಡ ಬಯಸದೇ ತಮ್ಮ ಬದುಕಿನ ಚಟುವಟಿಕೆಯಲ್ಲಿ ನಿರತರಾದರು.. 

 Malenadu Today

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite Shivamogga, Koppal, Hosanagara, Father’s death, SSLC exam, student who wrote the exam, Arshia, Hosanagara Indira Gandhi Residential School, Shivamogga City, Malnad Humanity, Humanity, Student who wrote the exam …ಶಿವಮೊಗ್ಗ, ಕೊಪ್ಪಳ, ಹೊಸನಗರ, ಅಪ್ಪನ ಸಾವು, ಎಸ್​ಎಸ್​ಎಲ್​ಸಿ ಎಕ್ಸಾಮ್, ಪರೀಕ್ಷೆ ಬರೆದ ವಿದ್ಯಾರ್ಥಿನಿ, ಆರ್ಶಿಯಾ, ಹೊಸನಗರ ಇಂದಿರಾಗಾಂದಿ ವಸತಿಶಾಲೆ, ಶಿವಮೊಗ್ಗ ನಗರ, ಮಲೆನಾಡು ಮಾನವೀಯತೆ, ಮನುಷ್ಯತ್ವ, ಪರೀಕ್ಷೆ ಬರೆದ ವಿದ್ಯಾರ್ಥಿನಿ,

Leave a Comment