ಬೇಸಿಗೆಗೂ ಮೊದಲೇ ಕಾಡ್ಗಿಚ್ಚಿನ ನರ್ತನ! ಶಿವಮೊಗ್ಗವೂ ಸೇರಿದಂತೆ ಮಲೆನಾಡ ಜಿಲ್ಲೆಗಳ ಘಟ್ಟಗಳಲ್ಲಿ ಬೆಂಕಿ

Malenadu Today

MALENADUTODAY.COM  |SHIVAMOGGA| #KANNADANEWSWEB

ರಾಜ್ಯದಲ್ಲಿ ಅವಧಿಗೂ ಮೊದಲೇ ಬಿಸಿಗಾಳಿಯ ಆಗಮನವಾಗಿದೆ. ಅಲ್ಲದೆ ಬೇಸಿಗೆಯ ಬಿಸಿ ಅದಾಗಲೇ ತಟ್ಟುತ್ತಿದೆ. ಇದರ ನಡುವೆ ಅರಣ್ಯದಲ್ಲಿ ಕಾಡ್ಗಿಚ್ಚಿನ ಅಬ್ಬರ ಕಾಣ ತೊಡಗಿದೆ. ಶಿವಮೊಗ್ಗವೂ ಸೇರಿದಂತೆ ರಾಜ್ಯದ ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಹಾಸನದಲ್ಲಿ ಕಾಡ್ಗಿಚ್ಚಿನ ವರದಿಗಳು ಬರುತ್ತಿವೆ. 

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 5 ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಶನಿವಾರಸಂತೆ ಸಮೀಪದ ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯ ದೊಡ್ಡೆರೆ-ಆಲೂರುಸಿ ದ್ದಾಪುರ ಅರಣ್ಯದಲ್ಲಿ  ಕಾಡಿಚ್ಚು ಕಾಣಿಸಿ ಕೊಂಡಿದ್ದು, ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರುವ ಆಲೇಖಾನ್ ಗುಡ್ಡ ಮಂಡಲ ಸಮೀಪದ ತಾವೂರು ಮತ್ತು ತಣ್ಣಿಮಾನಿ ದಲ್ಲಿ ಎರಡೂರು ಎಕರೆ ಹುಲ್ಲುಗಾವಲು, ಉಡುಪಿ ಜಿಲ್ಲೆ ಪುತ್ತೂರು ತಾಲೂಕು ವ್ಯಾಪ್ತಿಯ ಕೋಡಿಂಬಾಡಿ ಗ್ರಾಮದ ಸೇಡಿಯಾಪು, ಕೊಡಿಪ್ಪಾಡಿಯ ಪಂಬತ್ತ ಮಜಲು ಎಂಬಲ್ಲೂ ಬೆಂಕಿ ಕಾಣಿಸಿಕೊಂಡಿದೆ.

ಇನ್ನೂ ಶಿವಮೊಗ್ಗದ ಚೋರಡಿ ಸಮೀಪ ಕಟ್ಟಿಗೆಹಳ್ಳದ ಕಾಡಿನಲ್ಲಿಯು ಬೆಂಕಿ ಕಾಣಿಸಿಕೊಂಡಿದ್ದರ ಬಗ್ಗೆ ವರದಿಯಾಗಿತ್ತು. ಅರಣ್ಯ ಸಿಬ್ಬಂದಿ ಫೈರ್ ಲೈನ್ ಸೇರಿದಂತೆ ಕಾಡ್ಗಿಚ್ಚನ್ನ ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದ್ದು, ಬೆಂಕಿ ನಂದಿಸಿದೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Share This Article