ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?

MALENADUTODAY.COM | SHIVAMOGGA  | #KANNADANEWSWEB

ಚಿಕ್ಕಮಗಳೂರು :  ಗುಹೆಯೊಳಗೆ ಸಿಲುಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ  ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಬಾಳೂರು ಪೊಲೀಸರು ಕೇಸ್ ದಾಖಲಿಸಿದ್ದಾರೆ. 

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

ಗುಹೆಯೊಳಗೆ ಸಾವನ್ನಪ್ಪಲು ಹೇಗೆ ಸಾಧ್ಯ!? 

ಮುಳ್ಳಂದಿ ಹಿಡಿಯಲು ಗುಹೆಯೊಳಗೆ (ಬಿಲ ಎನ್ನಬಹುದು) ತೆರಳಿದ್ದ ಇಬ್ಬರು, ಅಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಮೂಲದ ಗೊವಿಂದರಾಜು (೩೦) ವಿಜಯ್ ಕುಮಾರ್ (೨೯) ಇಬ್ಬರು ಮುಳ್ಳುಹಂದಿಯನ್ನು ಹಿಡಿಯಲು ಕಾಡಿಗೆ ಹೋಗಿದ್ಧಾರೆ. ಇವರ ಜೊತೆಗೆ ಇನ್ನಿಬ್ಬರು ಸಹ ತೆರಳಿದ್ದರು, ಮುಳ್ಳುಹಂದಿಯ ಇರುವಿಕೆಯನ್ನು ಕಂಡು ಅದು ಅಡಗಿರುವ ಸ್ಥಳವೊಂದನ್ನ ಸುತ್ತುವರಿದಿದ್ದಾರೆ. ಅಲ್ಲದೆ ಅದಕ್ಕೆ ಹೊರಗಡೆಯಿಂದ ಬೆಂಕಿ ಕೊಟ್ಟು, ಹೊಗೆ ಬಿಲದೊಳಗೆ ಹೋಗುವಂತೆ ಮಾಡಿದ್ದಾರೆ. ನಂತರ ಇಬ್ಬರು ಅದರೊಳಗೆ ಇಳಿದಿದ್ದಾರೆ. ಈ ವೇಳೇ ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕಾಫಿ ತೋಟಕ್ಕೆ ಕೆಲಸಕ್ಕೆ ಬಂದವರು ಶಿಕಾರಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಇನ್ನೂ ಇಬ್ಬರು  ಅಲ್ಲಿಂದ ಬಂದು ವಿಷಯತಿಳಿಸಿದ್ದರಿಂದ ಎಲ್ಲರಿಗೂ ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಇಬ್ಬರ ಮೃತದೇಹವನ್ನು ಸಹ ಆಚೆ ತೆಗೆದಿದ್ದಾರೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment