MALENADUTODAY.COM | SHIVAMOGGA NEWS |SAGARA TALUK
ಹಿಂದುತ್ವದ ವಿಚಾರವನ್ನೇ ಬಿಜೆಪಿ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೇಸ್ ಜೆಡಿಎಸ್ ಪಕ್ಷಗಳಿಗೆ ಅದರ ಬಗ್ಗೆ ಟಕ್ಕರ್ ಕೊಡುವುದಕ್ಕೆ ಹಿಂದೆಮುಂದೆ ಯೋಚಿಸುವಂತ ಪರಿಸ್ಥಿತಿ ಎದುರಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಬಿಜೆಪಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬ್ರಾಹ್ಮಣರನ್ನು ಸಿಎಂ ಮಾಡಲು ಹೊರಟಿದ್ದಾರೆ. ಪ್ರಹ್ಲಾದ್ ಜೋಷಿ ಸಿಎಂ ಆಗುವುದಾದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿರುವ ವಿಚಾರ ರಾಜಕೀಯ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗುತ್ತಿದೆ. ಧರ್ಮ ಜಾತಿಯ ವಿಚಾರದಲ್ಲಿ ಏನೂ ಮಾತನಾಡಿದರೂ ತಪ್ಪು ಎಂದು ಟ್ರೋಲ್ ಮಾಡುವ ವರ್ಗವೇ ಸೃಷ್ಟಿಯಾಗಿದೆ. ಇಂತಹ ಪ್ರಸ್ಥುತ ಸಂದರ್ಭದಲ್ಲಿ ದಿವಂಗತ ಸಾರೆಕೊಪ್ಪ ಬಂಗಾರಪ್ಪ ತುಂಬಾ ನೆನಪಾಗುತ್ತಾರೆ.
SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್ ಕೇಸ್
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ (s bangarappa) ತಮ್ಮ ರಾಜಕೀಯ ವೃತ್ತಿ ಬದುಕಿನಲ್ಲಿ ಏನೇ ನಿರ್ಧಾರಗಳನ್ನು ಕೈಗೊಂಡರೂ ಅದು ತಾತ್ವಿಕ ನೆಲೆಗಟ್ಟಿನಲ್ಲಿರುತ್ತಿತ್ತು. ಚುನಾವಣೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಬಂಗಾರಪ್ಪ ಚುನಾವಣೆ ಸಂದರ್ಭದಲ್ಲಿ ಮಾಡುವ ಮ್ಯಾಜಿಕ್ ಗಳು ಜನತೆಯನ್ನು ತೀವ್ರ ಕುತೂಹಲ ಕೆರಳಿಸುತ್ತಿತ್ತು.ಮ್ಯಾಜಿಕ ನ ರಿಸಲ್ಟ್ ಏನೇ ಬಂದರೂ, ಬಂಗಾರಪ್ಪ ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಇದಕ್ಕೆ ಉದಾಹರಣೆ ಬಂಗಾರಪ್ಪರು ಎದುರಿಸಿದ ಕೊನೆ ಚುನಾವಣೆಗಳು.
ವರ್ಣರಂಜಿತ ರಾಜಕಾರಣಿ ಎಂದೇ ಬಿಂಬಿತವಾಗಿರುವ ಬಂಗಾರಪ್ಪ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದವರು.ಬಂಗಾರಪ್ಪ ಏನೇ ನಿರ್ಧಾರಗಳನ್ನು ಕೈಗೊಂಡರೂ ಅದು ಅವರ ವೈಯಕ್ತಿಕ ನಿಲುವಾಗಿರುತ್ತಿತ್ತೇ ಹೊರತು,ಬೇರೆಯವರ ಒತ್ತಡ ಅದಕ್ಕಿರುತ್ತಿರಲಿಲ್ಲ. ಚುನಾವಣೆ ಸಂದರ್ಭಗಳಲ್ಲಿ ಬಂಗಾರಪ್ಪ ಮತದಾರರನ್ನು ಸೆಳೆಯಲು ಮಾಡುತ್ತಿದ್ದ ಮ್ಯಾಜಿಕ್ ಗಳು ಪ್ರತಿಸ್ಪರ್ಧಿಗಳ ನಿದ್ದೆಗೆಡಿಸುತ್ತಿತ್ತು. ಮೂರು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ರಾಜಕಾರಣವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಬಂಗಾರಪ್ಪ ತಮ್ಮ ರಾಜಕೀಯ ಬದುಕಿನ ಕೊನೆ ಚುನಾವಣೆಗಳಲ್ಲೂ ಮ್ಯಾಜಿಕ್ ನಿಂದಲೇ ಎಲ್ಲರನ್ನು ಆಕರ್ಷಿಸುತ್ತಿದ್ದರು.
ಟಾರ್ಗೆಟ್ ರಾಮಚಂದ್ರಾಪುರ : ವೆಜ್ ಅಂಡ್ ನಾನ್ ವೆಜ್ ನಡುವಿನ ಚುನಾವಣೆಯಾಗಿ ಮಾರ್ಪಡಿಸಿದ ಬಂಗಾರಪ್ಪ
2009 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಂಗಾರಪ್ಪ ರಾಮಚಂದ್ರಾಪುರ ಮಠವನ್ನು ಟಾರ್ಗೆಟ್ ಮಾಡಿದ್ದು ರಾಜಕೀಯ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿತ್ತು,ಮಠಮಾನ್ಯಗಳೇ ರಾಜಕೀಯವನ್ನು ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ,ಬಂಗಾರಪ್ಪ ಅಂತಹ ವ್ಯವಸ್ಥೆಯನ್ನೇ ದಿಕ್ಕರಿಸಿದ್ದರು.ಅದಕ್ಕೆ ಕಾರಣ ಕೂಡ ಇತ್ತು.ಬಂಗಾರಪ್ಪರ ನಿರ್ಧಾರಗಳಲ್ಲಿ ಸಾಮಾಜಿಕ ನ್ಯಾಯದ ತುಡಿತವಿತ್ತು. ಗೋಕರ್ಣ ಮಠವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಸರ್ಕಾರದ ಕ್ರಮವನ್ನು ಬಂಗಾರಪ್ಪ ಬಹಿರಂಗವಾಗಿಯೇ ಖಂಡಿಸಿದ್ದರು.
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಇನ್ನೂ ಮುಚ್ಚಿಲ್ಲ! ಸೈಲ್ ಇಡಿ ಹೇಳಿದ್ದೇನು!?
ರಾಮಚಂದ್ರಾಪುರ ಮಠಕ್ಕೆ ಸರ್ಕಾರ ನೀಡಿದ ದೇಣಿಗೆ ಬಗ್ಗೆ ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದ್ದರು.ಎಲ್ಲಾ ಜಾತಿ ಧರ್ಮ ಪಂಗಡಗಳ ಮಠಗಳಿಗೂ ಹಣವನ್ನು ನೀಡಬೇಕು.ತೆರಿಗೆದಾರರ ಹಣವನ್ನು ರಾಮಚಂದ್ರ ಮಠವೊಂದಕ್ಕೆ ಆ ಸಂದರ್ಭದಲ್ಲಿ ನೀಡಿದ್ದಕ್ಕೆ ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದ್ದರು.ಮಠವನ್ನು ಗುರಿಯಾಗಿಸಿಕೊಂಡು ಚುನಾವಣೆ ಎದುರಿಸಿದರು.ಚುನಾವಣೆ ಪ್ರಚಾರ ಮೇಲ್ವರ್ಗ ಮತ್ತು ಕೆಳವರ್ಗಗಳ ನಡುವಿನ ಸಂಘರ್ಷವೆಂದೇ ಬಿಂಬಿತವಾಗಿತ್ತು.ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಂಗಾರಪ್ಪ ಮಠವನ್ನು ಗುರಿಯಾಗಿಟ್ಟುಕೊಂಡೇ ಮತವನ್ನು ಕೇಳಿದ್ದು ನಿಜಕ್ಕೂ ಅಚ್ಚರಿ ಆತಂಕವನ್ನು ಸೃಷ್ಟಿಸಿತ್ತು.
ಬಂಗಾರಪ್ಪ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಉದ್ದೇಶದಿಂದ ಏನು ಬೇಕಾದರೂ ಮಾಡಬಹುದಿತ್ತು.ಆದರೆ ಸಾಮಾಜಿಕ ನ್ಯಾಯದ ಪರವಾದ ಧ್ವನಿಗೆ ಅವರು ಲೋಕಸಭಾ ಚುನಾವಣೆಯನ್ನೇ ಆಯ್ದುಕೊಂಡಿದ್ದರು. ಬಂಗಾರಪ್ಪರು ಈ ರೀತಿ ಚುನಾವಣೆಯನ್ನುಎದುರಿಸಿದರೆ ಬಹು ಅಂತರದಿಂದಲೇ ಸೋಲುತ್ತಾರೆ ಎನ್ನುವ ಲೆಕ್ಕಚಾರ ರಾಜಕೀಯ ವಲಯದಲ್ಲಿತ್ತು. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ ರಾಘವೇಂದ್ರನನ್ನು ಗೆಲ್ಲಿಸಲು ಇನ್ನಿಲ್ಲದ ತಂತ್ರಗಾರಿಕೆ ಮಾಡಿದ್ದರು. ಬಂಗಾರಪ್ಪ ಅಂದುಕೊಂಡಂತೆ ಆ ಚುನಾವಣೆಯಲ್ಲಿ ಸೋತರು. ಹಣದ ಮುಂದೆ ಬಂಗಾರಪ್ಪರ ಮ್ಯಾಜಿಕ್ ನಡೆಯಲಿಲ್ಲವಾದರೂ ಬಂಗಾರಪ್ಪ 4,29.890 ಮತಗಳನ್ನು ಪಡೆದಿದ್ದು ಇತಿಹಾಸವೇ ಸರಿ.ರಾಘವೇಂದ್ರ 4,82,783 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರು,
ಇವತ್ತು ಶಿವಮೊಗ್ಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿರವರ ಮಹತ್ವದ ಭೇಟಿ ! ಏನೇನಿರಲಿದೆ ಕಾರ್ಯಕ್ರಮ ! ವಿವರ ಇಲ್ಲಿದೆ
ಮತದಾರರನ್ನು ಸೆಳೆಯಲು ಹಣ ಹೆಂಡ ಸುರಿಯುವುದು, ತಳಕು-ಬಳುಕಿನ ಮಾತನಾಡುವುದನ್ನು ಎಲ್ಲಾ ರಾಜಕಾರಣಿಗಳು ಮಾಡುತ್ತಾರೆ.ಆದರೆ ಬಂಗಾರಪ್ಪ ಚುನಾವಣೆ ಸಂದರ್ಭದಲ್ಲೇ ಮತದಾರರನ್ನು ತರಾಟೆಗೆ ತೆಗೆದುಕೊಂಡಿದ್ದ ಸಂದರ್ಭ ಕಳೆದ ಲೋಕಸಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿತ್ತು.2008 ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಂಗಾರಪ್ಪ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಬಂಗಾರಪ್ಪರನ್ನು ಕ್ಷೇತ್ರದ ಜನತೆ ಸೋಲಿಸಿದ್ದರು.ಬರಗಾಲದ ಸಂದರ್ಭದಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಬತ್ತದ ಬೀಜವನ್ನು ವಿತರಿಸಿ ನೊಂದ ರೈತರಿಗೆ ನೆರವಾಗಿದ್ದ ಬಂಗಾರಪ್ಪರಿಗೆ ಇದು ನೋವು ಸಿಟ್ಟನ್ನು ತಂದಿತ್ತು.ಇದಾದ ನಂತರ 2009 ರ ಎಂಪಿ ಚುನಾವಣೆಯಲ್ಲಿ ಮತ್ತೆ ಶಿಕಾರಿಪುರ ಕ್ಷೇತ್ರಕ್ಕೆ ಬಂಗಾರಪ್ಪ ಹೋದ ಸಂದರ್ಭದಲ್ಲಿ ಮತದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬಂಗಾರಪ್ಪ ಮತದಾರರನ್ನು ಬೈಯ್ದರು ಮತದಾರರು ಅದನ್ನು ಅಶಿರ್ವಾದ ಎಂಬಂತೆ ಸ್ವೀಕರಿಸುತ್ತಿದ್ದದ್ದು ಅದು ಬಂಗಾರಪ್ಪರಿಗಿರುವ ಕಿಮ್ಮತ್ತನ್ನು ಎತ್ತಿತೋರಿಸುತ್ತಿತ್ತು.ಇದು ಒಂದು ಉದಾಹಣಯಷ್ಟೆ.ಬಂಗಾರಪ್ಪ ಜೀವನದಲ್ಲಿ ಏನೇ ನಿರ್ದಾರಗಳನ್ನು ಕೈಗೊಂಡರೂ,ಯಾರನ್ನು ನಿಷ್ಟೂರ ಮಾಡಿಕೊಂಡರು ಅದರಲ್ಲಿ ಅರ್ಥವಿರುತ್ತಿತ್ತು.ಆ ಸಂದರ್ಭದಲ್ಲಿ ಅವರ ನಿರ್ದಾರಗಳ ಬಗ್ಗೆ ಖಂಡನೆಗಳು ವ್ಯಕ್ತವಾಗುತ್ತಿದ್ದವಾದರೂ,ಅದರ ಒಳಮರ್ಮ ಅರಿತಾಗ ಬಂಗಾರಪ್ಪರ ಕಾಳಜಿ ಅರ್ಥವಾಗುತ್ತಿತ್ತು.ಇಂತಹ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕ ಇನ್ನಿಲ್ಲದಿರುವುದು ಜಿಲ್ಲೆಯ ದುರಂತವೇ ಸರಿ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
