THIRTHAHALLI : ಇಂದು ತೀರ್ಥಹಳ್ಳಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ

MALENADUTODAY.COM | SHIVAMOGGA NEWS | THIRTHAHALLI TALUK 

THIRTHAHALLI : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣ ವ್ಯಾಪ್ತಿಯಲ್ಲಿರುವ ಗಾಯತ್ರಿ ಮಂದಿರದಲ್ಲಿ ಇವತ್ತು ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಯಲಿದೆ. ಈ ಸಂಬಂಧ ನಿನ್ನೆ ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ  ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ವಿಜಯ್ ರೇವಣ್ಣ‌  ಹಿಂದೂ ರಾಷ್ಟ್ರ ಎಂದು ಹೇಳುವ ನಮ್ಮ ರಾಷ್ಟ್ರವನ್ನು ಈವರೆಗೂ ಹಿಂದೂ ರಾಷ್ಟ್ರ ಎಂದು ಯಾಕೆ ಘೋಷಣೆ ಮಾಡಿಲ್ಲ ಜಗತ್ತಿನಲ್ಲಿ 157 ಕ್ರೈಸ್ತ,52 ಮುಸ್ಲಿಂ,12 ಬೌದ್ಧ ಹಾಗೂ 1 ಯಹೂದಿ ರಾಷ್ಟ್ರಗಳಿವೆ. ಅದೇರೀತೀ ಹಿಂದುಗಳು ಹೆಚ್ಚಿರುವ ನಮ್ಮ ಭಾರತ ದೇಶವನ್ನು ಹಿಂದು ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ವಿಜಯ್ ರೇವಣ್ಣ‌ ಒತ್ತಾಯಿಸಿದರು.

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದುಗಳ ಪರವಾದ ಯಾವುದೇ ಸರ್ಕಾರ ಇಲ್ಲ. ಹಿಂದುಗಳ ದೇವಸ್ಥಾನವನ್ನು ಮಾತ್ರ ಸರ್ಕಾರಗಳು ವಶಪಡಿಸಿಕೊಳ್ಳುತ್ತದೆ. ಮಸೀದಿ, ಚರ್ಚ್, ವಶಪಡಿಸಿ ಕೊಳ್ಳುವುದಿಲ್ಲ, ದೇವಸ್ಥಾನಗಳ ಹಣವನ್ನು ಸರ್ಕಾರ ತೆಗೆದುಕೊಂಡು ಹೋಗುತ್ತದೆ ಎಂದು ದೂರಿದರು. 

ಎಷ್ಟೋ ಸಮಸ್ಯೆಗಳಿಗೆ ಪರಿಹಾರವೆಂದರೆ ಹಿಂದೂ ರಾಷ್ಟ್ರ ಸ್ಥಾಪನೆ. ಆದುದರಿಂದ ಹಿಂದೂ ರಾಷ್ಟ್ರದ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸಲು ಫೆ. 5 ರ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತೀರ್ಥಹಳ್ಳಿ ಗಾಯತ್ರಿ ಮಂದಿರದಲ್ಲಿ ಸಂಜೆ 5.30 ಗಂಟೆಗೆ ಹಿಂದೂ ರಾಷ್ಟ್ರ ಜಾಗೃತಿ ಸಭೆ ಆಯೋಜನೆ ಮಾಡಲಾಗಿದೆ ಎಂದರು.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment