ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಗೃಹಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಹರಿಹಾಯ್ದರು ಹೊಸನಗರದಲ್ಲಿ ಪಿಡಬ್ಲು ಇಲಾಖೆಯ ಕಾಮಗಾರಿಗಳನ್ನು ಜ್ಞಾನೇಂದ್ರರ ಸಂಬಂಧಿಯೊಬ್ಬರೇ ಮಾಡುತ್ತಿದ್ದಾರೆ. ಅವರು ಹೋಮ್ ಮಿನಿಸ್ಟರ್ ಆಗಿರುವುದಕ್ಕೆ ಅವೆಲ್ಲಾ ಹೊರ ಬರುತ್ತಿಲ್ಲ ಎಂದು ದೂರಿದ್ದಾರೆ.
ಫೆಬ್ರವರಿ 2ನೇ ವಾರದೊಳಗೆ ಆರಗ ಜ್ಞಾನೇಂದ್ರವರು ರಾಜಿನಾಮೆ ನೀಡಬೇಕು
ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಹಿಡಿಯುವುದಕ್ಕೂ ಆರಗ ಜ್ಞಾನೇಂದ್ರರಿಂದ ಲೆಟರ್ ತರಬೇಕು.ತೀರ್ಥಹಳ್ಳಿಯಲ್ಲಿ ಜ್ಞಾನೇಂದ್ರರ ಮಗ ಪಾರ್ಟ್ನರ್ ಇರೋ ಲೇಔಟ್ ಗೆ ಕಾಂಕ್ರೀಟ್ ರಸ್ತೆಯಾಗುತ್ತೆ.
”ತೀರ್ಥಹಳ್ಳಿ ಚುನಾವಣೆ ಸರ್ವೆ ರಿಪೋರ್ಟ್ ಕಿಮ್ಮನೆ ರತ್ನಾಕರ್ ಪರ/ ಆರಗ ಜ್ಞಾನೇಂದ್ರರಿಗೆ ಭೀತಿ”
ಸರ್ಕಾರಿ ಜಾಗವನ್ನು ಖಾಸಗಿಯನ್ನಾಗಿ ಮಾಡಿ ದಾಖಲೆ ಮಾಡಿಕೊಂಡಿದ್ದಾರೆ.ಇದರ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ. ಪೆಬ್ರವರಿ ಮೊದಲ ಇಲ್ಲವೇ ಎರಡನೇ ವಾರದೊಳಗೆ ಆರಗ ಜ್ಞಾನೇಂದ್ರ ಖುದ್ದಾಗಿ ರಾಜೀನಾಮೆ ನೀಡದೆ ಹೋದ್ರೆ ಇವೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನೆ ಮಾಡುವುದಾಗಿ ಕಿಮ್ಮನೆ ರತ್ನಾಕರ್ ಎಚ್ಚರಿಸಿದ್ದಾರೆ
ಅಡಿಕೆ ವಿಚಾರದಲ್ಲಿಯು ಅನ್ಯಾಯ
ಅಡಿಕೆ ವಿಚಾರದಲ್ಲೂ ಆರಗಾ ಜ್ಞಾನೇಂದ್ರರು ಬೆಳೆಗಾರರಿಗೆ ಅನ್ಯಾಯ ಎಸಗಿದ್ದಾರೆ.17 ಸಾವಿರ ಟನ್ ಅಡಿಕೆಯಯನ್ನು ಆಮದು ಮಾಡಿಕೊಂಡ ಅಡಿಕೆ ವಿಚಾರದಲ್ಲಿ ಪತ್ರಿಕೆಯೊಂದರಲ್ಲ ಸ್ವಪಕ್ಷೀಯರೇ ಪರ ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದ್ರು.ರಾಜಕೀಯ ಬದುಕಿಗಾಗಿ ಗೋಸುಂಬೆಗಳಂತೆ ಕೆಲಸ ಮಾಡಿದ್ರೆ ಹೇಗೆ ಎಲೆ ಚುಕ್ಕಾ ರೋಗ ಬಂದಾಗ ಅದಕ್ಕೆ ಪರಿಹಾರನೂ ಕೊಡಲಿಲ್ಲ ಔಷಧಿಯನ್ನು ಕಂಡು ಹಿಡಿಯಲಿಲ್ಲ. ಅವರದ್ದೆ ಪಕ್ಷದ ಕೇಂದ್ರದ ಮಂತ್ರಿ ಅಡಿಕೆ ಹಾನಿಕಾರಕ ಅದರಿಂದ ಕ್ಯಾನ್ಸರ್ ಬರುತ್ತೆ ಎಂದು ಸ್ಟೇಟ್ ಮೆಂಟ್ ಕೊಡ್ತಾರೆ.ಜ್ಞಾನೇಂದ್ರ ಅವರು ಇಲ್ಲಿ ಸಮರ್ಥನೆ ಮಾಡಿಕೊಳ್ತಾರೆ.ಇವರು ಬಗರ್ ಹುಕುಂ ಜಾಗದಲ್ಲಿ ಅಡಿಕೆ ಹಾಕ್ತಾ, ಉಳಿದ ರೈತರಿಗೆ ಅಡಿಕೆ ಬದಲು ಪರ್ಯಾಯ ಬೆಳೆ ಹಾಕಿ ಎಂದು ಹೇಳ್ತಾರೆ. ಸದನದಲ್ಲಿ ನೀಡಿದ ಹೇಳಿಕೆ ಬಗ್ಗೆ ಈಗ ಇಲ್ಲ ಎಂದು ಹೇಳುತ್ತಾರೆ. ಇಂತವರು ಅಡಿಕೆ ಬೆಳೆಗಾರರ ಪ್ರತಿನಿಧಿ ಎಂದು ವ್ಯಂಗ್ಯವಾಡಿದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
