ತೀರ್ಥಹಳ್ಳಿ ಕುಡುಮಲ್ಲಿಗೆ ಬಳಿಯಲ್ಲಿ ಕಾರು ಅಪಘಾತ/ ಘಟನೆಗೆ ಸಾಕ್ಷಿಯಾದ ಗೃಹಸಚಿವರು

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಸಮೀಪ ಇವತ್ತು ಬೆಳಗ್ಗೆಯೇ ಕಾರೊಂದು ಅಪಘಾತಕ್ಕೀಡಾಗಿತ್ತು. ಶಿವಮೊಗ್ಗದಿಂದ ಕಾರ್ಕಳಕ್ಕೆ ಹೋಗುವಾಗ ಅಪಘಾತಕ್ಕೀಡಾಡ ಕಾರು ರಸ್ತೆಗ ಬಿದಿಗೆ ಹೋಗಿ ಬಿದ್ದಿತ್ತು. 

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ, ಕ್ಷೇತ್ರಗಳು ಫಿಕ್ಸ್​/ ಎಷ್ಟು ಕ್ಷೇತ್ರಗಳಿವೆ, ಯಾವ್ಯಾವ ಊರುಗಳು ವ್ಯಾಪ್ತಿಯಲ್ಲಿ ಬರುತ್ತವೆ? ಕಂಪ್ಲೀಟ್​ ವಿವರ ಇಲ್ಲಿದೆ ಓದಿ

ಈ ವೇಳೆ  ಶಿವಮೊಗ್ಗ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನಂದ್ರ ಘಟನೆಯನ್ನು ಕಂಡು  ತಮ್ಮ ವಾಹನ ನಿಲ್ಲಿಸಿ ಕೆಳಕ್ಕೆ ಇಳಿದಿದ್ದಾರೆ. ಎನಾಯ್ತು, ಏನಾಯ್ತು ಎಂದು ವಿಚಾರಿಸಿದ್ದಾರೆ. ಅಲ್ಲದೆ ಅಲ್ಲಿದ್ದವರೆಲ್ಲಾ ಸೇರಿಕೊಂಡು ರಸ್ತೆ ಬದಿ ಗುಂಡಿಗೆ ಹೊರಳಿಕೊಂಡಿದ್ದ ಕಾರನ್ನು ಎತ್ತಿ ರಸ್ತೆಗೆ ಎಳೆದಿದ್ದಾರೆ. 

ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ

ಹತ್ತು ನಿಮಿಷದಲ್ಲಿ ಕಾರನ್ನು ಗುಂಡಿಯಿಂದ ಎತ್ತಿ, ರಸ್ತೆ ಮೇಲೆ ತರಲಾಯ್ತು, ಈ ವೇಳೆ ಅಲ್ಲಿಯೇ ಇದ್ದ ಆರಗ ಜ್ಞಾನೇಂದ್ರ, ಸದ್ಯ ಎನೂ ಆಗಿಲ್ಲ, ಆರಾಮಾಗಿ ಹೋಗಿಬನ್ನಿ, ನಿಧಾನವಾಗಿ ಹೋಗಿ ಎಂದು ಕಾರಿನಲ್ಲಿದ್ದ ಪ್ರಯಾಣಿಕರನ್ನು ಸಂತೈಸಿ ಕಳಹಿಸಿದ್ದಾರೆ. ಬಳಿಕ ಅವರು ಶಿವಮೊಗ್ಗಕ್ಕೆ ತೆರಳಿದ್ದಾರೆ. 

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಮಲೆನಾಡಿನ ರಾಜಕಾರಣಿಗಳು, ಘಟ್ಟದೂರುಗಳ ತಿರುವುಗಳಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ವಿಚಾರ ತಿಳಿದವರು. ಅಷ್ಟೆಅಲ್ಲದೆ, ಅಂತಹ ದುರ್ಘಟನೆಗಳ ಸಂದರ್ಭದಲ್ಲಿ ಮಲೆನಾಡಿಗನ ಸ್ಪಂದಿಸುವ ಅವರುಗಳ ರೀತಿ ಈ ಹಿಂದೆಯು ಹಲವು ಸಲ ವ್ಯಕ್ತವಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment