ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿಯನ್ನು ಒಳಗೊಂಡ, ಶಿವಮೊಗ್ಗ ಉಪವಿಭಾಗಕ್ಕೆ ವೃತ್ತಿಯಲ್ಲಿ ಭ್ರಷ್ಟಾಚಾರವೆಸಗಿದವರಿಗೆ ಬಡ್ತಿ ನೀಡಿ ಎಸಿಯಾಗಿ ನೇಮಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಶಿವಮೊಗ್ಗದ ಭೂಮಾಪಿಯ ಕಾರಣ ಎನ್ನಲಾಗುತ್ತಿದೆ.
ಶಿವಮೊಗ್ಗದಲ್ಲಿಯೇ ಕೆಲಸ ಮಾಡಿದವರು, ಲೋಕಾಯುಕ್ತ ಹಾಗೂ ಎಸಿಬಿಯಂತಹ ಸಂಸ್ಥೆಯಿಂದ ಟ್ರ್ಯಾಪ್ ಆದವರು ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವವರನ್ನ ಮೇಲಿಂದ ಮೇಲೆ ಬಡ್ತಿ ನೀಡಿ , ಎಸಿ ಜಾಗದಲ್ಲಿ ಕೂರಿಸಲಾಗುತ್ತದೆ. ಇದು ರಾಜ್ಯಸರ್ಕಾರಕ್ಕೂ ಕೆಟ್ಟ ಹೆಸರು ತಂದಿಡುತ್ತದೆ ಎಂದು ಶಿವಮೊಗ್ಗ ಪೀಪಲ್ಸ್ ಲಾಯರ್ಸ್ ಗೀಲ್ಡ್ ಆರೋಪಿಸಿದೆ. ಈ ಸಂಬಂಧ ರಾಜ್ಯಸರ್ಕಾರ ಜಿಲ್ಲಾದಿಕಾರಿ ಮೂಲಕ ಮನವಿ ಸಲ್ಲಿಸಿದೆ. ಮನವಿಯಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ ನೋಡಿ
ಮನವಿ ಪತ್ರದಲ್ಲಿ ಏನಿದೆ.
ವಿಷಯ: ಶಿವಮೊಗ್ಗ ಉಪ ವಿಭಾಗಕ್ಕೆ ಉಪ-ವಿಭಾಗ ಅಧಿಕಾರಿಯಾಗಿ ವರ್ಗಾವಣೆ ಅಥವಾ ಮುಂಬಡ್ತಿ ಪಡೆಯುವವರು ಲೋಕಾಯುಕ್ತದಡಿ ಪ್ರಕರಣ ದಾಖಲಾದವರು, ವಿಚಾರಣೆ ನಡೆಯುತ್ತಿರುವವರು, ಸೆಷನ್ಸ್ ನ್ಯಾಯಾಲಯದಲ್ಲಿ, ದೋಷಮುಕ್ತ ಆಗಿದಿದ್ದರು. ಉಚ್ಚ ನ್ಯಾಯಾಲಯದಲ್ಲಿ ಅಪೀಲ್ ಪೆಂಡಿಂಗ್ ಇರುವವರ ಮತ್ತು ಈ ಹಿಂದೆ ಶಿವಮೊಗ್ಗದಲ್ಲಿಯೇ ನೆಲವು ವರ್ಷ ಕೆಲಸ ನಿರ್ವಹಿಸಿದವರಿಗೆ, ಉಪ ವಿಭಾಗಾಧಿಕಾರಿಯಾಗಿ ನೇಮಿಸಬಾರದೆಂದು ಮತ್ತು ಸದರಿ ಹುದ್ದೆ ನೇರವಾಗಿ ಕೆ.ಎ.ಎಸ್ ಮಾಡಿರುವ ಅಥವಾ ಪ್ರೊಬೇಷನರಿ, ಐ.ಎ.ಎಸ್ ಆದವರನ್ನ ನೇಮಕ ಮಾಡಬೇಕೆಂದು ಒತ್ತಾಯಿಸಿ ನೀಡುತ್ತಿರುವ ಮನವಿ,
ಇದನ್ನು ಸಹ ಓದಿ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು
ಕಂದಾಯ ಇಲಾಖೆಯ ಶಿವಮೊಗ್ಗದ ಉಪ-ವಿಭಾಗವು ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲ್ಲೂಕುಗಳನ್ನು ಒಳಗೊಂಡಿದ್ದು, ಸದರಿ ಉಪವಿಭಾಗದ ಮೂರು ತಾಲ್ಲೂಕುಗಳು ವಿಭಿನ್ನವಾದ ಮತ್ತು ಅತ್ಯಂತ ಸೂಕ್ಷ್ಮ ತಾಲ್ಲೂಕುಗಳಾಗಿದ್ದು, ಮಲೆನಾಡಿನ ತೀರ್ಥಹಳ್ಳಿ ತಾಲ್ಲೂಕು ಬಹುಪಾಲು ಕೃಷಿ ಆಧಾರಿತವಾಗಿದ್ದರೆ ಭದ್ರಾವತಿ ಕೃಷಿಯೊಂದಿಗೆ ಕೈಗಾರಿಕ ಪ್ರದೇಶವಾಗಿರುತ್ತದೆ, ಇನ್ನು ಜಿಲ್ಲಾ ಕೇಂದ್ರವಾದ ಶಿವಮೊಗ್ಗ ಜಿಲ್ಲೆಯು ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಕೆಲಸಮಾಡುವ ಉಪ-ವಿಭಾಗಾಧಿಕಾರಿಗಳು ಅತ್ಯಂತ ಪ್ರಾಮಾಣಿಕ ಮತ್ತು ಧಕ್ಷ ಅಧಿಕಾರಿಗಳಾಗಿರಬೇಕು, ಇಲ್ಲಿ ಆಗಾಗ ತಲೆ ಎತ್ತುವ ಕೋಮು ಗಲಬೆಗಳಿಂದ ನಮ್ಮ ಊರು ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಇಂತಹ ಮತ್ತು. ಪ್ರದೇಶಗಳಲ್ಲಿ ಕೈಲ ಮಾಡುವವರು ನಿಸ್ಪಕ್ಷಪತಾವಾಗಿ ಮತ್ತು ನಿರ್ಧಾಕ್ಷ್ಯಣ್ಯ ಕ್ರಮ ಕೈಗೊಳ್ಳುವವರು ಮತ್ತು ಅಪ್ಪಟ ಪ್ರಮಾಣಿಕವಾಗಿರುವವರ ಅಗತ್ಯವಿರುತ್ತದೆ.
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
ಶಿವಮೊಗ್ಗ ನಗರವು ಅಂತ ವೇಗವಾಗಿ ಬೆಳೆಯುವುದರಿಂದ ಭೂ ಮಾಫಿಯಾದ ಲಾಬಿಗಳು ಜೋರಾಗಿಯೇ ನಡೆಯುತ್ತಿದ್ದು, ಹಲವು ಆಕೆ ಸರ್ಕಾರಿ ಭೂಮಿಯನ್ನು ಮೊಸದಿಂದ ಖಾತೆ ಮಾಡಿಕೊಂಡಿರುವ ಪ್ರಕರಣಗಳು ಬಳ್ಳಷ್ಟಿದೆ. ಇಂತಹ ಮೋಸದ ಖಾತೆಗಳನ್ನು ಮಾಡಿರುವಲ್ಲಿ ಶಾಮೀಲು ಆಗಿರುವ ಮತ್ತು ಇಂತಹ ಕೃತ್ಯಗಳಿಗೆ ಬೆಂಬಲಿಸುವ ಅಧಿಕಾರಿಗಳೇ ಹೆಚ್ಚು ಹೊಂದಿ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ನಿರ್ವಹಿಸಿದ್ದರಿಂದ ಬಾರಿ ಅಕ್ರಮಗಳು ನಡೆದಿರುತ್ತವೆ.
ಇದನ್ನು ಸಹ ಓದಿ : ಶಿವಮೊಗ್ಗ ನಗರ ನಾಗರಿಕರಿಗೆ ಸೂಚನೆ, ಹೆಚ್ಚಾಯ್ತು ನೀರಿನ ಕಂದಾಯ/ ಕಟ್ಟಿರೋರಿಗೂ ಮತ್ತೆ ಬಾಕಿ ಕಟ್ಟಲು ಸೂಚನೆ/ ಏನಿದೆ ಪ್ರಕಟಣೆಯಲ್ಲಿ
ಅಂತಹ ಅಧಿಕಾರಿಗಳಲ್ಲೆ ಒಬ್ಬರಿಗೆ ಈಗ ಸರ್ಕಾರವು ಬಡ್ತಿಯ ಮೇಲೆ ಬಡ್ತಿಯನ್ನು ನೀಡಿ ಅತ್ಯಂತ ಜವಾಬ್ದಾರಿಯ ಹುದ್ದೆಯಾದ, ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಿಸಲು ಹಲವು ಜನಪ್ರತಿನಿಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ನಡೆಸ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ನೂರಾರು ಕೂಟಿ ಬೆಲೆ ಬಾಳುವ ಭೂಮಿಯನ್ನು ಕಬಳಸುವ ದುರುದ್ದೇಶ ಹೊಂದಿರುವವರು ಈ ಲಾಬಿಯ ಹಿಂದಿದ್ದಾರೆ.
ಇದನ್ನು ಸಹ ಓದಿ ಬ್ಯಾರೀಸ್ ಮಾಲ್ ಲೀಜ್ ವಿಚಾರ ಪಾಲಿಕೆ ಅಜೆಂಡಾಕ್ಕೆ ಸೇರಲು ಚೆನ್ನಬಸರಪ್ಪರವರೇ ಕಾರಣ/ ಜೋರಾಯ್ತು ಕಿಕ್ ಬ್ಯಾಕ್ ಆರೋಪ
ತಮ್ಮ ಕರ್ತವ್ಯದ ಸಮಯದಲ್ಲಿ ಲಂಚ ಸ್ವೀಕರಿಸಿ ಲೋಕಾಯುಕ್ತ ಮತ್ತು ಎಸಿಬಿಯಿಂದ ಟ್ರ್ಯಾಪ್ ಆದ ಅಧಿಕಾರಿಗಳು ಹಿಂದೆ ಇಲ್ಲಿ ಕೆಲಸ ನಿರ್ವಹಿಸಿದ್ದು ಇಂತವರ ಮೇಲೆ ನೂರಾರು ಆರೋಪಗಳಿದ್ದು, ಸಾರ್ವಜನಿಕವಾಗಿ ಇಲಾಖೆ ಮತ್ತು ಸರ್ಕಾರದ ಮೇಲೆಯ ತಪ್ಪು ಅಭಿಪ್ರಾಯ ಬರುವ ರೀತಿ ಕಾರ್ಯ ನಿರ್ವಹಿಸಿದವರಿಗೆ ಮೇಲಿಂದ ಮೇಲೆ ಬಡ್ತಿಗಳನ್ನು ನೀಡಿ ಮತ್ತೆ ಇಲ್ಲಿಯೇ ಆಯಕಟ್ಟು ಸ್ಥಳಗಳ ಪೋಸ್ಟಿಂಗ್ ನೀಡಿದಲ್ಲಿ ಸರ್ಕಾರವೆ ಭ್ರಷ್ಟಚಾರಕ್ಕೆ ಪ್ರೋತ್ಸಾಯಿಸಿದಂತೆ ಆಗುತ್ತದೆ,
ಇದನ್ನ ಸಹ ಓದಿ : ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?
ಶಿವಮೊಗ್ಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿಯ ಭೂಮಿಗೆ ಬಂಗಾರದ ಬೆಲೆ ಬಂದಿರುವುದರಿಂದ ಹಲವಡೆ ಸರ್ಕಾರಿ ಭೂಮಿಯನ್ನ ಮತ್ತು ಇನಾಂ ಜಮೀನುಗಳನ್ನು ಫೇಕ್ ಖಾತೆಯ ಮೂಲಕ ಪ್ರಭಾವಿಗಳ ಹೆಸರಿಗೆ ಖಾತೆ ಮಾಡಿಕೊಟ್ಟರುವ ಆರೋಪಗಳಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆಯನ್ನು ನಡೆಸಬೇಕಾಗಿದೆ. ಆದರೆ ಇಂತಹ ಕೃತ್ಯಗಳಲ್ಲಿ ತೊಡಗಿದ ಭ್ರಷ್ಟರಾಗಿರುವ ಅಧಿಕಾರಿಗಳನ್ನೆ ಮತ್ತೆ ಶಿವಮೊಗ್ಗ ಉಪ-ವಿಭಾಗಕ್ಕೆ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲು ಕೆಲವು ಜನಪ್ರತಿನಿಧಿಗಳು ರಾಜಕಾರಣಿಗಳು ಮತ್ತು ಭೂಮಾಪಿಯದಲ್ಲಿರುವವರು ಹುನ್ನಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ, 10-15 ವರ್ಷಗಳಿಂದಲು ಒಂದೆ ಊರಿನಲ್ಲಿ ಇದ್ದು 6-7 ತಿಂಗಳು ನೆಪ ಮಾತ್ರಕ್ಕೆ ಬೆರೆಡೆ ವರ್ಗಾವಣೆ ಆಗಿ ಮತ್ತೆ ಡೆಪ್ಟೇಷನ್ ಹೆಸರಿನಲ್ಲಿ ಇಲ್ಲಿಯೇ ಕೆಲಸ ನಿರ್ವಹಿಸಿ ಕಡು ಭ್ರಷ್ಟರಾಗಿರುವವರನ್ನು ಮತ್ತೆ ಇಲ್ಲಿಯೇ ಭಡ್ತಿ ನೀಡಿ ಉನ್ನತ ಹುದ್ದೆಗಳನ್ನು ನೀಡುತ್ತಿರುವುದರಿಂದ ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರವು ತಾಂಡವಾಡುತ್ತಿದೆ.
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
ಆದ್ದರಿಂದ, ಇಲ್ಲಿ ಹಿಂದೆ ಕೆಲಸ ನಿರ್ವಹಿಸಿದವರು, ಲೋಕಾಯುಕ್ತ, ಎಸಿಬಿ ಯಿಂದ ಟ್ರ್ಯಾಪ್ ಆದವರು, ಇನ್ನು ವಿಚಾರಣೆ ಮತ್ತು ಪ್ರಕರಣಗಳನ್ನು ಪೆಂಡಿಗ್ ಹೊಂದಿದವರನ್ನ, ಭ್ರಷ್ಟಚಾರ ಆರೋಪ ಹೊತ್ತವರನ್ನು ಮತ್ತು ಸುಧೀರ್ಘ ಕಾಲ ಇಲ್ಲಿ ಸೇವೆ ಸಲ್ಲಿಸಿದರಿಗೆ ಜವಬ್ದಾರಿಯುತವಾದ ಸ್ಥಾನವಾದ ಶಿವಮೊಗ್ಗ ಉಪ-ವಿಭಾಗದ ಸ್ಥಾನವನ್ನು ನೀಡಬಾರದು ಮತ್ತು ಹಲವು ವರ್ಷಗಳಿಂದ ಒಂದೇ ಊರಿನಲ್ಲಿ ಸೇವೆ ಸಲ್ಲಿಸುತ್ತಿರುವ
ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಜಿಲ್ಲೆಯಿಂದ ಬೇರೆ ಅಲ್ಲಿಗೆ ವರ್ಗಾವಣೆ ಮಾಡುವ ಮೂಲಕ ಜನಸಮಾನ್ಯರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕಾಗಿ ಮತ್ತು ಶಿವಮೊಗ್ಗ ಉಪ ವಿಭಾಗಕ್ಕೆ ಒಬ್ಬರು ನೇರ ಕೆಎಎಸ್ ಅಥವಾ ಎಎಎಸ್ ಆದವರನ್ನು ವಿಭಾಧಿಕಾರಿಯಾಗಿ ನೇಮಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
